ಅರುಣಾಚಲ ಪ್ರದೇಶ, ಫೆ.09 : ಅರುಣಾಚಲ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಪಶ್ಚಿಮ ಕಾಮೆಂಗ್ ನಲ್ಲಿ ನಸುಕಿನಲ್ಲಿ 2.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಅರುಣಾಚಲ ಪ್ರದೇಶ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪನವು ಕಾಮೆಂಗ್ಗೆ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಇಂದು ಮುಂಜಾನೆ 4.09 ಕ್ಕೆ ಭೂಕಂಪನ ಸಂಭವಿಸಿದ್ದು, ಅಕ್ಷಾಂಶ: 26.99 ಮತ್ತು ರೇಖಾಂಶ: 92.54, ಆಳ: 5 ಕಿ.ಮೀ, ಇದು ಭಾರತದ ಅಸ್ಸಾಂನ ತೇಜ್ಪುರದ 45 ಕಿ.ಮೀ. ವರೆಗು ಭೂಕಂಪನವಾಗಿದೆ ಎಂದು ಎನ್ಸಿಎಸ್ ತಿಳಿಸಿದೆ.
ಭೂಕಂಬನ ಬಳಿಕ ಯಾವುದೇ ಹಾನಿಗಳ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.