ನವದೆಹಲಿ : ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ನರೇಂದ್ರ ಮೋದಿ ಮಾಡಿದ ಭಾಷಣ ಸದ್ಯ ನಗೆಪಾಟಲಿಗೀಡಾಗುತ್ತಿದೆ. “ಬಾಂಗ್ಲಾದೇಶ ವಿಮೋಚನೆಯ ಸಂದರ್ಭದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ” ಎಂಬ ಅವರ ಹೇಳಿಕೆಯು ಸಾಮಾಜಿಕ ತಾಣದಾದ್ಯಂತ ಟ್ರೋಲ್ ಆಗುತ್ತಿದೆ. ಈ ನಡುವೆ #LieLikeModi ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ.
ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 50ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಆ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದು ತನ್ನ ರಾಜಕೀಯ ಜೀವನದ ಮೊದಲ ಪ್ರತಿಭಟನೆಗಳಲ್ಲಿ ಒಂದಾಗಿತ್ತು. ನನ್ನ ಸಹೋದ್ಯೋಗಿಗಳು ಮತ್ತು ನಾನು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸತ್ಯಾಗ್ರಹದ ಸಮಯದಲ್ಲಿ ಜೈಲಿಗೆ ಹೋಗಲು ನನಗೆ ಅವಕಾಶ ಸಿಕ್ಕಿತು “ಎಂದು ಅವರು ಹೇಳಿಕೆ ನೀಡಿದ್ದರು.
ಮೋದಿಯವರ ಈ ಹೇಳಿಕೆಗೆ ಟ್ವಿಟರ್ ಮತ್ತು ಫೆಸ್ಬುಕ್ ನಲ್ಲಿ ನೆಟ್ಟಿಗರು ಆಕ್ರೋಶವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ ತಪ್ಪಿಯೂ ಸಹ ಒಂದು ಸತ್ಯ ಹೇಳುವುದಿಲ್ಲ” ಎಂದು ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. “ಬರ್ಲಿನ್ ಗೋಡೆ ಬಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅದರ ಮೇಲೆ ಕೂತಿದ್ದರು”,ಕ್ಯಾಲಿಕಟ್ ನಲ್ಲಿ ವಾಸ್ಕೋಡಗಾಮನನ್ನು ಸ್ವಾಗತಿಸಿದ್ದು ನರೇಂದ್ರ ಮೋದಿ ” ಎಂದು ಕಾಂಗ್ರೆಸ್ ವಕ್ತಾರ ಶ್ರೀವತ್ಸ ಟ್ವೀಟಿಸಿದ್ದಾರೆ.
“ಅವರನ್ನು ಯಾವಾಗ ಅರೆಸ್ಟ್ ಮಾಡಲಾಗಿತ್ತು? ಅದರ ಕುರಿತು ಫೈಲ್ ಗಳಲ್ಲಿ ಏನಾದರೂ ದಾಖಲೆಗಳಿವೆಯೇ? ಎಂದು ಮಾಜಿ ಐಎಫ್ ಎಸ್ ಆಫೀಸರ್ ಕೆಸಿ ಸಿಂಗ್ ಪ್ರಶ್ನಿಸಿದ್ದಾರೆ.
ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಅವರನ್ನು ಜೈಲುವಾಸ ಅನುಭವಿಸಿದ್ದರು ಎಂದು ಹೇಳುತ್ತಾರೆ. ಆದರೆ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿರಲಿಲ್ಲವೇ? ಹಾಗಾದರೆ ಅವರು ಜೈಲಿಗೆ ಹೋದದ್ದಾದರೂ ಎಲ್ಲಿಗೆ? ಅವರು ಪಾಕಿಸ್ತಾನದಲ್ಲಿದ್ದರೇ? ” ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಗೌರವ್ ಪಾಂಡಿ ಟ್ವೀಟ್ ಮಾಡಿದ್ದಾರೆ.
ಫೆಸ್ಬುಕ್ ನಲ್ಲಿ #LieLikeModi ಎಂಬ ಹ್ಯಾಶ್ ಟ್ಯಾಗ್ ನಲ್ಲಿ 1000 ಕ್ಕೂ ಹೆಚ್ಚು ಪೋಸ್ಟ್ ಗಳು ವೈರಲ್ ಆಗಿವೆ. ಟ್ವಿಟರ್ ನಲ್ಲಿ 1.44.000 ಟ್ವೀಟ್ ಗಳನ್ನು ಮಾಡಲಾಗಿದೆ. ಟ್ವಿಟರ್ ನಲ್ಲಿ #BalaNarendra ಎಂಬ ಹ್ಯಾಶ್ ಟ್ಯಾಗ್ ನಲ್ಲಿ 3000 ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. #freedomstruggle ಎಂಬ ಹ್ಯಾಶ್ ಟ್ಯಾಗ್ ನಲ್ಲಿ 7770 ಟ್ವೀಟ್ ಮಾಡಿಲಾಗಿದೆ.
ವೈರಲ್ ಆದ ಕೆಲ ಟ್ವೀಟ್ ಗಳು ಇಲ್ಲಿವೆ.
Young Modi guiding #MahatmaGandhi during freedom struggle #NoVoteTo_LiarModi #LieLikeModi pic.twitter.com/Lg4poSvaR3
— Gulzar Virk (@gvirkhtech) March 27, 2021
Modi along with his friends did Satyagrah for the freedom of Bangladesh.
Haters will say its photo shopped#LieLikeModi pic.twitter.com/KcxvwnadVo
— Shakuntala Sahu MLA (@ShakuntalaSahu0) March 26, 2021
Narendra Edison with first electrical bulb#LieLikeModi pic.twitter.com/z0RC4yPzJH
— 𝙿𝙰𝙻𝚆𝙸𝙽𝙳𝙴𝚁 ( ਛੋਟਾ ਲਿਖਾਰੀ )™ (@Chhotalikharii) March 26, 2021
Proud moment for the world when
Wright brothers invented aeroplane.#LieLikeModi pic.twitter.com/6gW4rMdsOe— Vijay Fulara (@imfulara) March 26, 2021
Freedom fighters of Bangladesh in 1971.. #LieLikeModi pic.twitter.com/KHfCf26zWN
— Rofl Shazi 2.0 🏹 (@Shazi786_) March 26, 2021
Re-posting my post from 2016:
PM Modi's Story weavers always get caught in their own lies.#LieLikeModi pic.twitter.com/bVHbg6EimC
— Saral Patel (@SaralPatel) March 26, 2021
Modi ji was the 1st man who landed on moon in 1965 !!
But haters will say this is photoshopped 😂#LieLikeModi pic.twitter.com/p6HI7cUMop
— Surbhi (@SurrbhiM) March 26, 2021
—Struggled for Bangladesh
—Sent pics on email in 1987
—Made tea using naali gas
—Entire Political Science
—Eradicate Corona in 21 days
—20 Lakh Crore Covid package
— 2 crore jobs/annum
—15 lakh in every account
—Chinese didn't capture our landModi The Biggest LIAR#LieLikeModi
— Gaurav Pandhi (@GauravPandhi) March 26, 2021
Greatest cricket captain of all time. #LieLikeModi pic.twitter.com/Lul0E4u2H4
— Dhoni❤ (@iamvaishali6) March 26, 2021
Modappa hosted the Last Supper. #LieLikeModi pic.twitter.com/7AH8rQs4yH
— die Schlau Katze | ಜಾಣ ಬೆಕ್ಕು | #ISupportFarmers🚜 (@Die5chlauKatz3) March 26, 2021