ಚಾಮರಾಜನಗರ ‌ದುರಂತ ಮರೆ ಮಾಚಲು ತೇಜಸ್ವಿಯಿಂದ ಹೊಸ ತಂತ್ರ: ಹೆಚ್‌ಡಿಕೆ

ಮಂಡ್ಯ: ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಘಟಿಸಿದ ಘಟನೆಯನ್ನು ಮರೆಮಾಚುವ ಉದ್ದೇಶದಿಂದ ಬಿಜೆಪಿ ನಾಯಕರು ಬೆಡ್‌ ಬ್ಲಾಕಿಂಗ್‌ ದಂಧೆಯ ಹೊಸ ನಾಟಕ ಶುರುಮಾಡಿದ್ದಾರೆ. ವಾಸ್ತವಾಗಿ ಸತ್ಯಾಂಶ ಮುಚ್ಚಿಟ್ಟುಕೊಂಡು ಒಂದು ಸಮುದಾಯದವರ ಮೇಲೆ ಗೂಬೆ ಕೂರಿಸುವ ಹೊಸ ನಾಟಕ ವಾಡುತ್ತಿದ್ದಾರೆ  ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಾಜಿ ಸಿ ಎಂ‌ ಕುಮಾರಸ್ವಾಮಿ ನೀಡಿದ ಸಂದರ್ಭದಲ್ಲಿ ವಿವರಣೆ ನೀಡಿದ ಅವರು ‘ಬೆಂಗಳೂರಿನ ಸಂಸದರು ಕೆಲವು ಶಾಸಕರನ್ನು ಕರೆದುಕೊಂಡು ಒಂದು ವಾರ್‌ ರೂಂಗೆ ಹೋಗಿ ಬಲುದೊಡ್ಡ ದಂಧೆ ಬಯಲಿಗೆಳೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಮಾಯಕ ಜನರು ಸಾಯುತ್ತಿರುವಾಗ ಸಮುದಾಯವೊಂದಕ್ಕೆ ಸೇರಿದವರ ಹೆಸರು ಓದಿ ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೆಲವು ಮಾಧ್ಯಮಗಳು ಆತನನ್ನು ವೈಭವೀಕರಿಸಿದ್ದಾರೆ ಹೀರೋ ಮಾಡಲು ಹೊರಟ್ಟಿದ್ದಾರೆ.‌ ಅದಲ್ಲದೇ, ಅಧಿಕಾರದಲ್ಲಿರುವ ಒಂದು ಪಕ್ಷದ ಸಂಸದರೇ ರಾಜಕಾರಣ ಮಾಡುವ ಕೀಳು ಮಟ್ಟಕ್ಕೆ ಇಳಿದ್ದಾರೆ ಜನರಿಗೆ ನಿಜವಾದ ಸತ್ಯ ಹೇಳುವುದನ್ನು ಬಿಟ್ಟು ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನು ಓದಿ: ತೇಜಸ್ವಿ ಸೂರ್ಯ ಇಷ್ಟಕ್ಕೆ ನಿಲ್ಲದೇ ಎಲ್ಲಾ ಸಂಸದರೊಟ್ಟಿಗೆ ಕೇಂದ್ರಕ್ಕೆ ಆಕ್ಸಿಜನ್‌ಗಾಗಿ ಬೇಡಿಕೆ ಇಡಲಿ: ಸಿದ್ದರಾಮಯ್ಯ

‘ಚಾಮರಾಜನಗರ ಘಟನೆಯಲ್ಲಿ ಸರ್ಕಾರದ ತಪ್ಪಿದೆ, ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. 4 ಸಾವಿರ ಹಾಸಿಗೆಯನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂದು ಹೇಳಿ ಜನರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಇಂದಿಗೂ ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ಇದೆ, ಹಾಗಿದ್ದರೆ ನೀವು ದಾಳಿ ಮಾಡಿ ಸಾಧಿಸಿದ್ದೇನು’ ಎಂದು ಪ್ರಶ್ನಿಸಿದರು.

‘ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಆದರೆ ತನಿಖೆಯ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಡ್ರಗ್ಸ್‌ ಪ್ರಕರಣ, ಸಿ.ಡಿ ಪ್ರಕರಣ ಎಲ್ಲವೂ ಮುಚ್ಚಿ ಹೋಯಿತು. ಈ ಪ್ರಕರಣವನ್ನೂ ಸಿಸಿಬಿಗೆ ಕೊಟ್ಟು ವಾರ್‌ ರೂಂ ಮೇಲೆ ದಾಳಿ ಮಾಡಿದರೆ ಮುಂದೆ ಕೆಲಸ ಮಾಡುವವರು ಯಾರು, ಹಾಸಿಗೆ ಹಂಚಿಕೆ ಮಾಡುವವರು ಯಾರು‘ ಎಂದು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *