ಸಿಂಘು ಗಡಿ ಹಾಗೂ ಗಾಜಿಪುರ ಗಡಿಯಲ್ಲಿ ರೈತರು ಇಂದು ಹೋಳಿ ಆಚರಣೆಯ ಸಂದರ್ಭವಾಗಿ ಹಾಡುಗಳನ್ನು ಹಾಡುತ್ತಾ, ಡ್ರಮ್ಗಳನ್ನು ಬಾರಿಸುತ್ತಾ, ಕೇಂದ್ರದ ಬಿಜೆಪಿ ಸರಕಾರ ಬಂದಿರುವ ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ʻಹೋಲಿಕಾ ದಹನ್ʼ ಆಚರಿಸಿದರು.
ನವದೆಹಲಿ : ದೆಹಲಿಯ ಗಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಬೃಹತ್ ರೈತ ಆಂದೋಲವನ್ನು ನಡೆಸುತ್ತಿರುವ ರೈತರು ಇಂದು ಹೋಳಿ ಹಬ್ಬದ ಪ್ರಯುಕ್ತ ಹೋಲಿಕಾ ದಹನ್ ಆಚರಿಸುವ ಮೂಲಕ ಹೋರಾಟಗಾರರಿಗೆ ಹೊಸ ಸ್ಪೂರ್ತಿಯನ್ನು ನೀಡಿದರು.
ಹೋರಾಟಗಾರರು ನಾವು ದೆಹಲಿ ಮತ್ತು ಗಡಿಗಳಲ್ಲಿ ನಿಯೋಜನೆಗೊಂಡಿರುವ ಯುಪಿ ಪೊಲೀಸ್ ಸಿಬ್ಬಂದಿಗಳೂ ಸಹ ಹೋಳಿ ಆಚರಿಸಲು ಆಹ್ವಾನ ನೀಡುತ್ತಿದ್ದೇವೆ. ನಾವು ಅವರಿಗಾಗಿ ಅಗತ್ಯವಾದ ವ್ಯವಸ್ಥೆಗಳನ್ನು ಮಾಡುತ್ತೇವೆ ಮತ್ತು ಅವರೊಂದಿಗೆ ನಾವು ಸಹ ಹೋಳಿಯನ್ನು ಆಚರಿಸುತ್ತೇವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಮಾಧ್ಯಮದ ಮೂಲಕ ಕರೆ ನೀಡಿದರು.
ಇದನ್ನು ಓದಿ : ವಿಮೆ ಉದ್ದಿಮೆಯ ಖಾಸಗೀಕರಣ ‘ವಿದೇಶೀ’ಕರಣ ಅವಿವೇಕದ ನಡೆ
ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಹಬ್ಬಗಳನ್ನು ಆಚರಿಸುವಾಗಲೆಲ್ಲಾ ಗಡಿಯಲ್ಲಿ ಒಂದು ರೀತಿಯ ಅಹ್ಲಾದಕರವಾದ ವಿನಿಮಯವಿರುತ್ತದೆ. ಆದ್ದರಿಂದ ಇದನ್ನು ಗಾಜಿಪುರ ಗಡಿಯಲ್ಲಿ ಏಕೆ ಮಾಡಬಾರದು? ಆಹ್ಲಾದಕರ ವಿನಿಮಯವಾಗದಿದ್ದರೆ ಹೇಗೆ, ಇದರ ಅರ್ಥ ಪಾಕಿಸ್ತಾನದ ಗಡಿಗಿಂತ ಗಾಜಿಪುರ ಗಡಿ ಹೆಚ್ಚು ಅಪಾಯಕಾರಿ. ಈ ಗಡಿಗಳಲ್ಲೂ ನಾವು ರೈತ ಆಂದೋಲನದ ಮೂಲಕ ಚಳುವಳಿಗೆ ಇನ್ನಷ್ಟು ರೂಪುಕೊಡುತ್ತಿದ್ದೇವೆ ಎಂದು ಹೇಳಿದರು.
ಸುದ್ದಿಗಾರರು ರಾಕೇಶ್ ಟಿಕಾಯತ್ ಅವರನ್ನು ನೀವು ಹೋಳಿ ಆಚರಣೆಗೆ ಸರಕಾವನ್ನು ಆಹ್ವಾನಿಸುವೀರಾ? ಎಂಬ ಪ್ರಶ್ನೆಗೆ ʻʻನಾವು (ರೈತರು) ಗಡಿಯಲ್ಲಿರುವ ಭದ್ರತಾ ಪಡೆ ಮತ್ತು ಪೊಲೀಸರನ್ನು ಮಾತ್ರ ಆಹ್ವಾನಿಸುತ್ತೇವೆ ಹೊರತು ಕೇಂದ್ರ ಸರಕಾರವಲ್ಲ. ಗಾಜಿಪುರ ಗಡಿಯಲ್ಲಿ, ರೈತರು ಹೋಲಿ ಆಚರಿಸಲು ಹಾಡುಗಳನ್ನು ಹಾಡುತ್ತಿದ್ದಾರೆ ಮತ್ತು ಡ್ರಮ್ಗಳನ್ನು ಹೊಡೆಯುತ್ತಿದ್ದಾರೆ ಮತ್ತು ರೈತ ವಿರೋಧಿಯಾದ ಮೂರು ಕೃಷಿ ಕಾನೂನು ಪ್ರತಿಗಳನ್ನು ಸುಡಲಿದ್ದಾರೆ ಎಂದು ಹೇಳಿದರು.
ಕರಾಳ ಕೃಷಿ ಮಸೂದೆಗಳ ಪ್ರತಿಗಳ ದಹನದ ಈ ಐತಿಹಾಸಿಕ ಘಟನೆಯು ಬಾಬಾಸಾಹೇಬರ ಮನುಸ್ಮೃತಿ ದಹನವನ್ನು ನೆನಪಿಸುತ್ತದೆ. ಎರಡೂ ಮನುಷ್ಯ ವಿರೋಧಿಯಾದುವೇ ಮತ್ತು ದಹನಕ್ಕೆ ಅರ್ಹವಾದವುಗಳೇ.
ಕರಾಳ ಕೃಷಿ ಮಸೂದೆಗಳ ಪ್ರತಿಗಳ ದಹನದ ಈ ಐತಿಹಾಸಿಕ ಘಟನೆಯು ಬಾಬಾಸಾಹೇಬರ ಮನುಸ್ಮೃತಿ ದಹನವನ್ನು ನೆನಪಿಸುತ್ತದೆ. ಎರಡೂ ಮನುಷ್ಯ ವಿರೋಧಿಯಾದುವೇ ಮತ್ತು ದಹನಕ್ಕೆ ಅರ್ಹವಾದವುಗಳೇ. ಮನುಸ್ಮೃತಿ ಸಮಗ್ರ ಸಮಾಜದ ಅದಹ್ಪತನಕ್ಕೆ ಹೇತುವಾದರೆ, ಈ ಕೃಷಿ ಮಸೂದೆಗಳು ದೇಶದ ಬೆನ್ನೆಲುಬು ರೈತರ , ದೇಶದ ಆರ್ಥಿಕತೆಯ ನಾಶಕ್ಕೆ ಕಾರಣವಾಗುತ್ತವೆ.