ಗದಗ : ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ಆಗಿದೆ ಎಂದು ಗದಗನಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ ಗದಗ ಜಿಲ್ಲೆಗೆ ಡಬ್ಬಾ ವೆಂಟಿಲೇಟರ್ ಗಳು ಪೂರೈಕೆ ಮಾಡಿದ್ದಾರೆ ಜಿಲ್ಲೆಗೆ ವೆಂಟಿಲೇಟರ್ ಬಂದು ವಾರ ಕಳೆದರೂ ಸೇವೆಗೆ ಸಿಗುತ್ತಿಲ್ಲ ವೆಂಟಿಲೇಟರ್ ಗಳಿಗೆ ಕನೆಕ್ಟರ್ ಇಲ್ಲ, ಆಕ್ಸಿಜನ್ ಸೆನ್ಸಾರ್ ಇಲ್ಲ, ಹೀಗಾಗಿ ಇವೆಲ್ಲಾ ಡಬ್ಬಾ ವೆಂಟಿಲೇಟರ್ ಹಾಗೇ ಬಿದ್ದಿವೆ ಇದೇ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಅಳವಡಿಸಿದರೆ ಸೋಂಕಿತರು ಮೃತ ಪಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಕಳಪೆ ಗುಣಮಟ್ಟದ ವೆಂಟಿಲೇಟರ್ ಖಾಲಿ ಡಬ್ಬಿಗಳಾಗಿವೆ ಇದರಿಂದ ರಾಜ್ಯದಲ್ಲಿ ನೂರಾರು ಜನ ಸಾಯಿಯುತ್ತಿದ್ದಾರೆ, ಪಿಎಂ ಕೇರ್ ಮುಖಾಂತರ ಡಬ್ಬಾ ವೆಂಟಿಲೇಟರ್ ಖರೀದಿ ಮಾಡಲಾಗಿದೆ ಇಂಥಹ ಕಳೆದ ವೆಂಟಿಲೇಟರ್ ನೀಡಿ ಜನರ ಜೀವ ತೆಗೆಯುತ್ತಿದ್ದಾರೆ. ಜೊತೆಗೆ ಅಮಾನವೀಯವಾದ ಭ್ರಷ್ಟಾಚಾರ ನಡೆದಿದೆ ಕಳಪೆ ಗುಣಮಟ್ಟದ ವೆಂಟಿಲೇಟರ್ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಮರದ ಮೇಲೆ 11 ದಿನ ಐಸೋಲೇಟ್ ಆದ ವಿದ್ಯಾರ್ಥಿ – ಹಳ್ಳಿಗಾಡಿನ ಕರಾಳ ನೋಟ
ದೇಶ ವ್ಯಾಪ್ತಿ ಭ್ರಷ್ಟಾಚಾರ ಆಗಿರೋದರಿಂದ ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಎಂದು ಶಾಸಕ ಎಚ್ ಕೆ ಪಾಟೀಲ್ ಒತ್ತಾಯಿಸಿದ್ದಾರೆ.
ವರದಿ: ದಾವಲಸಾಬ ತಾಳಿಕೋಟಿ ಗದಗ