ಬೆಂಗಳೂರು : 2016 ರಿಂದ ನಿವೃತ್ತಿಯಾದ 7304 ಅಂಗನವಾಡಿ ನೌಕರರಿಗೆ ಇಡಿಗಂಟು ಹಣ ಬಿಡುಗಡೆಗಾಗಿ ಮತ್ತು ಈಗ ನಿವೃತ್ತಿಯಾಗುವ 29073 ಜನರಿಗೆ ಸೇವಾಹಿರಿತನದ ಗೌರವಧನವನ್ನು 2020 ಮಾರ್ಚ್ ನಿಂದ ಅನ್ವಯವಾಗುವಂತೆ ಜಾರಿ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ನೌಕರರು ಫ್ರೀಡಂ ಪಾರ್ಕ್ ನಲ್ಲಿ ನಿರಂತರ ಧರಣಿ ನಡೆಸುತ್ತಿದ್ದಾರೆ.
1980-85 ರಿಂದಲೂ ಐಸಿಡಿಎಸ್ ಯೋಜನೆಗೆ ಅಡಿಪಾಯ ಹಾಕಿದವರು ಅಂಗನವಾಡಿ ನೌಕರರು. ಇಂದು ಯಾವುದೇ ಸೌಲಭ್ಯವಿಲ್ಲದೆ ನಿವೃತ್ತಿಮಾಡುವ ಅಮಾನವೀಯ , ಅಸಂವಿಧಾನಾತ್ಮಕ ನಡೆಯನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಬಲವಾಗಿ ಖಂಡಿಸಿದೆ.
ಕಾರ್ಯಕರ್ತೆ ಸಹಾಯಕಿಯರಿಗೆ ಸೇವಾ ಹಿರಿತನದ ಸೇವಾ ಅವಧಿಯ ಆಧಾರದ ಮೇರೆಗೆ ಗೌರವ ಧನ ನಿಗಧಿ ಮಾಡಲು ಒತ್ತಾಯಿಸಲಾಗಿತ್ತು ಅದರಂತೆ ಇಲಾಖೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಮಾನ್ಯ ಸಚಿವರ ಹೇಳಿಕೆಯಲ್ಲಿ ಹಾಗೂ ಮಾರ್ಚ್ 4 ರ ಹೋರಾಟದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಅದರಂತೆ 20 ವರ್ಷಕ್ಕೂ ಮೇಲ್ಪಟ್ಟ 24,800 ಕಾರ್ಯಕರ್ತೆ 15,711 ಸಹಾಯಕಿಯರು ಸೇವೆ ಸಲ್ಲಿಸುತ್ತಿರುವವರು ಸದ್ಯದಲ್ಲಿ ಬಹಳಷ್ಟು ಕಾರ್ಯಕರ್ತರು ನಿವೃತ್ತಿ ವಯಸ್ಸುನ್ನು ತಲುಪುತ್ತಿದ್ದಾರೆ. ಈವರೆಗೆ ಸೇವೆ ಸಲ್ಲಿಸಿದ ಇವರಿಗೆ ಮಾರ್ಚ್ 2020 ರಿಂದಲೇ ಅನ್ವಯ ಆಗುವಂತೆ ಹಾಗೂ ಉಳಿದ ನೌಕರರಿಗೂ ತಕ್ಷಣ ಅಧಿವೇಶದಲ್ಲಿ 64.552 ಕಾರ್ಯಕರ್ತೆಯರಿಗೆ 59603 ಸಹಾಯಕಿರಿಗೆ ಸೇವಾ ಹಿರಿತನ ಗೌರವಧನ ಬಿಡುಗಡೆ ಮಾಡಲು ಬೇಕಾದ ವೆಚ್ಚ 153.25 ಕೋಟಿ ಹಣ ಬಿಡುಗಡೆ ಮಾಡುವ ಮೂಲಕ ಕೊರೋನಾ ವಾರಿಯರ್ಸ್ ಆಗಿ ದುಡಿದ ಈ ನೌಕರರನ್ನು ಶ್ಲಾಘಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಜೆಟ್ ನಲ್ಲಿ ನಿರ್ಲಕ್ಷ್ಯ : ರಾಜ್ಯವ್ಯಾಪಿ ಅಂಗನವಾಡಿ ನೌಕರರಿಂದ ಉಪವಾಸ ಸತ್ಯಾಗ್ರಹ
ರಾಜ್ಯದಲ್ಲಿ 2015-2016 ನೇ ಸಾಲಿನಿಂದ ಈವರೆಗೆ 2246 ಕಾರ್ಯಕರ್ತೆ, 5058 ಸಹಾಯಕಿ, ಒಟ್ಟು 7304 ಜನ ನಿವೃತ್ತರಾದವರಿಗೆ ಇನ್ನೂ 18-03-20II ಆದೇಶದ ಪ್ರಕಾರ ನೀಡಬೇಕಾದ 50 ಸಾವಿರ ಮೂವತ್ತು ಸಾವಿರ ಪರಿಹಾರವಾಗಿ ಇಡಿಗಂಟು ಜಾರಿ ಮಾಡದೇ ಈ ಯೋಜನೆಗಾಗಿ ದುಡಿದವರಿಗೆ ವಂಚನೆಗೊಳಪಡಿಸಿದೆ. ಈ ಯೋಜನೆಯನ್ನು ಕಟ್ಟಿ ಬೆಳೆಸಿದ ಈ ಕಾರ್ಯಕರ್ತರು ಯಾವ ಆರ್ಥಿಕ ಸಹಾಯ ಇಲ್ಲದೆ, ಕೆಲವು ಕಾರ್ಯಕರ್ತರು ನಿಧನ ಹೊಂದಿದ್ದಾರೆ. ಆದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಇವರಿಗೆ ಪರಿಹಾರಕ್ಕೆ ಬೇಕಾದ 27.40 ಕೋಟಿ ರೂ ಬಿಡುಗಡೆ ಮಾಡಲು ಒತ್ತಾಯಿಸಿದೆ.
ಅಂಗನವಾಡಿ ನೌಕರರಿಗೆ ನಿಪ್ರಯೋಜಕವಾದ NPS, LIC ಪಿಂಚಣಿ ಸೌಲಭ್ಯ ಜಾರಿಮಾಡಿ ಅಂಗನವಾಡಿ ನೌಕರರಿಗೆ ಸರ್ಕಾರ ದ್ರೋಹ ಬಗೆದಿದೆ. ಈ NPS ಯೋಜನೆ ಕೂಡ 2016 ರಿಂದ ಸ್ಥಗಿತಗೊಂಡಿದೆ. 20II ರಿಂದ ಜಾರಿ ಆದ ಪಿಂಚಣಿ ಯೋಜನೆಯಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಇಡಿಗಂಟು ಉಳಿದವರಿಗೆ ಸರ್ಕಾರದಿಂದ ಹಾಗೂ ಕಾರ್ಯಕರ್ತರಿಂದ ವಂತಿಗೆ 150-84 ಕಡಿತ ಮಾಡಲಾಗಿತ್ತು, ಆದರೆ 2011 ರಿಂದ ಕಡಿತ ಆದವರಲ್ಲೂ ಕೆಲವು ಜನರ ಹೆಸರು ಕೈಬಿಟ್ಟು ಹೋಗಿದೆ. ಬಜೆಟ್ನಲ್ಲಿ ಜಾರಿ ಮಾಡುವಲ್ಲಿ ಸರ್ಕಾರ ನಿರ್ಲಕ್ಷ ಮಾಡಿದ್ದನ್ನು ವಿರೋಧಿಸಿ ಖಾಯಂ ಪಿಂಚಣಿ ಹಾಗೂ ಪರಿಹಾರದ ಹಣ ಜಾರಿ ಮಾಡಲು ಒತ್ತಾಯಿಸಿದೆ. ನಿವೃತ್ತಿ ಸೌಲಭ್ಯಕ್ಕಾಗಿ ಬೇಕಿರುವ 47.82 ಕೋಟಿ ಹಣ ಬಿಡುಗಡೆಗೆ ಕೋರಲಾಗಿದೆ. ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕರೋನಾ ಸಂಧರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಶರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸದ ಒತ್ತಡದಿಂದ 15 ಜನ, ಕರೋನಾ ಕೆಲಸ ಮಾಡುವಾಗ 28 ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ 173 ಜನರಿಗೆ ಕರೊನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದು ಕೊಂಡಿದ್ದಾರೆ. ಕರೋನಾ ರೋಗಿಗಳನ್ನು ಸಂತೃಪ್ತಿಸಿದ್ದು ಮಾತ್ರವಲ್ಲದೇ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡಾ ಎದೆಗುಂದದೆ ಕೆಲಸ ಮಾಡಿದ ಈ ಹೆಣ್ಣು ಮಕ್ಕಳ ಸೈರ್ಯವನ್ನು ಮತ್ತು ಸೇವೆಯನ್ನು ಬರಿಯ ಮಾತುಗಳಲ್ಲಿ ಹೇಳಿದರೆ ಸಾಕೇ? ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ ಪ್ರಧಾನ ಕಾರ್ಯದರ್ಶಿ ಹೆಚ್ ಎಸ್ ಸುನಂದಾ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ಒತ್ತಾಯಿಸಿ ಬಿಬಿಎಂಪಿ ಚಲೋ
ಅಂಗನವಾಡಿ ಕೇಂದ್ರಗಳಲ್ಲಿ LKG-UKG ಕಡ್ಡಾಯ ಮಾಡಿ ಮೇಲ್ದರ್ಜೆಗೆ ಸೇರಿಸುವ ಬದಲಿಗೆ ಶಿಶುಪಾಲಾನಾ ಕೇಂದ್ರಗಳನ್ನಾಗಿ ಮಾಡಲು ಬಜೆಟ್ನಲ್ಲಿ ಬಂದಿರುವ ಪ್ರಸ್ತಾಪ ಕೈ ಬಿಡಬೇಕು. ಈ ಬೇಡಿಕೆಗಳಿಗೆ ಸಂಬಂಧಿಸಿ ಈಗಾಗಲೇ ಮಾರ್ಚ್ 4ರ ಹೋರಾಟದ ಸ್ಥಳಕ್ಕೆ ಬಂದು ಮೂಡಿಸಿದ್ದರು, ಮಾರ್ಚ್ 8 ರಂದು ಮಂಡನೆಯಾದ ಬಜೆಟ್ನಲ್ಲಿ ಪ್ರಸ್ತಾಪನ ಬಂದಿಲ್ಲದಿರುವುದನ್ನು ವಿರೋಧಿಸಿ ಮಾರ್ಚ್ 15 ರಂದು ರಾಜ್ಯಾದ್ಯಾಂತೆ 1 ದಿನ ಉಪವಾಸ ನಡೆಸಿ, ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿದ್ದರು ಕೂಡ ಸರ್ಕಾರ ಸ್ಪಂದನೆ ಮಾಡದಿರುವುದನ್ನು ವಿರೋಧಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ನಿರಂತರ ಧರಣಿಯನ್ನು ನಡೆಸಲಾಗುತ್ತಿದೆ. ಈಗಲಾದರೂ ಸರ್ಕಾರ ಕೂಡಲೇ ಸೂಕ್ತ ಕ್ರಮ ವಹಿಸಬೇಕೆಂದೂ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.