ಕೋವಿಡ್‌ ಪ್ರಕರಣಗಳ ಹೆಚ್ಚಳ: ಸಿಎಂ ಉದ್ಧವ್‌ ಠಾಕ್ರೆ ಅವರಿಂದ ಇಂದು ಮಹತ್ವ ಭಾಷಣ

ಮುಂಬೈ : ಕೋವಿಡ್-19‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಇಂದು ರಾತ್ರಿ 8.30ಕ್ಕೆ ಮಹತ್ವ ಭಾಷಣ ಮಾಡಲಿದ್ದಾರೆ. ದೇಶದಲ್ಲಿ ದಾಖಲಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 84.61ರಷ್ಟು ಇದ್ದು, ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡುವ ಸಾಧ್ಯಗಳಿವೆ ಎಂಬ ಅಂಶಗಳು ವರದಿಯಾಗುತ್ತಿವೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಕಾಣಿಸಿಕೊಂಡಿದ್ದು ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಇದನ್ನು ಓದಿ : ಬೆಂಗಳೂರಲ್ಲಿ 6 ರಿಂದ 9ನೇ‌ ತರಗತಿ ಸಂಪೂರ್ಣ ಸ್ಥಗಿತ : ಸುರೇಶ್‌ ಕುಮಾರ್

ಈ ಕುರಿತು ಮುಂಬೈ ಮೇಯರ್‌ ಕಿಶೋರಿ ಪೆಡ್ನೇಕರ್‌ ಅವರು ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿಗಳು ಇಂದು ಉನ್ನತ ಅಧಿಕಾರಿಗಳೊಂದಿಗೆ ನಡೆಯುವ ಮಹತ್ವದ ಸಭೆಯ ಬಳಿಕ ಸರಕಾರದ ತೀರ್ಮಾನಗಳನ್ನು ಪ್ರಕಟಿಸಲಿದ್ದಾರೆ. ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತು ಆರೋಗ್ಯ ಮೂಲಸೌಕರ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸುವ ಸಲುವಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಕೆಲವು ದಿನಗಳಿಂದ ದಾಖಲಾಗುತ್ತಿರುವ ಹೊಸ ಕೊರೊನಾ ಪ್ರಕರಣದ ವರದಿಗಳಲ್ಲಿ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ನೆನ್ನೆ 24 ಗಂಟೆಗಳ ಅವಧಿಯಲ್ಲಿ 43,183 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು ಮತ್ತು 249 ಸಾವುಗಳು ಆಗಿರುವ ವರದಿ ಒಂದೇ ದಿನ ಸಂಭವಿಸಿದೆ.

ಆರಂಭಿಕ ಹಂತದಲ್ಲಿ ಸಾಂಕ್ರಾಮಿಕ ರೋಗ ಪ್ರಕರಣಗಳ ಹೆಚ್ಚಳವಾಗುತ್ತಿರುವ ವರದಿ ಬರುತ್ತಿದ್ದು, ಕಳೆದ ವರ್ಷ ಅಕ್ಟೋಬರ್‌ ನಿಂದ ಕಡಿಮೆಯಾಗುತ್ತಿತ್ತು. ಆದರೆ ಇತ್ತೀಚಿನ ಕೆಲವೇ ದಿನಗಳ ಅವಧಿಯಲ್ಲಿ ಕೋವಿಡ್‌ ಪ್ರಕರಣಗಳು ಮತ್ತು ಸಾವುಗಳ ಪ್ರಮಾಣವೂ ಅತ್ಯಧಿಕವಾಗಿ ಏರಿಕೆ ಕಂಡುಬರುತ್ತಿದೆ.

ಇದನ್ನು ಓದಿ : ವಿಮೆ ಉದ್ದಿಮೆಯ ಖಾಸಗೀಕರಣ ‘ವಿದೇಶೀ’ಕರಣ ಅವಿವೇಕದ ನಡೆ

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮಿಷನ್‌ ಬಿಗಿನ್‌ ಎಗೇನ್‌ ಕಾರ್ಯಕ್ರಮದ ಅಡಿಯಲ್ಲಿ ಭಾನುವಾರದಿಂದ ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಮತ್ತು ರೈಲು ಪ್ರಯಾಣಿಕರ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಕಠಿಣ ನಿಯಂತ್ರಣ ಅಧಿಕಾರಿ ಕೈಗೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲದಿದ್ದರೂ ʻʻಬ್ಲಾಂಕೆಟ್‌ ಲಾಕ್‌ಡೌನ್‌ʼʼ ಜಾರಿಮಾಡುವ ನಿರ್ಧರಿಸಬಹುದು ಮತ್ತು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ರೆಸ್ಟೋರೆಂಟ್‌, ಹೋಟೆಲ್‌ಗಳು ಚಿತ್ರಮಂದಿಗಳನ್ನು ಸಂಪೂರ್ಣವಾಗಿ ಬಂದ್‌ ಮಾಡುವು ಅಥವಾ ವ್ಯವಹಾರದ ಸಮಯಕ್ಕೆ ಮಿತಿಗಳನ್ನು ಹೇರುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನು ಓದಿ : ಆತ್ಮಹತ್ಯೆಗೆ ಯತ್ನಿಸಿದ್ದ ಕ್ಯಾಬ್‌ ಚಾಲಕ ಚಿಕಿತ್ಸೆ ಫಲಿಸದೆ ಸಾವು : ಏರ್ಪೋರ್ಟ್ ಮುಂಭಾಗ ಪ್ರತಿಭಟನೆ

ಕಳೆದ ಸೋಮವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಆರೋಗ್ಯ ಸಚಿವ ರಾಜೇಶ್‌ ಟೊಪೆ ಅವರೊಂದಿಗೆ ಮಹತ್ವ ಸಭೆಯಲ್ಲಿ ಕೋವಿಡ್-19ರ ಕಾರ್ಯಪಡೆಯನ್ನು ನಿಯೋಜಿಸುವುದು ಸೇರಿದಂತೆ ಸೀಮಿತ ಅವಧಿಯ ಲಾಕ್‌ಡೌನ್‌ ಒಳಗೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಿಫಾರಸ್ಸು ಮಾಡಿದ್ದರು.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 81,466 ಹೊಸ ಕೊರೊನಾ ಪ್ರಕರಣದ ವರದಿಯಾಗಿದೆ. ಒಂದೇ ದಿನದಲ್ಲಿ ದಾಖಲಾದ ವರದಿಯಲ್ಲಿ ಇದು ಕಳೆದ ಆರು ತಿಂಗಳಲ್ಲಿ ಅತಿ ಹೆಚ್ಚು. ಒಟ್ಟಾರೆ ಕೋವಿಡ್‌ ಪ್ರಕರಣಗಳು 1,23,03,131 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 3,67,897 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 28,56,163 ಜನರಿಗೆ ಸೋಂಕು ತಗುಲಿದೆ.

Donate Janashakthi Media

Leave a Reply

Your email address will not be published. Required fields are marked *