ಬೆಂಗಳೂರು : ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸುತ್ತ ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರವರು ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರ ಮುಂದಾಗಬೇಕೆಂದು ಹೇಳಿದರು.
ನೆನ್ನೆ ಅರ್ಧಕ್ಕೆ ನಿಂತ ಚರ್ಚೆಯನ್ನು ಮುಂದುವರೆಸಿದ ರಮೇಶ್ ಕುಮಾರ್ ಮುಂದುವರೆದು ರಸ್ತೆ ಹಂಪಗಳ ಬಗ್ಗೆಯೂ ಅಸಮಾಧಾನವನ್ನು ಹೊರಹಾಕಿದರು. ಯಾವ ರಸ್ತೆ ಎಷ್ಟು ಹಂಪ್ಗಳನ್ನು ಅಂದಾಜು ಗೊತ್ತಿರಬೇಕು. ಇದರ ಬಗ್ಗೆ ಗಮನಹರಿಸಬೇಕಿದೆ.
ಸರಕಾರ ನಡೆಸುವವರಿಗೆ ಪಂಚೇಂದ್ರಿಯಗಳು ಎಚ್ಚರವಾಗಿರಬೇಕು. ಸದಾಕಾಲ ಕಣ್ಣು, ಕಿವಿ ತೆರೆದುಕೊಂಡು ಜನರ ಕಷ್ಟಕ್ಕೆ ಸ್ಪಂದಿಸಬೇಕು. ನಿರ್ಲಕ್ಷ್ಯ ವಹಿಸಬಾರದು. ಅಧಿಕಾರವಹಿಸಿಕೊಂಡವರು ನೀತಿಗಳನ್ನು ರೂಪಿಸುತ್ತಾರೆ. ಕಾರ್ಯಾಂಗ ಅದರ ಆಚರಣೆಗೆ ಮುಂದಾಗಬೇಕೆಂದು ಹೇಳಿದರು.
ಯಾವ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೆ ಮೊದಲ ಪ್ರಾಶಸ್ತ್ಯ ವಿರುವುದಿಲ್ಲವೊ ಅದು ಪ್ರಜಾಪ್ರಭುತ್ವವೇ ಅಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಸತ್ತ ವ್ಯಕ್ತಿಯ ಕುಟುಂಬಗಳಿಗೆ ಶವಸಂಸ್ಕಾರ ಮಾಡಲು ಶವವನ್ನು ನೀಡುವುದಿಲ್ಲ. ಹಣ ಕಟ್ಟಿದರೆ ಮಾತ್ರ ಶವ ನೀಡುತ್ತಾರೆ. ಇದೆಂತಹ ಮಾನವೀಯತೆ? ಇದಕ್ಕೆ ಕಾನೂನು ಮಾಡಬೇಕಲ್ಲವೇ? ಎಂದು ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು.