ಶಾಸಕ ಕಳಕಪ್ಪ ಬಂಡಿ ವಿರುದ್ದ ಕಾರ್ಮಿಕ ಸಂಘಟನೆ ಮುಖಂಡರ ಆರೋಪ
ಗಜೇಂದ್ರಗಡ: ಫೆ. 11: ಸ್ಥಳೀಯ ಶಾಸಕರಾದ ಕಳಕಪ್ಪ ಬಂಡಿಯವರು ಕಾರ್ಮಿಕರಿಗೆ ಬಂದ ಆಹಾರ ಕಿಟ್ ಗಳನ್ನು ತಮ್ಮ ಖಾಸಗಿ ಗೋದಾಮಿನಲ್ಲಿಟ್ಟುಕೊಂಡು ಸರಿಯಾಗಿ ಕಾರ್ಮಿಕರಿಗೆ ತಲುಪಿಸದೆ, ತಮಗೆ ಬೇಕಾದವರಿಗೆ ಕಿಟ್ ನೀಡಿ ಇನ್ನುಳಿದ ಆಹಾರ ಕಿಟ್ ಗಳನ್ನು ಮರಳಿ ಕಾರ್ಮಿಕ ಇಲಾಖೆಗೆ ಹಸ್ತಾಂತರ ಮಾಡಿದ್ದು, ಇದೀಗ ಗಜೇಂದ್ರಗಡ ತಾಲೂಕಿನಲ್ಲಿ ಸುಮಾರು 4 ಸಾವಿರ ನೊಂದಾಯಿತ ಕಟ್ಟಡ ಕಾರ್ಮಿಕರಿದ್ದು ಇಲಾಖೆಯಿಂದ ಕೇವಲ 583 ಕಿಟ್ ಗಳು ಮಾತ್ರ ಬಂದಿದ್ದು ಇವುಗಳನ್ನು ಹೇಗೆ ಹಂಚಿಕೆ ಮಾಡಬೇಕು ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ ಸರ್ಕಾರದ ಇಬ್ಬದಿ ನೀತಿಯನ್ನು ಖಂಡಿಸಿದ್ದಾರೆ.
ಕಾರ್ಮಿಕ ಸಂಘಟನೆ ಶಾಸಕರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದರ ಭಾಗವಾಗಿ ಪುನಃ ಆಹಾರದ ಕಿಟ್ ಗಳನ್ನು ಕಾರ್ಮಿಕ ಇಲಾಖೆಯಿಂದ ತರೆಸಿಕೊಳ್ಳಲಾಯಿ, ಆ ಆಹಾರದ ಕಿಟ್ ಗಳನ್ನು ನಗರದ ಸಿಐಟಿಯು ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಪ್ರತಿಕ್ರೀಯಿಸುತ್ತಾ, ಈ ಹಿಂದೆ ಕಾರ್ಮಿಕ ಇಲಾಖೆಯ ಕಿಟ್ ಗಳು ಕಳುವಾಗಿದೆ ಎಂದೆ ನಮ್ಮ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ನಾವು ಜಾಗೃತಿ ಮೂಡಿಸಿದ್ದೆವು, ಆರು ತಿಂಗಳ ಮುಂಚೆಯೇ ಬಂದ ಕಿಟ್ ಗಳನ್ನು ಸ್ಥಳೀಯ ಶಾಸಕರು ತಮ್ಮ ಖಾಸಗಿ ಗೋದಾಮಿನಲ್ಲಿಟ್ಟುಕೊಂಡು ಪರಿಣಾಮ ಇದೀಗ ಈ ಕಿಟ್ ಗಳನ್ನು ತಡವಾಗಿ ನಿಮ್ಮಲ್ಲರ ಕೈ ತಲುಪುತ್ತಿವೆ ಎಂದರು. ಕಾರ್ಮಿಕರಿಗಾಗಿ ಇಲಾಖೆ ಕೋಟ್ಯಾಂತರ ಖರ್ಚು ಮಾಡುತ್ತಿದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಈ ಕಿಟ್ ಗಳು ಕಾರ್ಮಿಕರಿಗೆ ಸಿಗುವಲ್ಲಿ ಸಂಘಟನೆ ಪಾತ್ರ ಮುಖ್ಯವಾಗಿದ್ದು ಕಾರ್ಮಿಕರ ಆಹಾರ ಧಾನ್ಯ ಕಿಟ್ ನಲ್ಲೂ ಕಿತ್ತು ತಿನ್ನುತ್ತಿರುವ ಭ್ರಷ್ಟ ಜನಪ್ರತಿನಿಧಿಗಳ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ಹೋರಾಡಬೇಕಿದೆ ಎಂದರು.
ಇದನ್ನೂ ಓದಿ: ಬಿಸಿಯೂಟ / ಆಹಾರ ಪದಾರ್ಥ ವಿತರಣೆ ಮಾಡದೆ ಸರಕಾರ ಆಹಾರ ಭದ್ರತೆ ಅಧಿಸೂಚನೆ ಉಲ್ಲಂಘಿಸುತ್ತಿದೆ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರೇಣಕಪ್ಪ ರಾಠೋಡ, ಹನುಮಂತ ವಡ್ಡರ ಲಕ್ಷ್ಮಣ ಗುರಿಕಾರ, ನಾಗಪ್ಪ ಯಲಬುಣಚಿ ಮಾಬುಸಾಬ ಸುರಪುರ ಮಾರುತಿ ಬರಗಿ ಮಾಬುಸಾಬ ಹವಾಲ್ದಾರ್, ಉಸ್ಮಾನಸಾಬ ತಟ್ಟಿ, ಲಕ್ಷ್ಮಣ ಗುರಿಕಾರ, ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ದಾವಲಸಾಬ ತಾಳಿಕೋಟಿ