ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಹೋರಾಟ, ಕವಿವಿಗೆ ವಿದ್ಯಾರ್ಥಿಗಳ ಎಚ್ಚರಿಕೆ

ಬೆಂಗಳೂರು ಫೆ 16: ಕರ್ನಾಟಕದ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ (ಯು. ಜಿ. ಸಿ.) ನಿರ್ದೇಶನದಂತೆ ಬಿಡುಗಡೆ ಮಾಡಿ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಪಾಲಿಸಲು ಆದೇಶಿಸಿದ್ದರೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಅದನ್ನು ಲೆಕ್ಕಿಸದೇ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿರುವುದಕ್ಕೆ ವಿದ್ಯಾರ್ಥಿಗಳು ವ್ಯಾಪಕ ವಿರೊಧ ವ್ಯಕ್ತ ಪಡಿಸಿದ್ದಾರೆ.

1,3&5ನೇ ಸೆಮಿಸ್ಟರ್ ಗೆ ಮಾರ್ಚ್ 31 ಭೋದನೆಯ ಕೊನೆಯ ದಿನವಾಗಿದ್ದು ಎಪ್ರೀಲ್ ತಿಂಗಳಲ್ಲಿ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಈ ಆದೇಶವನ್ನು ಪಾಲಿಸಿ ಹೊಸ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡದೇ ಮಾರ್ಚ್ 1ಕ್ಕೆ ಈ ಶೈಕ್ಷಣಿಕ ವರ್ಷವನ್ನು ಕೊನೆಗೊಳಿಸಿ ತಕ್ಷಣವೇ ಪರೀಕ್ಷೆ ನಡೆಸಲು ಉತ್ಸುಕರಾಗಿದ್ದಾರೆ. ಒಂದು ವೇಳೆ ಸರಕಾರಿ ಆದೇಶವನ್ನು ಪಾಲಿಸದಿದ್ದರೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಾಲೇಜು ಶಿಕ್ಷಣ ಆಯುಕ್ತರಿಗೆ ಒತ್ತಾಯಿಸಲಾಗುವುದು ಇಲ್ಲಾ ಉಚ್ಚ ನ್ಯಾಯಾಲಯಕ್ಕೆ ಮೊರೆಹೋಗಲಾಗುವುದು ಎಂದು ಎಸ್.ಎಫ್. ಐ ರಾಜ್ಯ ಮುಖಂಡ ಗಣೇಶ ರಾಠೋಡ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಸಿ.ಬಿ.ಸಿ.ಎಸ್.ಶಿಕ್ಷಣ ಪದ್ಧತಿ ಅಳವಡಿಕೆ : ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಈ ಹಿಂದೆಯೇ ಫೆಬ್ರವರಿಯಲ್ಲಿ ಪರೀಕ್ಷೆ ಮಾಡಲು ನಿರ್ದರಿಸಿದ್ದ ಕುಲಪತಿಗಳಿಗೆ ಎಸ್ ಎಫ್ ಐ ನೇತೃತ್ವದಲ್ಲಿ ನಿಯೋಗ ಹೋಗಿ ಸರ್ಕಾರಿ ಆದೇಶ ಪಾಲಿಸಲು ಮನವಿ ಮಾಡಲಾಗಿತ್ತು ಅದಕ್ಕೆ ಓಕೆ ಹೇಳಿದ್ದರು ಈಗ ಏಕಾಏಕಿ ಪರೀಕ್ಷೆಗೆ ಮುಂದಾಗುತ್ತಿದ್ದಾರೆ ಇದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಜನವರಿ 20 ರಿಂದ ಅರ್ಧದಷ್ಟು ಅತಿಥಿ ಉಪನ್ಯಾಸಕರು ಮತ್ತು ಫೆಬ್ರವರಿ 09 ರಿಂದ ಇನ್ನರ್ಧಷ್ಟು ಅತಿಥಿ ಉಪನ್ಯಾಸಕರ ನೇಮಕಾತಿ ನಡೆದಿದ್ದು ಈಗ ತಾನೇ ಭೋದನೆ ಆರಂಭವಾಗಿದೆ. 50% ರಷ್ಟು ವಿಷಯಗಳನ್ನು ಅತಿಥಿ ಉಪನ್ಯಾಸಕರೇ ಭೋಧಿಸುತ್ತಿದ್ದು 4 ತಿಂಗಳು ಕಲಿಸಬೇಕಾದ ವಿಷಯವನ್ನು ಮಾರ್ಚ್ 31ಕ್ಕೆ ಮುಂದೂಡಿದರೆ 2 ತಿಂಗಳಲ್ಲಾದರೂ ಬೋಧಿಸಿ ಪೂರ್ಣಗೊಳ್ಳಬಹುದು ಇದು ಯಾಕೆ ಕುಲಪತಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಗಣೇಶ್ ಪ್ರಶ್ನಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಖಾಸಗಿ ಕಾಲೇಜುಗಳಲ್ಲಿ ಆರಂಭದಿಂದಲೂ ಅತಿಥಿ ಉಪನ್ಯಾಸಕರ ನೇಮಕಾತಿ ನಡೆದಿದ್ದು ಅಲ್ಲಿ ಪಾಠ ಬೋಧನೆ ಪೂರ್ಣಗೊಂಡಿದ್ದು ಏಕಾಏಕಿ ಪರೀಕ್ಷೆ ನಡೆಸಿದರೆ ಪರೀಕ್ಷೆ ನಡೆದರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಕೂಡಲೇ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಸರ್ಕಾರಿ ಆದೇಶವನ್ನು ಪಾಲಿಸಬೇಕು ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕು ಇಲ್ಲವಾದರೆ ಎಸ್.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಹಾವೇರಿ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *