51 ಸಾವಿರ ಅಂತರದ ಗೆಲವು ಸಾಧಿಸಿದ ನಾಗೈ ಮಣಿ

ಸಂಜೆ 6.47ರ ಸಮಯದಂತೆ

ಚೆನ್ನೈ: ತಮಿಳುನಾಡಿಗೆ ನಡೆದ 234 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಡಿಎಂಕೆ ಮೈತ್ರಿಕೂಟದಿಂದ ಸ್ಪರ್ಧಿಸಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ನಾಗೈ ಮಣಿ ಅವರು ಕಿಲ್‌ವೆಲ್ಲೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ಒಟ್ಟು 18 ಸುತ್ತಿನ ಮತ ಎಣಿಕೆಯು ಪೂರ್ಣಗೊಂಡಿದ್ದು ಸಿಪಿಐ(ಎಂ) ಅಭ್ಯರ್ಥಿ ನಾಗೈ ಮಣಿ ಅವರು 67,988 ಮತ ಗಳಿಸುವ ಮೂಲಕ ವಿಜಯದ ನಗೆ ಬೀರಿದ್ದಾರೆ.

ಇದನ್ನು ಓದಿ: ಇತಿಹಾಸ ನಿರ್ಮಿಸಿದ ಎಲ್.ಡಿ.ಎಫ್ : ಶತಕ ಬಾರಿಸಿದ ಎಡರಂಗ

ಕಿಲ್‌ವೆಲ್ಲೂರು ಕ್ಷೇತ್ರದಿಂದ ಒಟ್ಟು ಹತ್ತು ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ನಾಗೈ ಮಣಿ ಅವರ ಸಮೀಪದ ಪ್ರತಿಸ್ಪರ್ಧಿ ಪಟ್ಟಾಳಿ ಮಕ್ಕಳ ಕಚ್ಚಿ ಪಕ್ಷದ ಅಭ್ಯರ್ಥಿ ವಡಿವೇಲ್‌ ರಾವಣನ್‌ ಅವರು 16,985 ಮತಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

51 ಸಾವಿರಕ್ಕೂ ಹೆಚ್ಚಿನ ಮತಗಳ ಭಾರೀ ಅಂತರದಿಂದ ಗೆದ್ದ ಸಿಪಿಐ(ಎಂ) ಅಭ್ಯರ್ಥಿ ನಾಗೈ ಮಣಿ ಅವರು ಕ್ಷೇತ್ರದ ಎಲ್ಲಾ ಮತಬಾಂಧವರಿಗೂ ಶುಭಕೋರಿದ್ದಾರೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಇಂದು ನಡೆದಿದೆ. ಪ್ರಸ್ತುತ ಡಿಎಂಕೆ 156 ಹೆಚ್ಚಿನ ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ. ಆಡಳಿತರೂಢ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹೀನಾಯವಾಗಿ ಸೋತಿದೆ.

Donate Janashakthi Media

Leave a Reply

Your email address will not be published. Required fields are marked *