2021-22ರ ಬಜೆಟ್ ವೆಚ್ಚ : 2.46 ಲಕ್ಷ ಕೋಟಿ. ಅದರಲ್ಲಿ ಶಿಕ್ಷಣಕ್ಕೆ 29,688 ಕೋಟಿ (ಶೇ. 11%) ಕೊಟ್ಟಿದ್ದಾರೆ. ಕಳೆದ ಬಾರಿಯ ಬಜೆಟ್ ವೆಚ್ಚ : 2.37 ಲಕ್ಷ ಕೋಟಿ ಕಳೆದ ಬಾರಿ ಶಿಕ್ಷಣಕ್ಕೆ 28,967 ಕೋಟಿ (ಶೇ. 12%) ಕೊಟ್ಟಿದ್ದರು.
– ಬಿ. ಶ್ರೀಪಾದ ಭಟ್
ಕಳೆದ ಐದು ವರ್ಷಗಳಿಂದ ಶಿಕ್ಷಣಕ್ಕೆ ಕೇವಲ 28 ಕೋಟಿ ಯಿಂದ 29 ಕೋಟಿ ಆಸು ಪಾಸು ಹಂಚಿಕೆ ಮಾಡುತ್ತಿದ್ದಾರೆ. ಈ ಬಾರಿ ಮೀಸಲಿಟ್ಟ 29688 ಕೋಟಿ ಹಣ ಅಲ್ಲಿನ ಶಿಕ್ಷಕರು, ಇತರ ಸಿಬ್ಬಂದಿಗಳ ವೇತನ ಮತ್ತು ದೈನಂದಿನ ವೆಚ್ಚಕ್ಕೆ ಸಾಕಾಗುತ್ತದೆ.
ಬದಲಿಗೆ ಶಿಕ್ಷಣಕ್ಕೆ ಕನಿಷ್ಟ 35,000 ಕೋಟಿ ಮೀಸಲಿಡಬೇಕಾಗುತ್ತದೆ. ಶಾಲೆಯ ಮೂಲಬೂತ ಸೌಕರ್ಯವನ್ನು ಅಬಿವೃದ್ಧಿಗಾಗಿ ಮತ್ತು ನಿರ್ವಹಣ ವೆಚ್ಚವಾಗಿ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 50,000 ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 1 ಲಕ್ಷ ಮೊತ್ತವನ್ನು ಆಯವ್ಯಯದಲ್ಲಿ ಮೀಸಲಿಡಬೇಕಾಗುತ್ತದೆ. ಪ್ರತಿ ಶಾಲೆಗೂ ಕಲಿಕ ಬೋದನ ಉಪಕರಣಗಳಿಗಾಗಿ 10,000 ರೂಗಳನ್ನು ನೀಡಬೇಕು. ಆದರೆ ಸರಕಾರವು ಇದ್ಯಾವುದನ್ನೂ ಪರಿಗಣಿಸದಿರುವುದು ನಿಜಕ್ಕೂ ದುರಂತ. ಕೋವಿಡ್ ಕಾಯಿಲೆಯಿಂದ ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ತೀವ್ರವಾದ ದುಷ್ಪರಿಣಾಮ ಉಂಟಾಗಿತ್ತು. ಈ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವ ನಿರೀಕ್ಷೆಗಳು ಹುಸಿಯಾಗಿವೆ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸ್ಥೂಲವಾಗಿ ಕಳೆದ ಕೆಲವು ವರ್ಷಗಳ ಬಜೆಟ್ ಅನ್ನು ಅವಲೋಕಿಸಿದಾಗ ಶಿಕ್ಷಣ ವಲಯದ ಕುರಿತಾಗಿ ಸರ್ಕಾರಕ್ಕಿರುವ ಅಸಡ್ಡೆ, ನಿರ್ಲಕ್ಷ ನಮಗೆ ಸ್ಪಷ್ಟವಾಗುತ್ತದೆ. ಎರಡು ವರ್ಷಗಳ ಹಿಂದೆ ಬಜೆಟ್ ನಲ್ಲಿ ಮೂಲಬೂತ ಸೌಕರ್ಯಕ್ಕಾಗಿ 1200 ಕೋಟಿ ಮೀಸಲಿಟ್ಟಿದ್ದರು. ಅದರಲ್ಲಿ ಎಷ್ಟು ಮೊತ್ತವನ್ನು ವಿನಿಯೋಗಿಸಿದ್ದಾರೆ ಎಂದು ನಿಖರವಾದ ಮಾಹಿತಿಯಿಲ್ಲ. ಮತ್ತೆ ಈ ಬಾರಿ ಮೂಲಬೂತ ಸೌಕರ್ಯಕ್ಕಾಗಿ 150 ಕೋಟಿ ಕೊಡಲಾಗಿದೆ. ಶೌಚಾಲಯಗಳ ಅಬಿವೃದ್ಧಿಗೆ 100 ಕೋಟಿ ಕೊಟ್ಟಿದ್ದಾರೆ. ಅಂದರೆ ಎರಡು ವರ್ಷಗಳ ಹಿಂದಿನ ಬಜೆಟ್ ಗಿಂತಲೂ 500 ಕೋಟಿ ಕಡಿಮೆ.
ಇದನ್ನೂ ಓದಿ : ರಾಜ್ಯ ಬಜೆಟ್ ನಲ್ಲಿ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೆ ಹೆಚ್ಚು
ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಯಾವುದೆ ಅಬಿವೃದ್ದಿ ಗೋಚರಿಸಿಲ್ಲ. ಹೀಗಾಗಿ ಈ ಬಾರಿಯೂ ಮೂಲಬೂತ ಸೌಕರ್ಯವು ಉತ್ತಮಗೊಳ್ಳುತ್ತದೆ ಎನ್ನುವ ನಿರೀಕ್ಷೆ ಇಲ್ಲ. ಇದು ಕೇವಲ ಅಂಕಿ ಅಂಶಗಳ ಮೇಲಾಟವಶ್ಟೆ.
ಶಿಕ್ಷಕರ ನೇಮಕಾತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಅದಕ್ಕಾಗಿ ಪ್ರತ್ಯೇಕ ಹಣವೂ ಸಹ ಹಂಚಿಕೆಯಾಗಿಲ್ಲ.
ಕಳೆದ ಬಾರಿ 1000 ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಅದರ ವಾಸ್ತವ ಸ್ಥಿತಿಗತಿಗಳ ಕುರಿತು ಯಾವುದೇ ಮಾಹಿತಿಯಿಲ್ಲ. ಈ ಬಾರಿ ಕೇವಲ 50 ಪಬ್ಲಿಕ್ ಶಾಲೆಗಳ ಅಬಿವೃದ್ಧಿಗಾಗಿ 100 ಕೋಟಿ ಅನುದಾನ ಪ್ರಸ್ತಾಪ ಮಾಡಿದ್ದಾರೆ. ಆದರೆ ಕಳೆದ ಬಾರಿ ಹೇಳಿದ 1000 ಪಬ್ಲಿಕ್ ಶಾಲೆಗಳ ಕತೆ ಏನು?
ಇದನ್ನೂ ಓದಿ : ಬಜೆಟ್ ಎಂಬ ಕಣ್ಕಟ್ಟು!
ಇಲ್ಲಿ ನಿರಾಸೆ ಮೂಡಿಸುವ ವಿಷಯವೆಂದರೆ ಕಲಿಕೆಯರಿಮೆಗೆ (pedagogy) ಯಾವುದೆ ಮಹತ್ವವನ್ನು ಕೊಟ್ಟಿಲ್ಲ. ಪ್ರಾಥಮಿಕ, ಪ್ರೌಡ ಶಿಕ್ಷಣದ ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಆಯವ್ಯಯದಲ್ಲಿ ಹೇಳಲಾದ ಅಂಶಗಳಲ್ಲಿ ಯಾವುದೆ ಹೊಸತನವಿಲ್ಲ.