ಕೊಪ್ಪಳ ಏತ ನಿರಾವರಿ ಯೋಜನೆಯ ತ್ವರಿತ ಅನುಷ್ಟಾನಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಒತ್ತಾಯ

ಗಜೇಂದ್ರಗಡ: ಫೆ ೧೧: ರಾಷ್ಟ್ರೀಯ ನೀರಾವರಿ ಯೋಜನೆ ಎಂದೇ ಬನ್ನಿಸಲ್ಪಡುವ ಹಾಗೂ ರೂ.೫೧,೧೪೮ ಕೋಟಿಗಳ ವೆಚ್ಚದ ಬೃಹತ್ ಗಾತ್ರದ ಕೃಷ್ಟಾ ‘ಬಿ’ ಸ್ಕೀಂ ಮೂರನೇಯ ಹಂತದ ಕಾಮಗಾರಿ ಯೋಜನೆಗೆ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಕೇವಲ ರೂ.೫೬೦೦ ಕೋಟಿಗಳನ್ನು ಮಾತ್ರ ಮೀಸಲಿಡುವ ಮೂಲಕ ತೀವ್ರ ನಿರಾಸೆ ತಂದಿದೆ.ಆದರೂ ಇದನ್ನು ನಮ್ಮ ಹೋರಾಟ ಸಮೀತಿ ಸ್ವಾಗತಿಸುತ್ತದೆ ಎಂದು ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಟಾನ ಹೋರಾಟ ಸಮಿತಿ ಅದ್ಯಕ್ಷ ಕೂಡ್ಲೆಪ್ಪ ಗುಡಿಮನಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಗೋಷ್ಟಿ ನಡೆಸಿದ ಅವರು ಕೃಷ್ಣಾ ‘ಬಿ’ ಸ್ಕೀಂ ಮೂರನೇಯ ಹಂತದ ಯೋಜನೆ ಒಟ್ಟು ೧೩೦ ಟಿ.ಎಂ.ಸಿ ನೀರಿನಲ್ಲಿ ವಿಜಯಪುರ,ಬಾಗಲಕೋಟಿ,ರಾಯೂಚೂರು,ಕಲಬುರಗಿ,ಯಾದಗಿರಿ,ಕೊಪ್ಪಳ ಮತ್ತು ಗದಗ ಜಿಲ್ಲೆಯನ್ನು ಒಳಗೊಂಡಂತೆ ೧೪.೬೭ ಲಕ್ಷ ಎಕರೆಗೆ ನೀರಾವರಿ ಒದಗಿಸುವ ಒಂದು ಮಹತ್ವಾಕಾಂಕ್ಷಿ ರಾಷ್ಟ್ರೀಯ ನೀರಾವರಿ ಯೋಜನೆ ಎನಿಸಿದೆ. ಇದರ ಆಡಳಿತಾತ್ಮಕ ಅನುಮೋದನೆ ದೊರೆತ ಒಟ್ಟು ಯೋಜನೆ ವೆಚ್ಚ ರೂ. ೫೧,೧೪೮ ಕೋಟಿಗಳು. ಈ ಯೋಜನೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ೨೦೧೩-೧೪ ನೇಯ ಸಾಲಿನಲ್ಲಿ ರೂ. ೮೫೦೦ ಕೋಟಿಗಳನ್ನು ಮೀಸಲಿರಿಸಿ ಕಾಮಗಾರಿಗಳನ್ನು ಕೈಗೊಂಡಿತ್ತು,ಅದರಲ್ಲಿ ೨೦೧೭ ಹೊತ್ತಿಗೆ ರೂ.೬೯೯೫.೭೦ ಕೋಟಿ ಗಳನ್ನು ಖರ್ಚು ಮಾಡಿ ಸುಮಾರು ೧ ಲಕ್ಷ ಎಕರೆ ಜಮೀನಿಗೆ ನೀರಾವರಿ ಕಲ್ಪಿಸಿದೆ. ಈ ಯೋಜನೆಯ ಭಾಗವಾಗಿಯೇ ಕೊಪ್ಪಳ ಏತ ನೀರಾವರಿ ಇದ್ದು ಅದರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಿ, ಕನಗೇರಿ, ಗಂಗಾವತಿ, ಬಾಗಲಕೋಟಿ ಜಿಲ್ಲೆಯ ಹುನಗುಂದ, ಬದಾಮಿ, ಗದಗ ಜಿಲ್ಲೆಯ ರೋಣದ ಒಟ್ಟು ೨,೭೬,೬೪೦ ಎಕರೆ ಜಮೀನು ನೀರಾವರಿಗೆ ಒಲಪಡಿದೆ. ಇದಕ್ಕೆ ೧೨ ಟಿ.ಎಂ.ಸಿ.ನೀರನ್ನು ಕಾಯ್ದಿರಿಸಿದೆ.

ಯೋಜನೆ ವೆಚ್ಚದ ಒಟ್ಟು ಗಾತ್ರ ರೂ.೭೭೬೯.೪೬ ಕೋಟಿ ಗಳು ೨೦೧೮ ಮಾರ್ಚ ಈ ವೇಳೆಗೆ ಇದಕ್ಕೆ ೧೦೬೦.೬೦ ಕೋಟಿ ರೂಗಳು ವೆಚ್ಚವಾಗಿದೆ. ಈ ಯೋಜನೆಯ ಅನುಷ್ಟಾನದಿಂದ ನಮ್ಮ ತಾಲ್ಲೂಕಿ ೧೦,ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಆದರೆ ಈವರೆಗೂ ನಮ್ಮ ತಾಲ್ಲೂಕಿನಲ್ಲಿ ಸರ್ವೆ ಕಾರ್ಯಾ ಹೊರತುಪಡಿಸಿದರೆ ಯೋಜನೆ ಅನುಷ್ಟಾನದ ಸುಳಿವು ಕಾಣುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಹೋರಾಟ ಸಮಿತಿ ಕಾರ್ಯಾದರ್ಶಿ ಎಂ.ಎಸ್.ಹಡಪದ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರಗಳು ಅಸ್ತಿತ್ವದಲ್ಲಿ ಇವೆ.ಈ ರಾಜಕೀಯ ಅನುಕೂಲತೆಯನ್ನು ಬಳಸಿಕೊಂಡು ಹೆಚ್ಚಿನ ಅನುದಾನವನ್ನು ತರಲು ನಮ್ಮ ಈ ಭಾಗದ ಶಾಸಕರು ಹಾಗೂ ಸಂಸದರು ರಾಜಕೀಯ ಇಚ್ಚಾಶಕ್ತಿ ತೋರಿಸಬೇಕು. ಅಂದರೆಮಾತ್ರ ನಿರ್ದಿಷ್ಟ ಕಾಲಮಿತಿಯಲ್ಲಿ ಬೃಹತ್ ಗಾತ್ರದ ಈ ನೀರಾವರಿ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಇಲ್ಲವಾದರೆ ಯೋಜನೆ ಮೂಲೆಗುಂಪಾಗು ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು.

ಈ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಕೆರೆಗಳನ್ನು ತುಂಬಿಸಲು ರೂ.೫೦೦ ಕೋಟಿಗಳನ್ನು ಮೀಸಲಿರಿಸಿದೆ. ಆ ಹಣದಲ್ಲಿ ಆದರೂ ನಮ್ಮ ತಾಲ್ಲೂಕಿನ ಸುತ್ತಮುತ್ತಲಿನ ಕೆರೆಗಳನ್ನಾದರೂ ತುಂಬಿಸಲು ಶಾಸಕರು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *