ಬೆಡ್ ಹಗರಣದ ಹಿಂದೆ ಯಾರಿರಬಹುದು?

ಲಿಂಗರಾಜ್ ಮಳವಳ್ಳಿ CITU ಮುಖಂಡರು ಬೆಂಗಳೂರು ದಕ್ಷಿಣ

 

ಕೆಲ ದಿನಗಳ ಹಿಂದೆ ನನಗೆ ಬೇಕಾದವರೊಬ್ಬರಿಗೆ ICU ಬೆಡ್ ಅವಶ್ಯಕತೆ ಇತ್ತು. ಗೊತ್ತಿದ್ದವರಿಗೆಲ್ಲ ಫೋನ್ ಮಾಡಿ ವಿಫಲನಾದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಬೆಡ್ ಬೇಕಿದ್ದಲ್ಲಿ ಈ ನಂಬರ್ ಗಳನ್ನು ಸಂಪರ್ಕಿಸಿ ಎಂದಿತ್ತು.
ಸರಿ, ಆ ನಂಬರ್ ಕರೆ ಮಾಡಿದೆ. ನನ್ನ ಪರಿಚಯ ಮಾಡಿಕೊಂಡು ತುರ್ತಾಗಿ ಐಸಿಯು ಬೆಡ್ ಬೇಕಿದೆ ಅರೆಂಜ್ ಮಾಡಿಕೊಡಿ ಪ್ಲೀಸ್ ಎಂದೆ. ಅದಕ್ಕವರು ಐಸಿಯು ಸಿಗುವುದು ಡೌಟ್ ಸರ್, ರೋಗಿಯ ಬಿಯು ನಂಬರ್ ಕಳುಹಿಸಿ ಪ್ರಯತ್ನಿಸುವೆ ಎಂದರು. ಆಗಬಹುದು ಎಂದು ನಾನು ಆ ವ್ಯಕ್ತಿಗೆ ವಾಟ್ಸಪ್ ಮಾಡಿದೆ.

(ಡಿಪಿಯಲ್ಲಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಪೋಟೋ ಹಾಕಿಕೊಂಡಿದ್ದರು, ಸ್ವಲ್ಪ ಸಮಯದಲ್ಲೇ ಡಿಪಿಯ ಫೋಟೋ ಬದಲಾಗಿತ್ತು!)

ಸ್ವಲ್ಪ ಸಮಯದ ನಂತರ ಕರೆ ಮಾಡಿದ ಆ ವ್ಯಕ್ತಿ ಸರ್, ಐಸಿಯು ಎಲ್ಲಿಯೂ ಸಿಗ್ತಾ ಇಲ್ಲ, ನನಗೆ ಪರಿಚಯದ ಒಂದು ಖಾಸಗಿ ಆಸ್ಪತ್ರೆ ಇದೆ, ಅಲ್ಲಿ ವಿಚಾರಿಸಿದರೆ ಸಿಗಬಹುದು, ಬೇಕಿದ್ದಲ್ಲಿ ಅವರ ನಂಬರ್ ಕಳುಹಿಸುವೆ ಎಂದರು. ಹೀಗೆಯೇ ಇನ್ನೂ ಎರಡು ನಂಬರ್ ಗಳಿಗೆ ಕರೆ ಮಾಡಿದೆ. ಅದರಲ್ಲಿ ಒಬ್ಬರು ಪ್ರಯತ್ನಿಸುವುದಾಗಿ ಹೇಳಿ ನಂತರ ಕರೆ ಮಾಡಲೇ ಇಲ್ಲ. ಇವರೆಲ್ಲರೂ ಆ ವ್ಯಕ್ತಿಯೇ ಹೇಳಿಕೊಂಡಂತೆ ಬಿಜೆಪಿ ಕಾರ್ಯಕರ್ತರು!

ಈಗ ನೀವೆ ಯೋಚಿಸಿ ಬೆಡ್ ಧಂದೆಯ ಹಿಂದೆ ಯಾರಿದ್ದಾರೆ? ತೇಜಸ್ವಿ ಸೂರ್ಯ ಹಿರೋಯಿಸಂ ತೋರಿಸಿ ಸುಮ್ಮನಾಗುವುದಲ್ಲ, ನಾಳೆ ಮತ್ತೆ ಎದುರಾಗುವ ಬೆಡ್ ಗೆ ಏನೂ ಪ್ಲಾನ್ ಮಾಡುತ್ತೀರಿ, ಬೆಡ್ ಗಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹಾಗೆ ಆಕ್ಸಿಜನ್ ವಿಚಾರದಲ್ಲಿ ಕೇಂದ್ರ ಸರಕಾರ ಹಾಗೂ ಮೋದಿಯವರನ್ನು ತರಾಟೆಗೆ ತೋಗೊದುಕೊಳ್ಳುತ್ತೀರಾ?

ಹಾಂ ಅಂದಹಾಗೆ ವಾರ್ ರೂಂ ಮುಸ್ಲಿಂ ರು ಇರುವುದು 17 ಜನ ಮಾತ್ರ ಇದರ 15 ಪಟ್ಟು ಹಿಂದುಗಳೂ ಇದ್ದಾರೆ. ಸರಕಾರದ ತಪ್ಪನ್ನು ಮರೆಮಾಚಲು ಅವರ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ, ಧರ್ಮದ ಲೇಪನ ಬಳಿದಿದ್ದನ್ನು ನಾನು ಖಂಡಿಸುತ್ತೇನೆ.

              ಲಿಂಗರಾಜ ಮಳವಳ್ಳಿ

 

ನಿಮಗೂ ಇಂತಹ ಅನುಭವ ಆಗಿದ್ದರೆ, ಜನಶಕ್ತಿ ಮೀಡಿಯಾ ಜೊತೆ ಹಂಚಿಕೊಳ್ಳಿ, ಬರಹ ಸ್ಪಷ್ಟವಾಗಿರಲಿ. ಸುಳ್ಳು ಮಾಹಿತಿ ಇರುವ ಬರಹಗಳನ್ನು ಪ್ರಕಟಿಸುವುದಿಲ್ಲ.

ಬರಹ ಕಳುಹಿಸಬೇಕಾದ ವಿಳಾಸ :  

[email protected]

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

 

Donate Janashakthi Media

Leave a Reply

Your email address will not be published. Required fields are marked *