ತುಮಕೂರು : ರಾಜ್ಯ ಬಜೆಟ್ ದುಡಿವ ಜನರ ಪಾಲು ಖಾತ್ರಿಪಡಿಸಿಬೇಕು ಎಂದು ಆಗ್ರಹಿಸಿ ಸಿಐಟಿಯು ನಿಂದ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆ ಉದ್ದೆಶಿಸಿ ಸಿಐಟಿಯು ಜಿಲ್ಲಾ ಆಧ್ಯಕ್ಷರಾದ ಸೈಯದ್ ಮುಜೀಬ್ ಮಾತನಾಡಿ, 29 ಕಾನೂನುಗಳನ್ನು 4 ಸಂಹಿತೆಗಳಾರಿರುವದನ್ನು ರಾಜ್ಯ ದಲ್ಲಿ ಜಾರಿ ಮಾಡಬಾರದು. ರೈತವಿರೋಧಿಯಾಗಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಕೇಂದ್ರದ ಶಾಸನಗಳನ್ನು ತಿರಸ್ಕರಿಸಬೇಕು.ವಿದ್ಯುಚ್ಚಕ್ತಿ ಖಾಸಗೀಕರಣ ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ತಿರಸ್ಕರಿಸಬೇಕು. ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿ ಭತ್ಯೆಯೊಂದಿಗೆ ಎಲ್ಲಾ ವಿಭಾಗಗಳ ಕಾರ್ಮಿಕರಿಗೂ ಸಾಮಾನ ಕನಿಷ್ಠ ವೇತನ 24 ಸಾವಿರ ಜಾರಿ ಮಾಡ ಬೇಕು. ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲೂ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು. ಸಂಘ ಮಾನ್ಯತೆಗೆ, ಗುತ್ತಿಗೆ ಮುಂತಾದವರ ಖಾಯಂಮಾತಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು ಎಂದರು.
ಸರ್ಕಾರದ ನಿಗಮ ,ಮಂಡಳಿಗಳಲ್ಲಿ ಮತ್ತು ಇಲಾಖೆಗಳಲ್ಲಿ , ಮುನಿಸಿಪಾಲಿಟಿ, ಮಹಾ ನಗರ ಪಾಲಿಕೆ, ಅಸ್ಪತ್ರೆಗಳಲ್ಲಿ, ಹಾಸ್ಟಲ್ಗಳಲ್ಲಿ, ಮತ್ತಿತೆರಡೆ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕು. ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸ ಬೇಕುಎಲ್ಲಾ ಜಿಲ್ಲೆಗಳಲ್ಲು ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಅಕ್ರಮ ಲೇಆಫ್, ಲಾಕೌಟ್, ರಿಟ್ರೇಚ್ಮೆಂಟ್ಗೆ ಅನುಮತಿಸಬಾರದು. ಅಟೋ ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು ಎಂದು ಮುಜೀಬ್ ಆಗ್ರಹಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸಿಐಟಿಯು ಜಿಲ್ಲಾ ಕಾರ್ಯಧರ್ಶಿ ಎನ್. ಕೆ ಸುಬ್ರಮಣ್ಯಂ ಮಾತನಾಡಿ, ಕಾರ್ಮಿಕ ಇಲಾಖೆ ರೂಪಿಸಿರುವ ಮತ್ತು 2017ರ ಬಜೆಟ್ ನಲ್ಲಿ ಘೋಷಿಸಲಾದಂತೆ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ ಜಾರಿ ಮಾಡಬೇಕು. 2021 ಏಪ್ರಿಲ್ ನಿಂದಲೇ ಅನ್ವಯವಾಗುವಂತೆ ಆದ್ಯತೆ ಮೇರೆಗೆ ಹಮಾಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರವಾಹನ, ಮೆಕಾನಿಕ್ಗಳು, ಟೈಲರ್ಸ್ಗಳಿಗೆ, ಫೋಟೋಗ್ರಾಫರ್ಗಳು ಮತ್ತಿತರೆ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸಬೇಕು ಮತ್ತು ಅದಕ್ಕಾಗಿ 2021 ರಾಜ್ಯ ಬಜೆಟ್ನಲ್ಲಿ ಕನಿಷ್ಟ 500 ಕೋಟಿ ಹಣವನ್ನು ಮೀಸಲಿಡಬೇಕು ಸ್ಕೀಮ್ ನೌಕಕರರು ಅಂಗನವಾಡಿ, ಬಿಸಿಯೂಟ, ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಖಾಯಂ ಆಗಬೇಕು. ತಂಬಾಕು ನಿಷೇಧ ಕಾಯ್ದೆಯ ತಿದ್ದುಪಡಿ ಭಾಗವಾಗಿ ಸಂಕಷ್ಟಕ್ಕೆ ಸಿಲುಕಿರುವ ಬೀಡಿ ಕಾರ್ಮಿಕರಿಗೆ ಮಾಸಿಕ ರೂ 6000 ಪರಿಹಾರ ನೀಡಬೇಕು. ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ : ರಾಜ್ಯ ಬಜೆಟ್ ದುಡಿಯುವವರ ಪರವಾಗಿರಲು ಆಗ್ರಹಿಸಿ ಶಾಸಕರುಗಳಿಗೆ ಮನವಿ
ಶಾಸಕರ ಅನುಪಸ್ಥಿತಿಯಲ್ಲಿ ಅವರ ಅಪ್ತ ಸಹಾಯಕರು ಮನವಿ ಸ್ವಿಕರಿಸಿದರು , ಶಾಸಕರ ಗಮನಕ್ಕೆ ತಂದು ಕಾರ್ಮಿಕರ ಅಹವಾಲುಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಯತ್ನಿಸುವುದಾಗಿ ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಖಜಾಂಚಿ ಎ. ಲೊಕೇಶ್, ಪೌರ ಕಾರ್ಮಿಕರ ಸಂಘಧ ನಾಗರಾಜು, ವೆಂಕಟೇಶ್, ಕೆಂಪಣ್ಣ, ಕಸದ ಅಟೋಚಾಲಕರ ಸಂಘಧ ಶಿವರಾರು, ನೀರು ಸರಬರಾಜು ನೌಕರ ಸಂಘದ ಕುಮಾರ್, ಅಟೋ ಚಾಲಕರ ಸಂಘದ ಸಿದ್ದರಾಜು ಸ್ವಾಂದೇನ ಹಳ್ಳಿ, ಇಂಜಿಯಾಜ್, ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಚೆ ಶಾಹತಾಜ್ , ತುಮಕೂರು ಪುಟ್ ಪಾತ್ ವ್ಯಾಪಾರಿಗಳ ಸಂಘದ ಮುತ್ತುರಾಜು , ವಸೀಂ ಸೇರಿದಂತೆ ಅನೇಕರಿದ್ದರು.