ಪೊಲೀಸರು ವ್ಯಾಪಾರ ಮಾಡೋಕೆ ಬಿಡ್ತಿಲ್ಲ , ಎಲ್ಲಿ ಹೋಗಿ ಸಾಯಬೇಕು ನಾವು?

ಬೆಂಗಳೂರು : ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಲಾಕ್‌ಡೌನ್‌ ಜಾರಿ ಮಾಡಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಬೀದಿಬದಿ ವ್ಯಾಪಾರ ಮಾಡುವ ಹಣ್ಣು – ತರಕಾರಿ ವ್ಯಾಪಾರಿಗಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ವ್ಯಾಪರ ನಡೆಸೆದಂತೆ ತಾಕೀತು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬೆಂಗಳೂರಿನ‌ ಗಾಂಧಿ‌ ಬಜಾರ್ ಹಾಗೂ ಎನ್.ಆರ್.ಕಾಲೋನಿಯಲ್ಲಿ ಪೋಲೀಸರು ಹಣ್ಣು , ತರಕಾರಿ‌, ಹೂವು ಮಾರುವ ಬೀದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡಲು ಬಿಡುತ್ತಿಲ್ಲ. ಈ ಸರ್ಕಾರ ಯಾವ ಪಾರಿಹಾರನು ಕೊಡಲ್ಲ , ದುಡಿಯಕ್ಕು ಬಿಡಲ್ಲ‌ ಅಂದರೆ‌ ಸಾಯಬೇಕೆ ? ಎಂದು ವ್ಯಾಪಾರಿ ವನಜಾಕ್ಷಿ ಪ್ರಶ್ನಿಸಿದ್ದಾರೆ.

ಹೂವು ಹಣ್ಣು ವ್ಯಾಪಾರ ಮಾಡುವವರು 10 ಫಂಟೆ‌ ತನಕ‌ ಮಾಡಬಹುದು,‌ ಆದರೆ‌ ತಳ್ಲೋಗಾಡಿಯವರು 6 ಫಂಟೆ ತನಕ‌ಮಾಡಬಹುದು ಎಂದು ಸರಕಾರ ಹೇಳುತ್ತಿದೆ, ಹಾಗಂತಾ ಮಾರುಕಟ್ಟೆಲಿರುವವರೆಲ್ಲ ತಳ್ಲೋ ಗಾಡಿಲಿ ಹೋಗೋಕೆ ಆಗುತ್ತಾ? ಅವರ‌‌ ಬಳಿ ಗಾಡಿ‌ನೂ‌ ಇಲ್ಲ,‌ಎಷ್ಟೋ‌ ಮಂದಿಗೆ ತಳ್ಲಲು ಆಗುವುದಿಲ್ಲ, ಹಾಗಾಗಿ ಸರಕಾರ ಬೀದಿಬದಿ ವ್ಯಾಪಾರಿಗಳ ಸಹಾಯಕ್ಕೆ ನಿಲ್ಲಬೇಕು ಎಂದು ವಕೀಲ ವಿನಯ್ ಶ್ರೀನಿವಾಸ ರವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *