ಸಿಪಿಐ(ಎಂ)ನ ಎಂ ಚಿನ್ನದೊರೈಗೆ ಭರ್ಜರಿ ಜಯ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಎಂ ಚಿನ್ನದೊರೈ ಅವರು ಪುದುಕೊಟೈ ಜಿಲ್ಲೆಯ ಗಂಧರ್ವಕೋಟೈ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಎಂ ಚಿನ್ನದೊರೈ ಅವರು 69710 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಅಣ್ಣ ಡ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ಅಭ್ಯರ್ಥಿ ಪಡೆದ ಮತಗಳಿಗಿಂತ 12721 ಮತಗಳ ಅಂತರದಿಂದ ಎಂ.ಚಿನ್ನದೊರೈ ಅವರು ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: 51 ಸಾವಿರ ಅಂತರದ ಗೆಲವು ಸಾಧಿಸಿದ ನಾಗೈ ಮಣಿ

ಗಂಧರ್ವಕೋಟೈ ಕ್ಷೇತ್ರದಿಂದ ಒಟ್ಟು 14 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಪೂರ್ಣಗೊಂಡಿದೆ.

ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಿದ ಆರು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಪಕ್ಷವು ಜಯಗಳಿಸಿದೆ.

ಸೆಕ್ಯೂಲರ್‌ ಅಲೈಯನ್ಸ್‌ ಪ್ರೋಗ್ರಸಿವ್‌ ಭಾಗವಾಗಿ ಸ್ಪರ್ಧಿಸಿದ ಹಲವು ಡಿಎಂಕೆ ಮೈತ್ರಿಕೂಟವೂ 159 ಸ್ಥಾನಗಳನ್ನು ಗಳಿಸಿದೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟವು 75 ಕ್ಷೇತ್ರಗಳಲ್ಲಿ ಮಾತ್ರ ಗೆಲವು ಸಾಧಿಸಿದೆ.

ಇದನ್ನು ಓದಿ: ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ

ಉಳಿದಂತೆ ಇತರೆ ಮೈತ್ರಿಕೂಟ ಹಾಗೂ ಪಕ್ಷಗಳು ಯಾವುದೇ ಕ್ಷೇತ್ರದಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿಲ್ಲ.

Donate Janashakthi Media

Leave a Reply

Your email address will not be published. Required fields are marked *