ಗದಗ : ಸಮಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗದೇ ಮೂವರ ಸಾವನ್ನಪ್ಪಿದ ಘಟನೆ ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಜರುಗಿದೆ.
ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದು ವೆಂಟಿಲೇಟರ್ ಅಗತ್ಯವಿದೆ ಎಂದು ಹೇಳಿದ್ದ ವೈದ್ಯರು ಆದರೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿನ ವೆಂಟಿಲೇಟರ್ ಭರ್ತಿಯಾದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ವೆಂಟಿಲೇಟರ್ ಖಾಲಿ ಇಲ್ಲ ಅಂತಾ ಹೇಳಿದ್ದ ಜಿಮ್ಸ್ ವೈದ್ಯರು ಇದರಿಂದ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದರು. ಕಸ್ತೂರಿ, ನಿಲ್ಲವ್ವ ಎಂಬಿಬ್ಬರು ಮಹಿಳೆಯರು, ಹಾಗೂ ಕನಕಪ್ಪ ಎನ್ನುವರು ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ ದೃರ್ದೈವಿಗಳು.
ಇನ್ನು ನಾಲ್ಕು ಜನರಿಗೆ ತೀವ್ರವಾಗಿ ವೆಂಟಿಲೇಟರ್ ಅವಶ್ಯಕತೆ ಇದೆ ಅಂತಾ ಹೇಳಿದ್ದ ವೈದ್ಯರು ಈಗಾಲೇ ನಾಲ್ಕು ಜನರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ನಿನ್ನೆಯಿಂದ ವೆಂಟಿಲೇಟರ್ ಹುಡುಕಾಟಕ್ಕೆ ಪರದಾಟ ನಡೆಸಿದ್ದ ಕುಟುಂಬಸ್ಥರು. ಆದ್ರೂ ವೆಂಟಿಲೇಟರ್ ಬೆಡ್ ಸಿಕ್ಕಿಲ್ಲ. ಹೀಗಾಗಿ ಕೊನೆಗೆ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದರು.
ಕಣ್ಣೆದುರೇ ನಡೆದ ಈ ಸಾವಿನಿಂದ ಕುಟುಂಬಸ್ಥರು ಕಂಗಾಲಾದರೆ, ಮೂರು ಜೀವ ನರಳಾಡಿ ಸತ್ತದ್ದನ್ನು ಕಂಡು ನರ್ಸ್‌ಗಳೂ ಕಣ್ಣೀರಾದರು.
ವರದಿ: ದಾವಲಸಾಬ ತಾಳಿಕೋಟಿ