ಬೆಳಗಾವಿ : ಅತ್ಯಂತ ಕುತೂಹಕದಿಂದ ಕೂಡಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯ ಫಲಿತಾಂಶ ಇಂದು ಬಹಿರಂಗಗೊಳ್ಳಲಿದೆ. ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಇನ್ನು ನಿರ್ಧಾರವಾಗಬೇಕಿದೆ.
ಬಿಜೆಪಿ ಸಂಸದರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಇದನ್ನು ಓದಿ: ಚುನಾವಣಾ ಫಲಿತಾಂಶ : ಹೊಸ ಇತಿಹಾಸದತ್ತ ಎಲ್.ಡಿ.ಎಫ್ – ಭಾರೀ ಮುನ್ನಡೆ ಕಾಯ್ದುಕೊಂಡ ಎಡರಂಗ
ಬೆಳಗಾವಿ ಲೋಕಸಭೆ ಕ್ಷೇತ್ರ : ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಇಲ್ಲಿ ನೇರವಾದ ಜಿದ್ದಾಜಿದ್ದಿನ ಹಣಾಹಣಿಯಾಗಿದೆ. ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಇಂದ ಮಂಗಳಾ ಸುರೇಶ್ ಕಣಕ್ಕಿಳಿದಿದ್ದರು.
ಮಧ್ಯಾಹ್ನ 3.30ರ ಹೊತ್ತಿಗೆ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 15,000 ಹೆಚ್ಚಿನ ಮತಗಳ ಅಂತರದಲ್ಲಿರುವ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಒಟ್ಟು 3,18,050 ಮತ ಪಡೆದ ಅವರು ಬಿಜೆಪಿ ಮಂಗಳಾ ಅಂಗಡಿ ಸುರೇಶ್ 3,05,957 ಮತ ಪಡೆದಿದ್ದಾರೆ.
ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶುಭಂ ವಿಕ್ರಾಂತ್ ಶೇಲ್ಖೆ ಅವರು 84839 ಮತ ಪಡೆದ ಮೂರನೇ ಸ್ಥಾನವನ್ನ ಅಲಂಕರಿಸುವ ಸಾಧ್ಯತೆ ಇದೆ.