ಬೆಂಗಳೂರು: ಕೋವಿಡ್ ಉಲ್ಬಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೆನ್ನೆ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ಬಿಗಿ ಕ್ರಮದ ಕರ್ಫ್ಯೂ ಆದೇಶದಲ್ಲಿ ಮತ್ತೆ ಮಾರ್ಪಾಡು ಮಾಡಿರುವ ರಾಜ್ಯ ಸರಕಾರ ಗಾರ್ಮೆಂಟ್ಸ್ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಆದೇಶ ನೀಡಿದೆ.
ಇಂದು ಮರು ಆದೇಶ ಮಾಡಿರುವ ಸುತ್ತೋಲೆಯನ್ನು ಹೊರಡಿಸಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಬಿಬಿಎಂಪಿ ವ್ಯಾಪ್ತಿಯ ಕೋವಿಡ್ ನಿರ್ವಹಣೆಯ ಹೊಣೆ ಹೊತ್ತಿರುವ ಎನ್. ಮಂಜುನಾಥ್ ಪ್ರಸಾದ್ ಅವರು ಶೇಕಡಾ 50ರಷ್ಟು ಕಾರ್ಮಿಕರು ಮಾತ್ರ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹಾಜರಾಗಬಹುದು ಹಾಗೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದ್ದಾರೆ.
ಇದನ್ನು ಓದಿ: ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ
ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಕ್ಕೆ ಸಂಬಂಧಿಸಿದಂತೆ ರಾಜ್ಯದ್ಯಂತ ವಿಶೇಷವಾಗಿ ಬೆಂಗಳೂರಿನಲ್ಲಿ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವವರಿಂದ ಯಾವುದೇ ಹದಿನೈದು ದಿನ ಹೇರಿರುವ ಲಾಕ್ಡೌನ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು.
ಕೆಲಸವಿಲ್ಲದೆ ಸಾವಿರಾರು ಕಾರ್ಮಿಕರು ಈಗಾಗಲೇ ಬೆಂಗಳೂರು ತೊರೆದಿದ್ದಾರೆ. ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಮೆ ಮಾಡುವ ಕಾರ್ಮಿಕರಿಗೆ ಲಾಕ್ಡೌನ್ನಿಂದ ಕೆಲಸವೂ ಇಲ್ಲದೆ ಸಂಬಳವೂ ಇಲ್ಲದೆ ಅತಂತ್ರ ಎದುರಾಗಿದೆ ಎಂದು ಸಿಐಟಿಯು ಸಂಘಟನೆಯೂ ಸರಕಾರದ ಕ್ರಮವನ್ನು ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಸರಕಾರ ಸೂಕ್ತ ಪರಿಹಾರವಿಲ್ಲದೆ ಜೀವನ ನಡೆಸುವುದು ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದರು.
ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ನಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸಕ್ಕೆ ಇದ್ದು ಅವರ ವೇತನವೂ ಕಡಿಮೆ ಇದೆ. ಸರಕಾರದ ಲಾಕ್ಡೌನ್ ಆದೇಶದ ಬಗ್ಗೆ ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಮಾಲೀಕರು ತಮ್ಮ ಬದುಕಿನ ಬಗ್ಗೆ ಪ್ರಶ್ನೆ ಎತ್ತಿದ್ದರು.
ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಆರಂಭಕ್ಕೆ ಸರಕಾರ ಆದೇಶ ನೀಡಿದೆ.