ಭಾರತಕ್ಕೆ ಬಂದ 2,060 ಆಮ್ಲಜನಕ ಕಾನ್ಸಂಟ್ರೇಟರ್‌ಗಳು

ನವದೆಹಲಿ: ಅಮೇರಿಕಾ ಸೇರಿದಂತೆ ವಿವಿಧ ದೇಶಗಳು ಕೋವಿಡ್‌ ನಿವಾರಣೆಗಾಗಿ ನೆರವಿಗೆ ಧಾವಿಸಿದ್ದು, ಇಂದು ಭಾರತಕ್ಕೆ 2,060 ಆಮ್ಲಜನಕ ಕಾನ್ಸಂಟ್ರೇಟರ್, 30 ಸಾವಿರ ರೆಮ್‌ಡಿಸಿವಿರ್ ಔಷಧ, 467 ವೆಂಟಿಲೇಟರ್‌ಗಳು ಮತ್ತು 3 ಆಮ್ಲಜನಕ ಉತ್ಪಾದನಾ ಘಟಕಗಳು ಭಾರತ ತಲುಪಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ತಿಳಿಸಿದೆ.

ಅಮೆರಿಕ–ಭಾರತ ರಕ್ಷಣಾ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿಎಫ್‌) ಮತ್ತು ಸ್ವಿಟ್ಜರ್‌ಲೆಂಡ್, ಪೋಲೆಂಡ್, ನೆದರಲ್ಯಾಂಡ್ಸ್ ಮತ್ತು ಇಸ್ರೇಲಿ ದೇಶಗಳಿಂದ ನೆರವು ಹರಿದುಬಂದಿದೆ.

ಏಪ್ರಿಲ್ 27‌ ರಿಂದ ಮೇ 7ರವರೆಗೆ ಒಟ್ಟಾರೆ 6,608 ಆಮ್ಲಜನಕ ಕಾನ್ಸಂಟ್ರೇಟರ್‌ಗಳು, 3,856 ಆಮ್ಲಜನಕ ಸಿಲಿಂಡರ್‌ಗಳು, 14 ಆಮ್ಲಜನಕ ಉತ್ಪಾದನಾ ಘಟಕಗಳು, 4,330 ವೆಂಟಿಲೇಟರ್‌ಗಳು, 3 ಲಕ್ಷ ರೆಮ್‌ಡಿಸಿವಿರ್ ವಯಲ್‌ಗಳು ತಲುಪಿವೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಭಾರತವು ವಿದೇಶಗಳಿಂದ ಮತ್ತು ಸಂಸ್ಥೆಗಳಿಂದ ಅಂತರರಾಷ್ಟ್ರೀಯ ದೇಣಿಗೆ ಮತ್ತು ಕೋವಿಡ್‌–19 ಪರಿಹಾರ ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳ ಸಹಾಯವನ್ನು ಪಡೆಯುತ್ತಿದೆ ಎಂದು ಸಚಿವಾಲಯ ದೃಢಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಉತ್ತಮ ರೀತಿಯಲ್ಲಿ ಸಹಾಯ ಮತ್ತು ಬೆಂಬಲದ ಬಗ್ಗೆ ಶ್ಲಾಘಿಸಿರುವ ಕೇಂದ್ರ ಸರ್ಕಾರ. ಈ ವೈದ್ಯಕೀಯ ಸಲಕರಣೆಗಳನ್ನು ವ್ಯವಸ್ಥಿತವಾಗಿ ಅವಶ್ಯವಿರುವ ಕಡೆಗಳಲ್ಲಿ ಹಂಚಿಕೆ ಮಾಡುವುದಾಗಿಯೂ ತಿಳಿಸಿದೆ.

ಇದನ್ನು ಓದಿ: ಕೋವಿಡ್ ಲಸಿಕೆ ಮತ್ತು ಜಿಎಸ್‌ಟಿ ಮನ್ನಾ ವಿಚಾರಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಆಗ್ರಹ

ಪರಿಣಾಮಕಾರಿ ಮತ್ತು ತಕ್ಷಣದ ಹಂಚಿಕೆಗೆ ಕ್ರಮಕೈಗೊಂಡಿರುವ ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರವು ಹಂಚಿಕೆಗಾಗಿ ವ್ಯವಸ್ಥಿತ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಿದೆ ಮತ್ತು ಸ್ವೀಕರಿಸಿದ ಸಾಮಗ್ರಿಗಳ ತ್ವರಿತವಾಗಿ ಹಂಚಲು ಕ್ರಮಕೈಗೊಂಡಿದೆ.

‘ಜರ್ಮನಿಯಿಂದ 420 ಲೀಟರ್‌ ಸಾಮರ್ಥ್ಯದ ಸಂಚಾರಿ ಆಮ್ಲಜನಕ ಉತ್ಪಾದನಾ ಮತ್ತು ಭರ್ತಿ ಮಾಡುವ ಘಟಕ ಹಾಗೂ 100 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ದೆಹಲಿಯಿಂದ ಅಸ್ಸಾಂಗೆ ರವಾನಿಸಲಾಗಿದೆ. ನೆದರ್‌ಲ್ಯಾಂಡ್‌ನಿಂದ ಪಡೆದ ವೆಂಟಿಲೇಟರ್‌ಗಳು ದೆಹಲಿಯಿಂದ ತೆಲಂಗಾಣಕ್ಕೆ ತೆರಳುತ್ತಿವೆʼ ಎಂದು ಕೇಂದ್ರ ಸರ್ಕಾರವು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *