ನವದೆಹಲಿ,ಫೆ.10 : ಭಾರತದ ಸೈನ್ಯ ತಮ್ಮ ಎರಡು ನಾಯಿಗಳನ್ನು ಕೋವಿಡ್-19 ಸೋಂಕು ಪತ್ತೆ ಮಾಡಲು ತರಬೇತಿ ನೀಡಿದೆ. ಈ ನಾಯಿಗಳು ಬೆವರು ಹಾಗೂ ಮೂತ್ರದ ಮೂಲಕ ಸೋಂಕಿತ ವ್ಯಕ್ತಿಯನ್ನು ಪತ್ತೆಮಾಡುವ ಸಾಮರ್ಥ್ಯ ಹೊಂದಿದೆ.
ಈ ನಾಯಿಗಳನ್ನು ಸೈನ್ಯದ ಕೇಂದ್ರದಲ್ಲಿ ಸೋಮವಾರ ನೇರ ಪ್ರದರ್ಶನದಲ್ಲಿ ಸೋಂಕು ದೃಡಪಟ್ಟ ವ್ಯಕ್ತಿಯ ಮೂತ್ರ ಮತ್ತು ಬೆವರಿನ ಮೂಲಕ ಯಾವ ರೀತಿ ನಾಯಿಗಳು ಪತ್ತೆ ಹಚ್ಚಲು ಸಾಧ್ಯ ಎಂದು ನೇರವಾಗಿ ತೋರಿಸಲಾಯಿತು.
ಬ್ರಿಟನ್, ಫಿನ್ಲಾಂಡ್, ರಷ್ಯಾ, ಫ್ರಾನ್ಸ್, ಯುಎಇ, ಜರ್ಮನಿ, ಲೆಬನಾನ್ ನಂತಹ ವಿವಿಧ ದೇಶಗಳ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸುವ ಮೂಲಕ ಕೋವಿಡ್-19 ಪತ್ತೆಗಾಗಿ ನಾಯಿಗಳಿಗೆ ತೆರಬೇತಿ ನೀಡಲು ಪ್ರಾರಂಭಿಸಿವೆ.
ತರಬೇತಿಗಾಗಿ ಮೀರತ್ನ ಮಿಲಿಟಿರಿ ಆಸ್ಪತ್ರೆ, ಮೀರತ್ ಕಂಟೋನ್ಮೆಂಟ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಸುಭಾರ್ತಿ ವೈದ್ಯಕೀಯ ಕಾಲೇಜಿನಿಂದ ಸಕಾರತ್ಮಕ ಮತ್ತು ಶಂಕಿತ ಮಾದರಿಗಳನ್ನು ಪಡೆಯಲಾಗಿದೆ. ಮೊದಲನೆಯ ಹಂತದಲ್ಲಿ 279 ಮೂತ್ರದ ಮಾದರಿಗಳು ಮತ್ತು 267 ಬೆವರಿನ ಮಾದರಿಗಳನ್ನು ಪ್ರಯೋಗಿಸಲಾಗಿತ್ತು. ಇದರಲ್ಲಿ ಉತ್ತಮ ಫಲಿತಾಂಶ ದೊರಕಿತ್ತು ಎಂದು ಸೈನ್ಯದ ಮೂಲಗಲು ತಿಳಿಸಿವೆ.
ಇಲ್ಲಿಯವರೆಗೂ 3000 ಮಾದರಿಗಳನ್ನು ಪರೀಕ್ಷಿಸಲಾಗಿತ್ತು ಇದರಲ್ಲಿ 18 ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ನಾಯಿಗಳು ಪತ್ತೆಹಚ್ಚಿವೆ ಎಂದು ಅಂದಾಜಿಸಲಾಗಿದೆ.