ಕೇರಳ ರಾಜ್ಯದ ಜನತೆಗೆ ಸಿಪಿಐ(ಎಂ)ನಿಂದ ಅಭಿನಂದನೆ

ಮಂಗಳೂರು: ಕೇರಳ ರಾಜ್ಯ ವಿಧಾನಸಭೆಯ 140 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ಸ್ಪಷ್ಟ ಬಹುಮತದೊಂಡಿಗೆ 99 ಸ್ಥಾನಗಳ ಭರ್ಜರಿ ಗೆಲುವು ತಂದುಕೊಟ್ಟ ಕೇರಳದ ಸಮಸ್ತ ಜನತೆಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ: ಎಲ್‌.ಡಿ.ಎಫ್‌.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯ್ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗವು ಸ್ಪಷ್ಟ ಬಹುಮತವನ್ನು ಪಡೆದು ಇತಿಹಾಸ ನಿರ್ಮಿಸಿದೆ. ನುಡಿದಂತೆ ನಡೆದು, ಜನತೆಯ ಬೆಂಬಲ ಮರಳಿ ಪಡೆದ ಎಲ್‌ಡಿಎಫ್ ಸರಕಾರವನ್ನು ಅಧಿಕಾರಕ್ಕೆ ತಂದು ಪ್ರತಿ ಐದು ವರ್ಷಕ್ಕೆ ಸರ್ಕಾರ ಬದಲಾಯಿಸುವ ಸಂಪ್ರದಾಯವನ್ನು ಮುರಿದಿದ್ದಾರೆ ಈ ಕೀರ್ತಿ ಕೇರಳ ರಾಜ್ಯದ ಜನತೆ ಸಲ್ಲಬೇಕೆಂದು ತಿಳಿಸಿದ್ದಾರೆ.

ಇದನ್ನು ಓದಿ: ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು – ಸಿಪಿಐ(ಎಂ) ಪೊಲಿಟ್ ಬ್ಯುರೊ

ಹಾಗೆಯೇ ಪಿಣರಾಯ್ ವಿಜಯನ್ ಸರ್ಕಾರ ನೆರೆ ಪ್ರವಾಹ ಬಂದಾಗ ನಿರ್ವಹಿಸಿದ ಪಾತ್ರ, ಸಾಂಕ್ರಾಮಿಕ ರೋಗಗಳು ಬಂದಾಗ ಜನತೆ ಜೀವ ರಕ್ಷಣೆಗೆ ತೆಗೆದುಕೊಂಡು ದಿಟ್ಟತನದ ಕೆಲಸ, ಕೇರಳದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳು ಕೇರಳದ ಜನತೆಯ ಹುಮ್ಮಸ್ಸನ್ನು ಇಮ್ಮಡಿ ಮಾಡಿದೆ ಎಂದಿದ್ದಾರೆ.

ಅತ್ಯಂತ ಐತಿಹಾಸಿಕ ಗೆಲುವಿಗೆ ಕಾರಣರಾದ ಕೇರಳ ರಾಜ್ಯದ ಮಹಾಜನತೆಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಭನಂದನೆಗಳನ್ನು ಸಲ್ಲಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *