ಪ್ರತಾಪ್ ಗೌಡ ಪಾಟೀಲ್ ಆರಂಭದಿಂದಲೂ ಹಿನ್ನಡೆ
ಬೆಂಗಳೂರು : ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡು ಕಡೆ ಬಿಜೆಪಿ, ಒಂದು ಕಡೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
(11 ಗಂಟೆಯ ವರೆಗಿನ ಮಾಹಿತಿ )
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮುನ್ನಡೆ ಕಾಯ್ದಯಕೊಂಡಿದ್ದಾರೆ. ಆರಂಭದಲ್ಲಿ ಎರಡರಿಂದ ನಾಲ್ಕು ಸಾವಿರದ ಅಂತರದ ನಡುವೆ ಮುನ್ನಡೆಯಲ್ಲಿದ್ದ ಮಣಗಲಾ ಈಗ 11, 213 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
117549 ಮತಗಳನ್ನು ಪಡೆದಿರುವ ಅವರು, 11,213 ಮತಗಳ ಅಂತರದಿಂದ ಮುನ್ನಡೆ ಗಳಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ 107401 ಮತಗಳನ್ನು ಪಡೆದಿದ್ದಾರೆ.
ಬಸವ ಕಲ್ಯಾಣ ಉಪಚುನಾವಣೆ ಮತ ಎಣಿಕೆಯ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಶರಣು ಸಲಗರ 7355 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನೂ 19 ಸುತ್ತಿನ ಮತ ಎಣಿಕೆ ನಡೆಯಬೇಕಿದೆ. ಬಿಜೆಪಿ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ.
ಶರಣು 23354 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಾಲಾ ನಾರಾಯಣರಾವ್ 15999 ಮತಗಳನ್ನು ಪಡೆದರು.
ಮಸ್ಕಿ ಉಪಚುನಾವಣೆಯ 9 ನೇ ಸುತ್ತಿನ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 10996 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಇನ್ನೂ 17 ಸುತ್ತಿನ ಮತ ಎಣಿಕೆ ನಡೆಯಬೇಕಿದೆ.
ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 29374 ಮತಗಳು ಹಾಗೂ ಬಿಜೆಪಿಗೆ 18,378 ಮತಗಳು ಬಂದಿವೆ.
ಪಂಚರಾಜ್ಯ ಚುನಾವಣೆ
- ತಮಿಳುನಾಡಿನಲ್ಲಿ ಡಿಎಂಕೆಗೆ 137 ಅಣ್ಣಾಡಿಎಂಕೆಗೆ 95 ಕ್ಷೇತ್ರಗಳಲ್ಲಿ ಮುನ್ನಡೆ
- ಕೇರಳದಲ್ಲಿ ಎಲ್‌ಡಿಎಫ್ 85 ಯುಡಿಎಫ್ 50 ಕ್ಷೇತ್ರಗಳಲ್ಲಿ ಮುನ್ನಡೆ
- ಅಸ್ಸಾಂನಲ್ಲಿ ಬಿಜೆಪಿ 85 ಕಾಂಗ್ರೆಸ್ 45 ಕ್ಷೇತ್ರಗಳಲ್ಲಿ ಮುನ್ನಡೆ
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 167 ಬಿಜೆಪಿ 121 ,ಎಡರಂಗ ಮೈತ್ರಿ : 01 ಕ್ಷೇತ್ರಗಳಲ್ಲಿ ಮುನ್ನಡೆ
- ಪುದುಚೇರಿ : ಎನ್. ಆರ್.ಸಿ 12 ಮತ್ತು ಕಾಂಗ್ರೆಸ್ 04 ಕ್ಷೇತ್ರಗಳ ಮುನ್ನಡೆ.
ಕ್ಷಣ ಕ್ಷಣದ ಮಾಹಿತಿಗಾಗಿ http://www.Janashakthimedia.com ಗೆ ಭೇಟಿ ಕೊಡಿ.
ಪಂಚರಾಜ್ಯ ಚುನಾವಣೆ : ಮತದಾರನ ತೀರ್ಪೇನು? ಸಂಜೆ 6 ಕ್ಕೆ ಪ್ರೈಮ್ ಡಿಬೆಟ್
ಜನಶಕ್ತಿ ಮೀಡಿಯಾ Facebook & YouTube ನಲ್ಲಿ ತಪ್ಪದೆ ವೀಕ್ಷಿಸಿ.