ತೆರಿಗೆ ವಂಚನೆ : ಡಿಕೆಶಿ ವಿರುದ್ಧದ ಮೂರು ಪ್ರಕರಣಗಳು ವಜಾಮಾಡಿದ ಹೈಕೋರ್ಟ್‌

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಖಲಿಸಿದ್ದ ಕ್ರಿಮಿನಲ್‌ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳು ಹಾಗೂ ಕಾನೂನಿಗೆ ಸಂಬಂಧಿಸಿದ ಮೂರು ಕ್ರಿಮಿನಲ್ ಪ್ರಕರಣಗಳನ್ನು ಇಂದು ಹೈಕೋರ್ಟ್‌ ವಜಾ ಮಾಡಿದೆ.‌

ಶಿವಕುಮಾರ್ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್‌ ಆರಂಭಿಸಲಾಗಿದ್ದು, ಕ್ರಿಮಿನಲ್‌ ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಮತ್ತು ಆದಾಯ ತೆರಿಗೆ ಕಾಯಿದೆಯ (ಐಟಿ ಕಾಯಿದೆ) ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಹೇಳಿದ್ದಾರೆ.

ಇದನ್ನು ಓದಿ : ಕೋವಿಡ್‌ -19 ಪ್ರಕರಣ ಹೆಚ್ಚಳ : ಏಪ್ರಿಲ್‌ 20 ರವರೆಗೆ ನಿಷೇಧಾಜ್ಞೆ ಜಾರಿ – ಕಮಲ್‌ ಪಂತ್

2017ರ ಆಗಸ್ಟ್‌ನಲ್ಲಿ ಡಿ ಕೆ ಶಿವಕುಮಾರ್‌ ಅವರ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಐಟಿ ಇಲಾಖೆಯು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

“ಆಕ್ಷೇಪಿತ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣಗಳು ನನಗೆ ಕಾಣುತ್ತಿಲ್ಲ. ಪ್ರತಿವಾದಿಯ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್‌ ಆರಂಭಿಸಲಾಗಿದ್ದು, ಕ್ರಿಮಿನಲ್‌ ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಮರುಪರಿಶೀಲನಾ ಮನವಿಗಳು ವಜಾಕ್ಕೆ ಅರ್ಹವಾಗಿರುವುದರಿಂದ ಅವುಗಳನ್ನು ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿದೆ.

ಆದಾಯ ತೆರಿಗೆ ಕಾಯ್ದೆಯಡಿ ಅಪರಾಧಗಳ ಹೊರತಾಗಿ, ಒಂದೆರಡು ವರ್ಷಗಳ ಹಿಂದೆ ನಡೆದ ಐಟಿ ದಾಳಿಯ ಸಂದರ್ಭದಲ್ಲಿ ಕಾಗದದ ಹಾಳೆಯನ್ನು ಹರಿದು ಹಾಕಿದ ಆರೋಪದ ಮೇಲೆ ಶಿವಕುಮಾರ್‌ಗೆ ಒಂದು ಪ್ರಕರಣದಲ್ಲಿ ಐಪಿಸಿಯ ಸೆಕ್ಷನ್ 201 (ಅಪರಾಧದ ಪುರಾವೆಗಳು ಕಣ್ಮರೆಯಾಗಲು ಕಾರಣವಾಗಿದೆ) ವಿರುದ್ಧ ಆರೋಪಿಸಲಾಯಿತು.

ಇದನ್ನು ಓದಿ : ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು

ಪ್ರಕರಣದ ಹಿನ್ನೆಲೆ: ಅರ್ಜಿದಾರ ಐಟಿ ಇಲಾಖೆಯು ಪ್ರತಿವಾದಿ ಡಿ ಕೆ ಶಿವಕುಮಾರ್‌ ವಿರುದ್ಧ ಸಿಆರ್‌ಪಿಸಿ ಸೆಕ್ಷನ್‌ 200, ಐಟಿ ಕಾಯಿದೆ 1961ರ ಸೆಕ್ಷನ್‌ 276ಸಿ(1) ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 201 (ಸಾಕ್ಷ್ಯ ಬಚ್ಚಿಡುವುದು) ಮತ್ತು 204ರ (ಸಾಕ್ಷ್ಯವನ್ನಾಗಿ ಸಲ್ಲಿಸಲು ಸಂಗ್ರಹಿಸಬಹುದಾದ ದಾಖಲೆ ನಾಶಪಡಿಸುವುದು) ದೂರು ದಾಖಲಿಸಿತ್ತು. 2019ರ ಫೆಬ್ರವರಿ 28ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೂರು ಪ್ರಕರಣಗಳಲ್ಲಿ ಶಿವಕುಮಾರ್‌ ಅವರನ್ನು ಖುಲಾಸೆಗೊಳಿಸಿತ್ತು.

2015-16, 2016-17 ಮತ್ತು 2017-18ರ ದಾಖಲೆ ಸಲ್ಲಿಸುವುದಕ್ಕೂ ಮುನ್ನವೇ ಐಟಿ ಇಲಾಖೆಯು ಪ್ರಾಸಿಕ್ಯೂಷನ್‌ ಆರಂಭಿಸಬಾರದಿತ್ತು. ಆದಾಯ ತೆರಿಗೆಯ (ತನಿಖೆ) ಉಪ ನಿರ್ದೇಶಕರಿಗೆ ಶಿವಕುಮಾರ್‌ ಅವರ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸುವ ಅಧಿಕಾರವಿಲ್ಲ. ಕಾನೂನಿನ ಅನುಮತಿಯಿಲ್ಲದೇ ಸಿಆರ್‌ಪಿಸಿ 200ರ ಅಡಿ ದೂರು ದಾಖಲಿಸಲಾಗಿದೆ ಎಂದು ಶಿವಕಕುಮಾರ್‌ ಪರ ವಕೀಲರು ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ವಾದಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *