50 ಸಾವಿರ ಸನಿಹಕ್ಕೆ ಕೋವಿಡ್‌ ಹೊಸ ಪ್ರಕರಣ

ಬೆಂಗಳೂರು: ಇಂದು ಬಿಡುಗಡೆಯಾದ ವರದಿಯಂತೆ ರಾಜ್ಯದಲ್ಲಿ ಹೊಸದಾಗಿ 49058 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಅದರೊಂದಿಗೆ 328 ಮಂದಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿ ಏರುಗತಿಯಲ್ಲಿ ದೃಢಪಡುತ್ತಿದ್ದು ಅದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತಿದೆ. ನೆನ್ನೆ ಹಾಗೂ ಇಂದಿನ ವರದಿಯಂತೆ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷ ಸನಿಹಕ್ಕೆ ತಲುಪಿದೆ.

ಇದನ್ನು ಓದಿ: ಕೋವಿಡ್:‌ ರಾಜ್ಯದಲ್ಲಿ ದಾಖಲಾದ 50 ಸಾವಿರ ಹೊಸ ಪ್ರಕರಣಗಳು

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿಯಿಂತೆ ಇಂದು 18943 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಒಟ್ಟಾರೆಯಾಗಿ ಕೋವಿಡ್‌ ನಿಂದ ಗುಣಮುಖರಾದವರ ಸಂಖ್ಯೆ 12,55,797 ಆಗಿದೆ.

ರಾಜ್ಯದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳು ಶೇ. 29.83 ರಷ್ಟು ಇದೆ. ಅಂದರೆ, 5,17,075 ಆಗಿದೆ. ಕೋವಿಡ್‌ ಸೋಂಕಿನಿಂದ ಮೃತರಾದವರ ಒಟ್ಟು ಸಂಖ್ಯೆ 17,212 ಆಗಿದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ 17,90,104 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ.

ಇದನ್ನು ಓದಿ: ತುಮಕೂರಿನಲ್ಲಿ ಲಸಿಕೆ ವಿತರಣೆ ಸ್ಥಗಿತ

ರಾಜ್ಯದ 31 ಜಿಲ್ಲೆಗಳಲ್ಲಿ ಇದುವರೆಗೆ 1,01,34,203 ಕೋವಿಡ್-19‌ ವ್ಯಾಕ್ಸಿನೇಷನ್‌ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ. 18 ವರ್ಷದಿಂದ 45 ವರ್ಷದೊಳಗಿನ ಮಂದಿಗೆ ನೀಡಲಾದ ಮೊದಲ ಡೋಸ್‌ ಪ್ರಮಾಣ 5,759 ಆಗಿದೆ. ಅದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು ಕಲಬುರಗಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 23,706 ಹೊಸ ಪ್ರಕರಣಗಳು ದೃಢಪಟ್ಟಿದ್ದು 139 ಮಂದಿ ನಿಧನರಾಗಿದ್ದಾರೆ. ನಗರದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 8,87,086 ಆಗಿದೆ. 3,32,732 ಸಕ್ರಿಯ ಪ್ರಕರಣಗಳು ಚಾಲ್ತಿಯಲ್ಲಿವೆ.

ಇದನ್ನು ಓದಿ: ಕೇರಳ: ಮೇ 8 ರಿಂದ 16ರವರೆಗೆ ಸಂಪೂರ್ಣ ಲಾಕ್​ಡೌನ್

ಒಂದು ಸಾವಿರಕ್ಕೂ ಹೆಚ್ಚಿ ಹೊಸ ಪ್ರಕರಣಗಳು ದಾಖಲಾದ ಜಿಲ್ಲೆಗಳು: ದಕ್ಷಿಣ ಕನ್ನಡ-1,191, ಹಾಸನ-1,403, ಕಲಬುರಗಿ-1,652, ಮಂಡ್ಯ-1,301, ಮೈಸೂರು 2,531, 2,418, ಉಡುಪಿ-1,526 ಆಗಿದೆ. ಉಳಿದ ಕೆಲವು ಜಿಲ್ಲೆಗಳಲ್ಲಿಯೂ ಸಹ ಸಾವಿರದ ಸನಿಹಕ್ಕೆ ಹೊಸ ಪ್ರಕರಣಗಳು ದಾಖಲಾಗಿವೆ.

ಇಲಾಖೆಯು ಬಿಡುಗಡೆ ಮಾಡುತ್ತಿದ್ದ ವರದಿಯಲ್ಲಿ ಕೆಲವು ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವರಗಳನ್ನು ಬಿಡುಗಡೆಗೊಳಿಸುತ್ತಿಲ್ಲ.

Donate Janashakthi Media

Leave a Reply

Your email address will not be published. Required fields are marked *