ಕಾಸರಗೂಡು : ಇಬ್ಬರು ಕ್ರೈಸ್ತ ನರ್ಸ್ಗಳ ಮೇಲಿನ ಧಾಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಹೇಳಿಕೆ ಅತ್ಯಂತ ನಾಚಿಕೆಗೇಡಿನದ್ದಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದರು.
ಕೇರಳದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಪ್ರಚಾರದ ವೇಳೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿವಾದಾತ್ಮಾಕ ಹೇಳಿಕೆ ನೀಡಿದ್ದರು.
ಇದನ್ನು ಓದಿ : ಬಿಎಂಟಿಸಿ ಖಾಸಗೀಕರಣಕ್ಕೆ ನೌಕರರ ಫೆಡರೇಷನ್ ತೀವ್ರ ವಿರೋಧ
ಇತ್ತೀಚಿಗೆ ಉತ್ತರ ಪ್ರದೇಶದ ಮೂಲಕ ರೈಲು ಪ್ರಯಾಣದ ವೇಳೆ ಇಬ್ಬರು ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿತ್ತು. ರೈಲ್ವೆ ಸಚಿವರು ಆಗಿರುವ ಪಿಯೂಷ್ ಗೋಯಲ್ ಅವರು “ಯಾವುದೇ ಕ್ರೈಸ್ತ ಸನ್ಯಾಸಿನಿಯ ಮೇಲೆ ಯಾವುದೇ ದಾಳಿ ನಡೆದಿಲ್ಲ, ಕೇರಳ ಮುಖ್ಯಮಂತ್ರಿ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು “ನಾಚಿಕೆಗೇಡು” ಮತ್ತು “ಸಂಪೂರ್ಣ ಸುಳ್ಳು” ಎಂದರು. ಪಿಣರಾಯಿ ಅವರು ಕೇಂದ್ರ ಸಚಿವರ ಪ್ರಕಾರ, ಸನ್ಯಾಸಿಗಳ ಮೇಲೆ ದಾಳಿ ಮಾಡಿಲ್ಲ ಮತ್ತು ಅವರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರನ್ನು ಬಿಡಲಾಯಿತು ಎಂಬುದಾಗಿದೆ. ಎಬಿವಿಪಿ ಕಾರ್ಯಕರ್ತರೇ ಅವರ ಮೇಲೆ ಧಾಳಿ ಮಾಡಿದ್ದಾರೆ.
ಇದನ್ನು ಓದಿ : ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !
ಮುಂದುವರೆದು ಮಾತನಾಡಿದ ಅವರು ‘ಪೌರತ್ವ ಕಾಯ್ದೆ ತಿದ್ದುಪಡಿ ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ’. ಕೇಂದ್ರ ಸರಕಾರ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ಅದು ಆರ್.ಎಸ್.ಎಸ್. ನೀತಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿ ಮಾಡುವುದಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಮತ್ತೆ ಸಿಪಿಐ(ಎಂ) ಪಕ್ಷ ನೇತೃತ್ವದ ಎಲ್ ಡಿಎಫ್ ಗೆ ಆಡಳಿತ ಮರು ಆಯ್ಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ ಜನಪರ ಯೋಜನೆ ಹಾಗೂ ಅಭಿವೃದ್ದಿ ಕಾರ್ಯಗಳಿಂದಾಗಿ ಜನರ ಮೆಚ್ಚುಗೆ ಪಡೆದಿವೆ ಎಂದು ಪಿಣರಾಯಿ ವಿಜಯನ್ ಹೇಳಿದರು.