ಬೆಂಗಳೂರು : ಇಂದು ರಾತ್ರಿಯಿಂದ ( 27) 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ ಎಂದು ರಾಜ್ಯ ಸರಕಾರ ಆದೇಶಿಸಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಈ ನಡುವೆ ಲಾಕ್ಡೌನ್ ಗಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್ ಮಾಡಿದ್ದು ಅದರ ಬಗೆಗಿನ ಮಾಹಿತಿ ಇಲ್ಲಿದೆ.
ಲಭ್ಯವಿರುವ ಅಗತ್ಯ ಸೇವೆಗಳು
– ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯಸೇವೆಯ ಅಂಗಡಿಗಳು ತೆರೆಯಬಹುದು
– ದಿನಸಿ, ಹಣ್ಣು-ತರಕಾರಿ, ಮೀನು ಮಾಂಸ ಅಂಗಡಿ ತೆರೆಯಲು ಅವಕಾಶ
– ಮದ್ಯಂದಗಡಿಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಓಪನ್
ಬಾರ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ
– ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ
– ಬ್ಯಾಂಕ್, ಇ-ಕಾಮರ್ಸ್ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ
ಸಾರಿಗೆಯಲ್ಲಿ ಏನೆಲ್ಲಾ ಲಭ್ಯವಿದೆ
ಈ ಅವಧಿಯಲ್ಲಿ ನಿಗದಿಯಾಗಿರುವ ವಿಮಾನಗಳು ಮತ್ತು ರೈಲುಗಳು ಪ್ರಯಾಣ ಮುಂದುವರಿಸಬಹುದು.
– ಏರ್ಪೋರ್ಟ್ ಬಸ್, ಟ್ಯಾಕ್ಸಿಗಳಿಗೆ ಷರತ್ತುಬದ್ಧ ಅವಕಾಶ
– ಟ್ರಾವೆಲ್ ದಾಖಲಾತಿ, ಟಿಕೆಟ್ ತೋರಿಸುವುದು ಕಡ್ಡಾಯ
– ತುರ್ತು ಸೇವೆಗೆ ಮಾತ್ರ ಆಟೋ, ಟ್ಯಾಕ್ಸಿಗೆ ಅವಕಾಶ
– ಮೇ 12ರವರೆಗೆ ಮೆಟ್ರೋ ಸಂಚಾರ ಸಂಪೂರ್ಣ ಬಂದ್
– ಅಂತಾರಾಜ್ಯ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ
– ಅಂತರ್ ಜಿಲ್ಲಾ, ಅಂತರ್ ರಾಜ್ಯ ತುರ್ತು ಸೇವೆಗೆ ಮಾತ್ರ ಅವಕಾಶ. ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರ, ಗೂಡ್ಸ್, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್ ಆದ್ರೆ ಅಂತರ್ ಜಿಲ್ಲೆಗಳ ಗೂಡ್ಸ್ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
– ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶವಿದೆ. ಅಡ್ಮಿಷನ್ ಟಿಕೆಟ್ ತೋರಿಸಿ ಸಂಚಾರಿಸಬಹುದು. ಆಟೋ, ಟ್ಯಾಕ್ಸಿಯಲ್ಲಿ ವಿದ್ಯಾರ್ಥಿಗಳು ಸಂಚರಿಸಲು ಅನುಮತಿಯಿದೆ.
ಇವೆಲ್ಲಾ ಬಂದ್
– ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ
– ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ
– ಸ್ಪಾ, ಮನರಂಜನಾ ಕೇಂದ್ರ, ಸಮುದಾಯ ಭವನಗಳನ್ನು ಬಂದ್ ಮಾಡಲು ಆದೇಶ
– ಸ್ಟೇಡಿಯಂ, ಆಟದ ಮೈದಾನ, ಕ್ರೀಡಾ ಸಂಕೀರ್ಣ, ಜಿಮ್ಗಳು ತೆರೆಯುವಂತಿಲ್ಲ.
ಇವುಗಳಿಗೆ ಕಡಿವಾಣ
– ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗೆ ಸಂಪೂರ್ಣ ನಿರ್ಬಂಧ.
– ಮಂದಿರ, ಮಸೀದಿ, ಚರ್ಚ್ಗಳಿಗೆ ಜನರು ಪ್ರವೇಶಿಸುವಂತಿಲ್ಲ. ಪೂಜಾರಿಗಳು ಮಾತ್ರ ಸಂಪ್ರದಾಯದಂತೆ ಸರಳ ಪೂಜೆ ಮಾಡಬಹುದು.
– ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ದರ್ಶಿನಿಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ
ಇವುಗಳಿಗೆ ನಿರ್ಬಂಧವಿಲ್ಲ
– ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ನಿರ್ಬಂಧವಿಲ್ಲ
– ಕೈಗಾರಿಕೆಗಳಲ್ಲಿ ಕೆಲಸಕ್ಕೆ ತೆರಳುವವರು, ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು ಐಡಿ ತೋರಿಸಬೇಕು
– ನ್ಯಾಯಬೆಲೆ ಅಂಗಡಿ, ಆಹಾರ, ದಿನಸಿ, ಹಣ್ಣು, ತರಕಾರಿ, ಡೇರಿ, ಹಾಲಿನ ಬೂತ್, ಮೀನು, ಮಾಂಸ ಮಾರಾಟ ಇರುತ್ತೆ
– ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ, ಅಗತ್ಯ ಪ್ರಮಾಣದ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು. ಉಳಿದವರಿಗೆ ಮನೆಯಿಂದಲೇ ಕೆಲಸಕ್ಕೆ ವ್ಯವಸ್ಥೆ ಮಾಡಬೇಕು
– ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮಾನ್ಯ ಕೆಲಸಕ್ಕೆ, ಉಳಿದ 50ರಷ್ಟು ಸಿಬ್ಬಂದಿ ಕೊವಿಡ್ ಡ್ಯೂಟಿಗೆ ಹಾಜರಾಗಬೇಕು
– ರಾಜ್ಯದ ಎಲ್ಲ ಕೋರ್ಟ್ಗಳ ಬಗ್ಗೆ ಹೈಕೋರ್ಟ್ನಿಂದ ನಿರ್ಧಾರ
– ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ, ವಿಪತ್ತು ನಿರ್ವಹಣಾ ಸಿಬ್ಬಂದಿ, ಎಲ್ಲಾ ಡಿಸಿಗಳ ಕಚೇರಿ, ಬಿಬಿಎಂಪಿ ಸಿಬ್ಬಂದಿ, ಇತರೆ ಇಲಾಖೆಗಳ ಕೊವಿಡ್ ಸೇವಾ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ.