ನಾಟಕ ಬೆಂಗ್ಳೂರು: ಚಿನ್ನದ ಪುಟಗಳು ಪುಸ್ತಕ ಬಿಡುಗಡೆ

ಬೆಂಗಳೂರು : 13ನೇ ವರ್ಷದ ರಂಗಭೂಮಿ ಸಂಭ್ರಮದಲ್ಲಿರುವ ಬೆಂಗಳೂರು ರಂಗತಂಡಗಳು ನಾಟಕ ಬೆಂಗ್ಳೂರು 2020-2021ನೇ ಸಾಲಿನ ನಾಟಕೋತ್ಸವವನ್ನು 2021 ಫೆಬ್ರವತಿ 8 ರಿಂದ ಮಾರ್ಚ್‌ 10ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ಸಂಸ ಬಯಲು ರಂಗ ಮಂದಿರದಲ್ಲಿ 28 ದಿನಗಳ ರಂಗಭೂಮಿ ಸಂಭ್ರ ಹಮ್ಮಿಕೊಳ್ಳಲಾಗಿತ್ತು.

ಈ ಬಾರಿ ಉತ್ಸವದ ವಿಶೇಷತೆಯೆಂದರೆ ಬಯಲು ರಂಗ – ಸುವರ್ಣ ಸಂಭ್ರಮದ ವರ್ಷವಾಗಿದೆ. ೫೦ ವರ್ಷದ ಹಿಂದೆ 1972ರ ಫೆಬ್ರವರಿ 11, 12, 13ರಂದು ಚಂದ್ರಶೇಖರ ಕಂಬಾರರ ರಚನೆಯ ಜೋಕುಮಾರಸ್ವಾಮಿ, ಪಿ. ಲಂಕೇಶ್‌ ರವರ ಸಂಕ್ರಾಂತಿ, ಪಿ. ಲಂಕೇಶ್‌ ರೂಪಾಂತರಿಸಿದ ಸಾಫೋಕ್ಲಿಸ್‌ರ ದೊರೆ ಈಡಿಪಸ್‌ ನಾಟಕಗಳು ಪ್ರದರ್ಶನ ಕಂಡ ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ನಾಟಕ ಬೆಂಗ್ಳೂರು ಬಳಗವು ಸುವರ್ಣ ಸಂಭ್ರಮವನ್ನು ಆಚರಿಸಿತು.

ಉತ್ಸವದ ಸಮಾರೋಪ ಸಮಾರಂಭವು ಮಾರ್ಚ್‌ 10, 2021 – ಬುಧವಾರ, ಸಂಜೆ 6.15ಕ್ಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಇಲ್ಲಿ ಏರ್ಪಡಿಸಲಾಗಿದೆ.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ʻಚಿನ್ನದ ಪುಟಗಳುʼ ಎಂಬ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌. ನಾಗಾಭರಣ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ನಿರ್ದೇಶಕಿ ಡಾ. ಬಿ. ಜಯಶ್ರೀ ಹಾಗೂ ಸಮಾರೋಪ ನುಡಿಗಳನ್ನಾಡಲು ಹಿರಿಯ ರಂಗ ನಿರ್ದೇಶಕರಾದ ಶ್ರೀ ಪ್ರಸನ್ನರವರು ಭಾಗವಹಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *