ಅಕ್ಷಿ-ಶ್ರೇಷ್ಠ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಚಿತ್ರ: ಜರ್ಸಿ, ಅಸುರನ್, ಬಿರಿಯಾನಿ, ಬಾರ್ಡೋ, ಚಿಚೋರೆ ಪ್ರಶಸ್ತಿ ಬಾಚಿಕೊಂಡ ಚಿತ್ರಗಳು

ಹೊಸದಿಲ್ಲಿ: ‘ಅಕ್ಷಿ’ ಶ್ರೇಷ್ಟ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಪ್ರಶಸ್ತಿಯನ್ನು ಬಾಚಿಕೊಂಡಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಶ್ರೇಷ್ಟ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇಂದು ಬಿಡುಗಡೆಯಾದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಪ್ರಕಟಗೊಂಡಿದೆ.

ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಮೀಡಿಯಾ ಸೆಂಟರ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಚಿತ್ರನಿರ್ಮಾಪಕ ಎನ್‌.ಚಂದ್ರ ನೇತೃತ್ವದ ಸಮಿತಿ ಘೋಷಿಸಿತು. ಈ ವರ್ಷ ಫೀಚರ್ ಚಲನಚಿತ್ರ ವಿಭಾಗದಲ್ಲಿ 461 ಚಿತ್ರಗಳು ಹಾಗೂ ನಾನ್-ಫೀಚರ್ ಚಲನಚಿತ್ರ ವಿಭಾಗದಲ್ಲಿ 220 ಚಿತ್ರಗಳಿದ್ದವು. 13 ರಾಜ್ಯಗಳಿಂದ ಪ್ರವೇಶಾತಿ ಪಡೆದಿದ್ದವು.

ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ ‘ಚಿಚೋರೆ’ ಚಿತ್ರವು ಅತ್ಯುತ್ತಮ ಹಿಂದಿ ಚಿತ್ರ ಹಾಗೂ ‘ಮಣಿಕರ್ಣಿಕಾ’, ‘ಪಂಗಾ’ ಚಿತ್ರಗಳಲ್ಲಿ ನೀಡಿರುವ ಉತ್ತಮ ಅಭಿನಯಕ್ಕೆ ಕಂಗನಾ ರಣಾವತ್ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಅಸುರನ್’ ಚಿತ್ರದ ಪಾತ್ರಕ್ಕೆ ಧನುಷ್,  ‘ಬೋಂಸ್ಲೆ’ ಚಿತ್ರದ ಪಾತ್ರಕ್ಕೆ ಮನೋಜ್ ವಾಜಪೇಯಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭ್ಯವಾಗಿದೆ.

ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ವಿಕ್ರಮ್‌ ಮೋರ್‌ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ಹಾಗೂ ಪಿ.ಆರ್‌.ರಾಮದಾಸ ನಾಯ್ಡು ಅವರು ಬರೆದ ಕನ್ನಡ ಸಿನಿಮಾ: ಜಾಗತಿಕ ಸಿನಿಮಾ; ವಿಕಾಸ, ಪ್ರೇರಣೆ, ಪ್ರಭಾವ ಕೃತಿಗೆ ಸಿನಿಮಾ ಕುರಿತ ಉತ್ತಮ ಕೃತಿ ಪ್ರಶಸ್ತಿ ಲಭಿಸಿದೆ.

ಮರಾಠಿ ಚಿತ್ರವಾದ ‘ಆನಂದಿ ಗೋಪಾಲ್‌’ ಸಾಮಾಜಿಕ ಸಮಸ್ಯೆಯ ಮೇಲೆ ಚಿತ್ರೀಕರಿಸಲಾದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ತಾಜ್‌ಮಹಲ್‌’ ಚಿತ್ರಕ್ಕೆ ನರ್ಗೀಸ್‌ ದತ್‌ ಪ್ರಶಸ್ತಿ, ನಟ ಮಹೇಶ್‌ ಬಾಬು ನಟನೆಯ ತೆಲುಗು ಚಿತ್ರ ‘ಮಹರ್ಷಿ’ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ. ಮೊದಲ ಚಿತ್ರಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಮಾತುಕುಟ್ಟಿ ಕ್ಸೇವಿಯರ್‌ ನಿರ್ದೇಶನದ ಮಲಯಾಳಂನ ‘ಹೆಲನ್‌’ ಚಲನಚಿತ್ರವು ಪಡೆದಿದೆ.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ

ಸಿನಿಮಾ ಸ್ನೇಹಿ ರಾಜ್ಯ: ಸಿಕ್ಕಿಂ

ಚಿತ್ರರಂಗದ ಕುರಿತ ಅತ್ಯುತ್ತಮ ಪುಸ್ತಕ: ಎ ಗಾಂಧಿಯನ್ ಅಫೇರ್: ಇಂಡಿಯಾಸ್‌ ಕ್ಯೂರಿಯಸ್‌ ಪೋಟ್ರಾಯಲ್‌ ಆಫ್‌ ಲವ್‌ ಇನ್‌ ಸಿನಿಮಾ, ಸಂಜಯ್ ಸೂರಿ

(ವಿಶೇಷ ಉಲ್ಲೇಖ- ಅಶೋಕ್ ರಾಣೆ ಬರೆದ ಸಿನಿಮಾ ಪಹರಾನಾ ಮನುಸ್,  ಪಿ.ಆರ್. ರಾಮದಾಸ ನಾಯ್ಡು ಬರೆದ ಕನ್ನಡ ಸಿನಿಮಾ: ಜಾಗತಿಕ ಸಿನಿಮಾ ವಿಕಾಸ-ಪ್ರೇರಣೆ ಪ್ರಭಾವ)

ಅತ್ಯುತ್ತಮ ಚಲನಚಿತ್ರ ವಿಮರ್ಶಕ: ಸೋಹಿನಿ ಚಟ್ಟೋಪಾಧ್ಯಾಯ

ನಾನ್-ಫೀಚರ್‌ ವಿಭಾಗ:

ಅತ್ಯುತ್ತಮ ನಿರೂಪಣೆ: ವೈಲ್ಡ್ ಕರ್ನಾಟಕ, ಸರ್ ಡೇವಿಡ್ ಅಟೆನ್‌ಬರೋ

ಅತ್ಯುತ್ತಮ ಸಂಪಾದನೆ (ಎಡಿಟಿಂಗ್): ಶಟ್ ಅಪ್ ಸೋನಾ, ಅರ್ಜುನ್ ಗೌರಿಸೇರಿಯಾ

ಅತ್ಯುತ್ತಮ ಆಡಿಯೋಗ್ರಫಿ: ರಾಧಾ (ಮ್ಯೂಸಿಕಲ್), ಆಲ್ವಿನ್ ರೆಗೊ ಮತ್ತು ಸಂಜಯ್ ಮೌರ್ಯ

ಅತ್ಯುತ್ತಮ ಆನ್-ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್: ರಾಹಾಸ್ (ಹಿಂದಿ), ಸಪ್ತರ್ಶಿ ಸರ್ಕಾರ್

ಅತ್ಯುತ್ತಮ ಛಾಯಾಗ್ರಹಣ: ಸೊನ್ಸಿ, ಸವಿತಾ ಸಿಂಗ್

ಅತ್ಯುತ್ತಮ ನಿರ್ದೇಶನ: ನಾಕ್ ನಾಕ್ ನಾಕ್ (ಇಂಗ್ಲಿಷ್ / ಬಂಗಾಳಿ), ಸುಧಾನ್ಶು ಸಾರಿಯಾ

ಕುಟುಂಬ ಮೌಲ್ಯಗಳ ಅತ್ಯುತ್ತಮ ಚಿತ್ರ: ಒರು ಪಾದಿರಾ ಸ್ವಪ್ನಮ್ ಪೋಲೆ (ಮಲಯಾಳಂ)

ಅತ್ಯುತ್ತಮ ಕಿರುಕಥೆ: ಕಸ್ಟಡಿ (ಹಿಂದಿ / ಇಂಗ್ಲಿಷ್)

ವಿಶೇಷ ತೀರ್ಪುಗಾರರ ಪ್ರಶಸ್ತಿ: ಸ್ಮಾಳ್‌ ಸ್ಕೇಲ್‌ ಸೊಸೈಟೀಸ್ (ಇಂಗ್ಲಿಷ್)

ಅತ್ಯುತ್ತಮ ಆನಿಮೇಷನ್ ಚಿತ್ರ: ರಾಧಾ (ಮ್ಯೂಸಿಕಲ್)

ಅತ್ಯುತ್ತಮ ತನಿಖಾ ಚಿತ್ರ: ಜಕ್ಕಲ್

ಅತ್ಯುತ್ತಮ ಪರಿಶೋಧನಾ ಚಿತ್ರ: ವೈಲ್ಡ್ ಕರ್ನಾಟಕ (ಇಂಗ್ಲಿಷ್)

ಅತ್ಯುತ್ತಮ ಶಿಕ್ಷಣ ಚಿತ್ರ: ಆಪಲ್‌ ಆಂಡ್‌ ಆರೆಂಜಸ್ (ಇಂಗ್ಲಿಷ್)

ಸಾಮಾಜಿಕ ಸಮಸ್ಯೆಗಳ ಕುರಿತು ಅತ್ಯುತ್ತಮ ಚಿತ್ರ: ಹೋಲಿ ರೈಟ್ಸ್ (ಹಿಂದಿ) ಮತ್ತು ಲಾಡ್ಲಿ (ಹಿಂದಿ)

ಅತ್ಯುತ್ತಮ ಪರಿಸರ ಚಲನಚಿತ್ರ: ದಿ ಸ್ಟಾರ್ಕ್‌ ಸೇವಿಯರ್ಸ್ (ಹಿಂದಿ)

ಅತ್ಯುತ್ತಮ ಪ್ರಚಾರ ಚಿತ್ರ:‌ ದಿ ಶವರ್ (ಹಿಂದಿ)

ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಲನಚಿತ್ರ: ಶ್ರೀಕ್ಷೇತ್ರ-ರು-ಸಾಜಿತಾ (ಒಡಿಯಾ)

ಅತ್ಯುತ್ತಮ ಜೀವನಚರಿತ್ರೆಯ ಚಿತ್ರ: ಎಲಿಫೆಂಟ್ಸ್‌ ಡು ರಿಮೆಂಬರ್ (ಇಂಗ್ಲಿಷ್)

ಅತ್ಯುತ್ತಮ ಎಥ್ನೊಗ್ರಾಫಿಕ್ ಫಿಲ್ಮ್: ಚರಣ್-ಅಟ್ವಾ ದಿ ಎಸೆನ್ಸ್ ಆಫ್ ಬೀಯಿಂಗ್ ಎ ನೋಮಾಡ್ (ಗುಜರಾತಿ)

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: ಖಿಸಾ (ಮರಾಠಿ)

ಅತ್ಯುತ್ತಮ ನಾನ್‌ ಫೀಚರ್ ಚಲನಚಿತ್ರ: ಆನ್‌ ಇಂಜಿನೀರ್ಡ್‌ ಡ್ರೀಮ್ (ಹಿಂದಿ)

ಫೀಚರ್‌ ಫಿಲ್ಮ್‌ ವಿಭಾಗ:

ವಿಶೇಷ ಉಲ್ಲೇಖ: ಬಿರಿಯಾನಿ (ಮಲಯಾಳಂ), ಜೊನಕಿ ಪೊರುವಾ (ಅಸ್ಸಾಮೀಸ್), ಲತಾ ಭಗವಾನ್ ಕರೇ (ಮರಾಠಿ), ಪಿಕಾಸೊ (ಮರಾಠಿ)

ಪ್ರಾದೇಶಿಕವಾರು ವಿಭಾಗದಲ್ಲಿ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದ ಚಿತ್ರಗಳು

ಅಕ್ಷಿ (ಕನ್ನಡ), ಪಿಂಗಾರ (ತುಳು), ಕಾಜ್ರೊ (ಕೊಂಕಣಿ), ಜರ್ಸಿ (ತೆಲುಗು), ಅಸುರನ್ (ತಮಿಳು), ಕಳ್ಳ ನೋಟ್ಟಂ (ಮಲಯಾಳಂ), ಬಾರ್ಡೋ (ಮರಾಠಿ), ಚಿಚೋರೆ (ಹಿಂದಿ), ಗುಮ್ನಾಮಿ (ಬಂಗಾಳಿ), ಕೆಂಜೀರಾ(ಪಾನಿಯಾ ಚಿತ್ರ), ಅನು ರುವಾಡ್ (ಮಿಶಿಂಗ್ ಚಿತ್ರ), ಲೆವ್ದುಹ್ (ಖಾಸಿ ಚಲನಚಿತ್ರ), ಚೋರಿಯನ್ ಚೋರೊನ್ ಸೆ ಕಾಮ್ ನಹಿ ಹೋತಿ (ಹರ್ಯಾಣಿ ಚಿತ್ರ), ಭೂಲನ್ ದಿ ಮೇಝ್ (ಛತ್ತೀಸ್‌ ಗಢ್ ಚಿತ್ರ), ರಬ್ ದ ರೇಡಿಯೋ 2 (ಪಂಜಾಬಿ ಚಿತ್ರ), ಸಲಾ ಬುಧರ್ ಬದ್ಲಾ ಮತ್ತು ಕಲಿರಾ ಅತಿಟಾ (ಒಡಿಯಾ ಚಿತ್ರ), ಈಗಿ ಕೋನಾ (ಮಣಿಪುರಿ ಚಿತ್ರ), ರೋನುವಾ- ವೂ ನೆವೆರ್‌ ಸರೆಂಡರ್ (ಅಸ್ಸಾಮೀಸ್ ಚಲನಚಿತ್ರ),

