ಸೋಂಕಿತರಿಂದ ವಿಡೀಯೋ ಮೂಲಕ ಅಳಲು
ಮಡಿಕೇರಿ: ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಹಳಸಿದ ಅನ್ನವನ್ನು ವಿತರಣೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ವಿಡಿಯೋ ಮೂಲಕ ಸೋಂಕಿತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದಿನೇ ದಿನೇ ಏರುತ್ತಿರುವ ಕೊರೊನಾ ಸೋಂಕಿಗೆ ಜನರು ತತ್ತರಿಸಿಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ದಿನ ಒಂದಕ್ಕೆ 500 ರಿಂದ 600 ಕೊರೊನಾ ಪಾಸಿಟಿವ್ ಕೇಸುಗಳು ಕಂಡುಬರುತ್ತಿದ್ದು, ತೀವ್ರ ಆರೋಗ್ಯ ಸಮಸ್ಯೆ ಉಂಟಾದವರು ಒಂದು ಬೆಡ್ ಗೆ ತಡಕಾಡುವ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲಿ ಏರ್ಪಟ್ಟಿದೆ.
ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ತಮ್ಮ ಸಂಬಂಧಿಕರು, ಸಹೋದರರಿಗೆ ಬೆಡ್ ಕೊಡಿಸಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಜನರು ತಮ್ಮಕಡೆಯವರಿಗೆ ಆರೋಗ್ಯ ತೀರ ಹದಗೆಟ್ಟಿದೆ ದಯಮಾಡಿ ಒಂದು ಬೆಡ್ ವ್ಯವಸ್ಥೆಮಾಡಿಕೊಡಿ ಎಂದು ಇರುವ ಪ್ರಭಾವ ಬಳಸಲು ಹೊರಟಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಇರಲಿ ಸರಿಯಾದ ಊಟವು ಸಿಗುತ್ತಿಲ್ಲ ಎಂದು ಸೋಂಕಿತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಇದನ್ನೂ ಓದಿ :ಕೋವಿಡ್ ವಾರಿಯರ್ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ ಅರ್ಚಕರು!!
ಪಾಸಿಟಿವ್ ಬಂದ ಒಳರೋಗಿಗಳಿಗೆ ಅಸ್ಪತ್ರೆಗಳಲ್ಲೇ ಊಟ ಬಿಸಿನೀರು ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ಇದೀಗ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರೆ ಒಳಗಿನ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.
ಮಡಿಕೇರಿ ನಗರದಲ್ಲಿ ಇರುವ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ ಹತ್ತು ಗಂಟೆಯಾದರೂ ಸೋಂಕಿತರಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಹತ್ತು ಗಂಟೆಗೆ ಆಹಾರ ಬಂದರೂ ಹಳಸಿದ ಅನ್ನ ಕೊಡುತ್ತಿದ್ದಾರೆ. ರಾತ್ರಿ ಹತ್ತುಗಂಟೆಗೆ ಊಟ ಕೊಡುತ್ತಿದ್ದೀರಲ್ಲ ಇದು ಸರಿನಾ ಎಂದು ರೋಗಿಯೊಬ್ಬರು ಊಟಕೊಡಲು ಬಂದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ. ಕೊಟ್ಟರು ಊಟ ಹಳಸಿಹೋಗಿರುತ್ತದೆ. ಹೀಗಾಗಿ ಅಲ್ಲಿಯ ಸೋಂಕಿತರು ರೋಗಿಗಳು ಊಟ ಕೊಟ್ಟ ಎರಡು ನಿಮಿಷಕ್ಕೆ ಎಲ್ಲರೂ ಊಟ ಎಸೆಯಬೇಕಾಯಿತ್ತೆಂದು ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೋಂಕಿತ ರೋಗಿಗಳಲ್ಲಿ ಬಹುತೇಕರಿಗೆ ಶುಗರ್ ಇರುವುದರಿಂದ ಹತ್ತು ಗಂಟೆಗೆ ಹಳಸಿದ ಅನ್ನ ಕೊಟ್ಟರೆ ಹೇಗೆ ತಿನ್ನಲು ಸಾಧ್ಯ ಎಂದು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿ ಕೋವಿಡ್ ಆಸ್ಪತ್ರೆಯ ಕರ್ಮಕಾಂಡವವನ್ನು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಸಾಕಷ್ಟು ಹಣ ಕೋವಿಡ್ ಸೋಂಕಿತರಿಗೆ ಖರ್ಚುಮಾಡುತ್ತಿದ್ದಾರೆ. ಸಾಕಷ್ಟು ಬಿಲ್ ಅನ್ನು ಅಸ್ಪತ್ರೆಯವರು ಮಾಡುತ್ತಾರೆ. ಆದರೆ ಸೋಂಕಿತರಿಗೆ ಸರಿಯಾದ ಊಟದ ವ್ಯವಸ್ಥೆಯೇ ಇರುವುದಿಲ್ಲ ಎಂದು ಸೋಂಕಿತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.