ಲೋಕಸಭೆ, ವಿಧಾನಸಭೆಗೆ ಉಪಚುನಾವಣೆ ಘೋಷಣೆ: ಏಪ್ರಿಲ್‌ 17ರಂದು ಮತದಾನ

ನವದೆಹಲಿ: ರಾಜ್ಯದಲ್ಲಿ ತೆರವಾಗಿದ್ದ ಎರಡು ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದೆ. (ಸಿಂಧಗಿ ವಿಧಾನಸಭೆಗೆ ಉಪಚುನಾವಣೆ ಘೋಷಣೆಯಾಗಿಲ್ಲ).

ಒಟ್ಟಾರೆಯಾಗಿ ದೇಶದ ಎರಡು ಲೋಕಸಭೆ ಹಾಗೂ 14 ವಿಧಾನಸಭೆಗಳಿಗೆ ಏಪ್ರಿಲ್‌ 17ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ.

ಮಾರ್ಚ್‌ 23ರಂದು ಅಧಿಸೂಚನೆ ಹೊಡರಿಸಲಾಗುವುದು ಮತ್ತು ಮತ ಏಣಿಕೆಯು ಮೇ 02, 2021ರಂದು ನಡೆಯಲಿದೆ. ಅಂದೇ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಚುನಾವಣಾ ದಿನಾಂಕದ ವೇಳಾಪಟ್ಟಿಯ ಕೇಂದ್ರ ಚುನಾವಣಾ ಆಯೋಗ ಹೇಳಿಕೆ ನೋಡಲು ಕ್ಲಿಕ್‌ ಮಾಡಿರಿ

ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳು :

  1. ಆಂಧ್ರಪ್ರದೇಶದ ತಿರುಪತಿ (ಎಸ್‌.ಸಿ.) ಲೋಕಸಭಾ ಕ್ಷೇತ್ರ
  2. ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರಗಳು

  1. ಗುಜರಾತ್‌ ರಾಜ್ಯದ ಮೋರ‍್ವಾ ಹದಾಫ್‌ (ಎಸ್‌.ಟಿ. ಮೀಸಲು)
  2. ಜಾರ್ಖಂಡ್‌ ರಾಜ್ಯದ ಮಧುಪುರ್‌
  3. ಕರ್ನಾಟಕ ರಾಜ್ಯದ ಬಸವಕಲ್ಯಾಣ
  4. ಕರ್ನಾಟಕ ರಾಜ್ಯದ ಮಸ್ಕಿ (ಎಸ್‌.ಟಿ. ಮೀಸಲು)
  5. ಮಧ್ಯಪ್ರದೇಶದ ದಾಮೋಹ್‌
  6. ಮಹಾರಾಷ್ಟ್ರದ ಪಂಡರಾಪುರ
  7. ಮಿಜೋರಾಂ ರಾಜ್ಯದ ಸೆರ್‌ಚಿಪ್‌ (ಎಸ್‌.ಟಿ. ಮೀಸಲು)
  8. ನಾಗಾಲ್ಯಾಂಡ್‌ ರಾಜ್ಯದ ನೋಕ್‌ಸೇನ್‌ (ಎಸ್‌.ಟಿ. ಮೀಸಲು)
  9. ಓಡಿಶಾ ರಾಜ್ಯದ ಪಿಪಿಲಿ
  10. ರಾಜಸ್ಥಾನ ರಾಜ್ಯದ ಸಹರಾ
  11. ರಾಜಸ್ಥಾನ ರಾಜ್ಯದ ಸುಝನ್‌ಘರ್‌ (ಎಸ್‌.ಸಿ. ಮೀಸಲು)
  12. ರಾಜಸ್ಥಾನ ರಾಜ್ಯದ ರಾಜ್‌ಸಮಂದ್‌
  13. ತೆಲಂಗಾಣ ರಾಜ್ಯದ ನಾಗಾರ್ಜುನ ಸಾಗರ
  14. ಉತ್ತರಖಂಡ ರಾಜ್ಯದ ಸೆಲ್ಟ್‌

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಚುನಾವಣೆಯ ಪ್ರಕ್ರಿಯೆ ವೇಳಾಪಟ್ಟಿ ಕೆಳಗಿನಂತಿವೆ.

  • ಮಾರ್ಚ್‌ 23, 2021ರಂದು ಅಧಿಸೂಚನೆ ಹೊರಡಿಸಲಾಗುವುದು.
  • ಮಾರ್ಚ್‌ 30, 2021ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕ
  • ಮಾರ್ಚ್‌ 31, 2021ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ
  • ಏಪ್ರಿಲ್‌ 03, 2021ರಂದು ನಾಮಪತ್ರಗಳ ವಾಪಸ್ಸು ಪಡೆಯಲು ಕಡೆಯ ದಿನಾಂಕ
  • ಏಪ್ರಿಲ್‌ 17, 2021ರಂದು ಮತದಾನ ನಡೆಯಲಿದೆ.
  • ಮೇ 02, 2021ರಂದು ಮತ ಏಣಿಕೆ ನಡೆಯಲಿದೆ
  • ಮೇ 04, 2021ರಂದು ಉಪಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಅಂತಿಮಗೊಳ್ಳುವುದು.

ಎಲ್ಲಾ ಮತದಾನ ಕೇಂದ್ರಗಳಲ್ಲಿ ಇವಿಎಂ ಮತಯಂತ್ರಗಳೊಂದಿಗೆ ವಿವಿಪ್ಯಾಡ್‌ ಅಳವಡಿಸಲಾಗುವುದು ಮತ್ತು ಕೋವಿಡ್-19ರ ನಿಯಮಗಳೊಂದಿಗೆ, ಚುನಾವಣೆಯ ಪ್ರಕ್ರಿಯೆಗಳು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *