ಗಂಗಾವತಿ : ಬಳ್ಳಾರಿ ವಿ ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಎಸ್ಎಫ್ ಐ ನಿಂದ ಇಂದು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಇದೇ ತಿಂಗಳು ಏಪ್ರಿಲ್ ಹತ್ತೊಂಬತ್ತು ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆ ದಿನಾಂಕ ನಿಗದಿ ಮಾಡಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಒಂದೆಡೆ ಸಾರಿಗೆ ಮುಷ್ಕರ ಇನ್ನೊಂದೆಡೆ ಕರೋನಾ ಎರಡನೆಯ ಅಲೆಯಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ, ಸಾರಿಗೆ ಮುಷ್ಕರದಿಂದಾಗಿ ಬಸ್ಗಳು ಇರದ ಕಾರಣ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಾಗುತ್ತಿವೆ. ಹಾಗಾಗಿ ಸಾವಿರಾರು ವಿದ್ಯಾರ್ಥಿಗಳು ಏಪ್ರಿಲ್ ಹತ್ತೊಂಬತ್ತು ರಿಂದ ಪರೀಕ್ಷೆಗಳು ನಡೆದರೆ ಪರೀಕ್ಷೆಯಿಂದ ವಂಚಿತ ರಾಗುತ್ತಾರೆ. ಈಗಾಗಲೆ ಅನೇಕ ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿವೆ. ಮತ್ತು ಇಪ್ಪತ್ತೈದರಂದು ಕೆ ಸೆಟ್ ಪರೀಕ್ಷೆ ನಡೆಸಲು ಮುಂದಾಗಿದ್ದು ಅದೇ ದಿನಾಂಕದಂದು ಸ್ನಾತಕೋತ್ತರ ಕೋರ್ಸ್ ಗಳ ಪರೀಕ್ಷೆ ಇದೆ. ಎರಡರಲ್ಲಿ ಯಾವ ಪರೀಕ್ಷೆ ಬರೆಯಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ ಹಾಗಾಗಿ ಬಳ್ಳಾರಿ ವಿವಿ ವ್ಯಾಪ್ತಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಬೇಕೆಂದು ಎಸ್ಎಫ್ಐ ತಾಲ್ಲೂಕ ಅಧ್ಯಕ್ಷ ಗ್ಯಾನೇಶ ಕಡಗದಆಗ್ರಹಿಸಿದ್ದಾರೆ.
ಗಂಗಾವತಿ ಸ್ನಾತಕೋತ್ತರ ಕೇಂದ್ರದ ಅಧಿಕಾರಿಗಳ ಮೂಲಕ ಬಳ್ಳಾರಿ ವಿ.ಎಸ್.ಕೆ ವಿಶ್ವವಿದ್ಯಾಲಯ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಸಹ ಕಾರ್ಯದರ್ಶಿ ಹನುಮೇಶ, ಸದಸ್ಯರಾದ ಶಿವುಕುಮಾರ, ಶರೀಫ್, ಟಿಪ್ಪು, ದೇವರಾಜ,ಬಸವರಾಜ ಗರ್ಜನಾಳ, ಭೀಮೇಶ, ಯಮನೂರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
Bus problems
We want exams to get postponed because Corona is increasing rapidly
Postpone our exams because covid cases are becoming more .people come from different places to write exams it’s not safe
The situation in India is getting worse day by day. When there were only a few cases in the country, they cancelled the remaining board exams and now when the cases are at a peak they are planning to open schools. We urge the education minister to look into this matter and cancel all examinations to be held this year as students are already under a lot of stress,” a petition on Change.