ಕೋವಿಶೀಲ್ಡ್ ಜಾಗತಿಕ ದರ : ಭಾರತದಲ್ಲಿ ಮಾತ್ರ ದುಬಾರಿ

ನವದೆಹಲಿ : ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಉತ್ಪಾದಿಸುತ್ತಿರುವ ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಯ ಬೆಲೆ ವಿಶ್ವದ ಇತರೆಡೆ ಹೋಲಿಸಿದರೆ ಭಾರತದಲ್ಲೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.

ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್‌ನ 1 ಡೋಸ್‌ ಬೆಲೆಯನ್ನು ಈವರೆಗೆ ಇರುವ 250 ರೂ.ನಿಂದ 600 ರೂ.ಗೆ ಪರಿಷ್ಕರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ದರವನ್ನು 150 ರೂ ನಿಂದ 400 ರೂ ಗೆ ಹೆಚ್ಚಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಅದು ಪೂರೈಸುತ್ತಿರುವ ಲಸಿಕೆ ದರವನ್ನು ವಿಶ್ವದ ಇತರ ದೇಶಗಳಲ್ಲಿನ ಕೋವಿಶೀಲ್ಡ್‌ ಲಸಿಕೆ ದರಕ್ಕೆ ಹೋಲಿಸಿದಾಗ ಭಾರತದಲ್ಲೇ ಹೆಚ್ಚಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ : ಬೆಡ್, ಆಕ್ಸಿಜನ್ ಸಿಗದೆ ಕೊರೊನಾ ವಾರಿಯರ್ ನಿಧನ

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ದರ ಇನ್ನು 1 ಡೋಸ್‌ಗೆ 600 ರೂ. ಆಗಲಿದೆ. ಇದೇ ದರ, ಸೌದಿ ಅರೇಬಿಯಾದಲ್ಲಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸುಮಾರು 400 ರೂಪಾಯಿ, ಅಮೆರಿಕದಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ 300 ರೂಪಾಯಿ, ಬ್ರೆಜಿಲ್‌ನಲ್ಲಿ 240 ರೂಪಾಯಿ, ಬ್ರಿಟನ್‌ನಲ್ಲಿ 225 ರೂಪಾಯಿ, ಹಾಗೂ ಯುರೋಪ್‌ ಒಕ್ಕೂಟದ ದೇಶಗಳಲ್ಲಿ 200ರಿಂದ 300 ರೂಪಾಯಿ ನಡುವೆ ಇದೆ.

ಯಾವ ದೇಶದಲ್ಲಿ ಎಷ್ಟು? (1 ಡೋಸ್‌)

ಭಾರತ 600 ರೂ.

ಸೌದಿ ಅರೇಬಿಯಾ 400 ರೂ.

ದ.ಆಫ್ರಿಕಾ 400 ರೂ.

ಅಮೆರಿಕ 300 ರೂ.

ಬಾಂಗ್ಲಾದೇಶ 300 ರೂ.

ಬ್ರೆಜಿಲ್‌ 240 ರೂ.

ಬ್ರಿಟನ್‌ 225 ರೂ.

ಯುರೋಪ್‌ ಒಕ್ಕೂಟ 200-300 ರೂ.

ಸೀರಂ ಸ್ಪಷ್ಟನೆ: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಿರುವ ಕೋವಿಡ್-19 ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಶನಿವಾರ ಕೋವಿಶೀಲ್ಡ್ ಲಸಿಕೆಯನ್ನು ಆರಂಭಿಕ ದರಕ್ಕಿಂತ 1.5 ಪಟ್ಟು ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿದೆ. ಮುಂಚಿನ ಬೆಲೆ ಅಡ್ವಾನ್ಸ್ ಫಂಡಿಂಗ್ ಹಣವನ್ನು ಆಧರಿಸಿದ್ದಾಗಿದೆ ಮತ್ತು ಈಗ ಅದರ ಪ್ರಮಾಣ ಹೆಚ್ಚಳ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೂಡಿಕೆ ಮಾಡಬೇಕಾಗಿದೆ ಎಂದು ಹೇಳಿದೆ. ಸದ್ಯ, ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ 150 ರೂ.ಚಾರ್ಜ್ ವಿಧಿಸುವುದರ ಹೋಲಿಕೆ ಕುರಿತು ಕಂಪನಿಯು, ಭಾರತದೊಂದಿಗೆ ಜಾಗತಿಕ ಮಟ್ಟದ ಲಸಿಕೆ ದರವನ್ನು ಸರಿಯಾಗಿ ಹೋಲಿಸಲಾಗಿ ಎಂದು ಹೇಳಿದೆ.

ಇದನ್ನೂ ಓದಿ : ಕೋವಿಡ್-19 ಅಸಮರ್ಪಕ ನಿರ್ವಹಣೆ: ಕೇಂದ್ರ ಸರ್ಕಾರದ ವಿರುದ್ಧ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಟೀಕೆ

ಲಸಿಕೆ ತಯಾರಿಕೆಗಾಗಿ ಮುಂಗಡವಾಗಿ ಹಣ ಪಡೆದಿದ್ದ ದೇಶಗಳಿಗಾಗಿ ಆರಂಭಿಕವಾಗಿ ಜಾಗತಿಕವಾಗಿ ಬೆಲೆ ಕಡಿಮೆ ಇತ್ತು. ಆರಂಭದಲ್ಲಿ ಭಾರತ ಸೇರಿದಂತೆ ಎಲ್ಲಾ ಕೋವಿಡ್-19 ಭಾದಿತ ರಾಷ್ಟ್ರಗಳಿಗೆ ಕಡಿಮೆ ಬೆಲೆಯಲ್ಲಿಯೇ ಲಸಿಕೆಯನ್ನು ಪೂರೈಸಲಾಗಿದೆ ಎಂದು ಕಂಪನಿ ಹೇಳಿದೆ.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಹಾಗೂ ಸ್ವೀಡನ್‌ನ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಸಿದ್ಧಪಡಿಸಿರುವ ಲಸಿಕೆಯನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಉತ್ಪಾದಿಸುತ್ತಿದ್ದು, ವಿಶ್ವವ್ಯಾಪಿ ಪೂರೈಕೆ ಮಾಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *