ನವದೆಹಲಿ : ರಾಜ್ಯಸಭೆಯಲ್ಲಿ ರಾಷ್ಟ್ರೀಯ ರಾಜಧಾನಿ(ತಿದ್ದುಪಡಿ) ಮಸೂದೆ-2021 ಕೇಂದ್ರವು ಲೋಕಸಭೆ-ರಾಜ್ಯಸಭೆಗಳಲ್ಲಿ ಅಂಗೀಕಾರ ಮಾಡಿದ್ದು ಇದೊಂದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಖಂಡಿಸಿದರು.
ಇಂದು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದ ಕೂಡಲೇ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜನರಿಗೆ ಅಧಿಕಾರವನ್ನು ಪುನಃಸ್ಥಾಪಿಸುವ ಸಲುವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಇದನ್ನು ಓದಿ : ಸಂಸತ್ತಿನ ಸ್ಥಾಯೀ ಸಮಿತಿಯ ರೈತ-ವಿರೋಧಿ ಮತ್ತು ಜನ-ವಿರೋಧಿ ಶಿಫಾರಸು ರೈತರಿಗೆ ಮಾಡಿರುವ ಅವಮಾನ, ವಿಶ್ವಾಸಘಾತ -ಎಐಕೆಎಸ್ ಖಂಡನೆ
ದೆಹಲಿ ರಾಜ್ಯದ ಸ್ಥಾನಮಾನವನ್ನೇ ಕಸಿದುಕೊಳ್ಳುವಂತ ಈ ತಿದ್ದುಪಡಿ ಮಸೂದೆಯೂ ಲೋಕಸಭೆಯಲ್ಲಿ ಅಂಗೀಕಾರ ಪಡೆಯಿತು ಹಾಗೂ ಇಂದು ರಾಜ್ಯಸಭೆಯಲ್ಲಿಯೂ ಅಂಗೀಕಾರ ಪಡೆದುಕೊಂಡಿದೆ. ರಾಜ್ಯ ಸರಕಾರಕ್ಕೆ ಹೆಚ್ಚಿನ ಅಧಿಕಾರ ಕಸಿಕೊಂಡಿದ್ದು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರವನ್ನು ಕಲ್ಪಿಸುವಂತಹ ಮಸೂದೆ ಇದಾಗಿದೆ ಎಂದು ಅರವಿಂದ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದರು.
ಭಾರತೀಯ ಪ್ರಜಾಪ್ರಭುತ್ವಕ್ಕೆ ದುಃಖದ ದಿನ. ಎಂತಹ ಅಡೆತಡೆಗಳು ಏನೇ ಇರಲಿ, ನಾವು ಉತ್ತಮ ಕೆಸಲ ಮಾಡುವುದನ್ನು ಮುಂದುವರೆಸುತ್ತೇವೆ. ನಮ್ಮ ಕೆಲಸಗಳು ನಿಲ್ಲುವುದಿಲ್ಲ ಅಥವಾ ನಿಧಾನವಾಗುವುದಿಲ್ಲ. ಎಂದು ಹೇಳಿದರು.
ದೆಹಲಿ ಜನರಿಗಾಗಿ ನಾವು ಏನನ್ನೂ ಮಾಡಲು ಸಿದ್ಧರಿದ್ದೇವೆ. ಜನರ ಆಡಳಿತ ಕುಸಿಯಲು ನಾವು ಬಿಡುವುದಿಲ್ಲ ಮತ್ತು ನಾವು ಗೆದ್ದಿದ್ದೇವೆ. ದೆಹಲಿಯ ಜನರ ಶಕ್ತಿಯನ್ನು ಕಸಿದುಕೊಳ್ಳಲು ಸಹ ನಾವು ಅವಕಾಶ ನೀಡುವುದಿಲ್ಲವೆಂದರು.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರವರು ಸಹ “ಪ್ರಜಾಪ್ರಭುತ್ವದ ಕರಾಳ ದಿನ” ಎಂದು ಕರೆದರು.
ಸಿಸೋಡಿಯಾ ಅವರು ʻʻಪ್ರಜಾಪ್ರಭುತ್ವದ ಕಲಾಶ ದಿನಾ ಇದಾಗಿದೆ. ಜನರಿಂದ ಚುನಾಯಿತವಾದ ಒಂದು ರಾಜ್ಯ ಸರಕಾರದ ಹಕ್ಕನು ಕಿತ್ತುಕೊಂಡು ಎಲ್ಲಿಗೆ ಹಸ್ತಾಂತರ ಮಾಡುತ್ತೀರಿʼʼ ಎಂದು ಪ್ರಶ್ನೆ ಮಾಡಿದರು. ಮುಂದುವರೆದು ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯುವ ಸಂಸತ್ತಿನಿಂದಲೇ ಪ್ರಜಾಪ್ರಭುತ್ವದ ಹತ್ಯೆ ಮಾಡಿರುವುದು ಖಂಡನೀಯ. ದೆಹಲಿಯ ಜನತೆ ಈ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಾರೆʼʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ : ದೆಹಲಿ ರಾಜ್ಯಕ್ಕೆ ಇರುವ ಅಧಿಕಾರವನ್ನು ಕಸಿದುಕೊಳ್ಳಬೇಡಿ: ಮಲ್ಲಿಕಾರ್ಜುನ ಖರ್ಗೆ
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹೆಚ್ಚಿನ ಅಧಿಕಾರ ನೀಡುವ ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆಯಾಗುತ್ತಿದ್ದ ಸಂದರ್ಭದಲ್ಲಿ ಇದೊಂದು ಅಸಂವಿಧಾನಿಕ ನಡೆ ಎಂದು ವಿರೋಧ ಪಕ್ಷಗಳಿಂದ ಕೋಲಾಹಲವೆದ್ದಿತು. ಮಸೂದೆ ಅಂಗೀಕಾರಕ್ಕೆ ಮೊದಲೇ ಕಾಂಗ್ರೆಸ್, ಎಸ್.ಪಿ., ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಬಿಜೆಡಿ ಸದಸ್ಯರ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಸದನದಿಂದ ಹೊರನಡೆದರು.
ಇಂದು ರಾಜ್ಯಸಭೆಯಲ್ಲಿ ಧ್ವನಿಮತದಿಂದ ಈ ಮಸೂದೆ ಅಂಗೀಕಾರಗೊಂಡಿತು. ಮಸೂದೆ ಪರ 83 ಮತ್ತು 45 ಮಂದಿ ಸದಸ್ಯರು ತಮ್ಮ ವಿರೋಧ ವ್ಯಕ್ತಪಡಿಸಿದರು.
ಆಡಳಿತದ ವಿಚಾರದಲ್ಲಿ ರಾಜ್ಯ ಸರಕಾರವು ಲೆಫ್ಟಿನೆಂಟ್ ಗವರ್ನರ್ ಅವರ ಸಮ್ಮತಿಯನ್ನು ಪಡೆಯಬೇಕಾಗಿಲ್ಲ ಎಂಬ ಸುಪ್ರೀಂ ತೀರ್ಪಿನ ಮೇಲೆ ಪರಿಣಾಮ ಬೀರಲು ತಿದ್ದುಪಡಿ ಮಸೂದೆ ತರಲಾಗಿದೆ.