ಅತ್ಯುತ್ತಮ ಸಾಹಸ: ಅವನೇ ಶ್ರೀಮನ್ನಾರಾಯಣ (ಕನ್ನಡ), ಅತ್ಯುತ್ತಮ ನೃತ್ಯ ಸಂಯೋಜನೆ: ಮಹರ್ಷಿ (ತೆಲುಗು), ಅತ್ಯುತ್ತಮ ವಿಶೇಷ ಪರಿಣಾಮ (ಸ್ಪೆಷಲ್‌ ಎಫೆಕ್ಟ್ಸ್): ಮರಕ್ಕಾರ್ ಅರಬಿಕ್ಕಡಲಿಂಡೆ ಸಿಂಹಮ್ (ಮಲಯಾಳಂ), ವಿಶೇಷ ತೀರ್ಪುಗಾರರ ಪ್ರಶಸ್ತಿ: ಒತ್ತ ಸೆರುಪ್ಪು ಸೈಝ್-7 (ತಮಿಳು), ಅತ್ಯುತ್ತಮ ಸಾಹಿತ್ಯ: ಕೋಲಾಂಬಿ (ಮಲಯಾಳಂ),

ಅತ್ಯುತ್ತಮ ಹಾಡುಗಳು: ವಿಶ್ವಾಸಂ (ತಮಿಳು), ಸಂಗೀತ ನಿರ್ದೇಶನ: ಜ್ಯೇಸ್ತೋ ಪುತ್ರೊ, ಮೇಕಪ್ ಕಲಾವಿದ: ಹೆಲೆನ್, ಅತ್ಯುತ್ತಮ ನಿರ್ಮಾಣ ವಿನ್ಯಾಸ: ಆನಂದಿ ಗೋಪಾಲ್, ಅತ್ಯುತ್ತಮ ಸಂಪಾದನೆ (ಎಡಿಟಿಂಗ್): ಜೆರ್ಸಿ (ತೆಲುಗು), ಅತ್ಯುತ್ತಮ ಆಡಿಯೋಗ್ರಫಿ: ಲೆವ್ಡುಹ್ (ಖಾಸಿ), ಅತ್ಯುತ್ತಮ ಚಿತ್ರಕಥೆ (ಸ್ಕ್ರೀನ್‌ ಪ್ಲೇ), ಮೂಲ ಚಿತ್ರಕಥೆ: ಜ್ಯೇಶ್ಟೋ ಪುತ್ರಿ,

ರೂಪಾಂತರಗೊಂಡ ಚಿತ್ರಕಥೆ: ಗುಮ್ನಾಮಿ

ಸಂಭಾಷಣೆ ಬರಹಗಾರ: ತಾಷ್ಕೆಂಟ್ ಫೈಲ್ಸ್ (ಹಿಂದಿ), ಅತ್ಯುತ್ತಮ ಛಾಯಾಗ್ರಹಣ: ಜಲ್ಲಿಕಟ್ಟು (ಮಲಯಾಳಂ), ಅತ್ಯುತ್ತಮ ಹಿನ್ನೆಲೆ ಗಾಯಕಿ: ಬಾರ್ಡೋ (ಮರಾಠಿ), ಅತ್ಯುತ್ತಮ ಪ್ಲೇಬ್ಯಾಕ್ ಗಾಯಕ: ಕೇಸ್ರಿ, ತೇರಿ ಮಿಟ್ಟಿ (ಹಿಂದಿ). ಅತ್ಯುತ್ತಮ ಪೋಷಕ ನಟಿ: ತಾಷ್ಕೆಂಟ್ ಫೈಲ್ಸ್, ಪಲ್ಲವಿ ಜೋಶಿ, ಅತ್ಯುತ್ತಮ ಪೋಷಕ ನಟ: ಸೂಪರ್ ಡಿಲಕ್ಸ್, ವಿಜಯ ಸೇತುಪತಿ,

ಅತ್ಯುತ್ತಮ ನಿರ್ದೇಶನ: ಬಟ್ಟರ್ ಹೂರೈನ್, ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ), ಪರಿಸರ ಸಂರಕ್ಷಣೆ ಕುರಿತು ಅತ್ಯುತ್ತಮ ಚಿತ್ರ: ವಾಟರ್‌ ಬರಿಯಲ್, ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಹೆಲೆನ್ (ಮಲಯಾಳಂ) ಅತ್ಯುತ್ತಮ ಚಲನಚಿತ್ರ: ಮರಕ್ಕರ್ ಅರಬಿಕ್ಕಡಲಿಂಡೆ ಸಿಂಹಮ್ (ಮಲಯಾಳಂ).

Donate Janashakthi Media

Leave a Reply

Your email address will not be published. Required fields are marked *