ಒಂದು ಅಸಾಧಾರಣ ಸಮಯದಲ್ಲಿ ಒಂದು ಅಸಾಧಾರಣ ಬಜೆಟ್ ನಿರೀಕ್ಷಿಸಿದವರಿಗೆ ಕಂಡಿದ್ದೇನು?
ಸೇಲ್!
(ಸತೀಶ್ ಆಚಾರ್ಯ, ಕಾರ್ಟೂನಿಸ್ತಾನ್.ಕಾಂ)
***
ರಾಷ್ಟ್ರೀಯ ಸೊತ್ತುಗಳನ್ನು ಮಾರಿ 1.75ಲಕ್ಷ ಕೊಟಿ ರೂ.ಗಳನ್ನು ಸಂಗ್ರಹಿಸಲಾಗುವುದು ಎಂದಿದೆ ಮಹಾನ್ ‘ದೇಶಭಕ್ತ’ರ ಬಜೆಟ್.
( ಪಂಜು ಗಂಗೊಳ್ಳಿಯವರ ಮಂಕಿ ಮಾತ್!)
***
ವಿಮಾವಲಯದಲ್ಲಿ ಇನ್ನು 74% ದ ವರೆಗೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕೊಟ್ಟಿರುವ ಬಜೆಟ್
ವಿದೇಶೀ ಬಂಡವಾಳಿಗರು ಬಾಗಿಲು ಪೂರ್ಣವಾಗಿ ತೆರೆಯಿರಿ ಎಂದರೆ ಗೋಡೆಯನ್ನೇ ಬೀಳಿಸಿ ದಾರಿ ಮಾಡಿಕೊಟ್ಟರು!
“ವಾವ್!ಬರೀ ಬಾಗಿಲು ಪೂರಾ ತೆರೆಯುತ್ತೀರಿ ಎಂದುಕೊಂಡಿದ್ದೆ”
(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಇಲ್ಲ, ಆರೋಗ್ಯಕ್ಕೆ ಬಜೆಟ್ ನೀಡಿಕೆಯಲ್ಲಿ 137% ಹೆಚ್ಚಳವಾಗಿದೆಯಂತೆ; ಆದರೆ ಇದರಲ್ಲಿ ವಾಸ್ತವತೆಗಿಂತ ಕೈಚಳಕವೇ ಹೆಚ್ಚು ಎನ್ನುತ್ತಾರೆ ಪರಿಣಿತರು.
( ಮಂಜುಲ್, ಫಸ್ಟ್ ಪೋಸ್ಟ್)
***
ಮೂಲರಚನೆಗಳ ನಿರ್ಮಾಣಕ್ಕೂ ಬಹಳ ಖರ್ಚು ಮಾಡುತ್ತಾರಂತೆ! ಅದನ್ನು ಆಗಲೆ ದಿಲ್ಲಿಯ ಗಡಿಗಳಲ್ಲಿ ಆರಂಭಿಸಿಯೇ ಬಿಟ್ಟಿದ್ದಾರೆ!
( ಸತೀಶ ಆಚಾರ್ಯ, ನ್ಯೂಸ್ ಸ್ಟಿಂಗ್.ಇನ್)
***
ಕೃಷಿಗೆ ಬಜೆಟ್ ಹಂಚಿಕೆ ರೂ.1,54,775 ಕೋಟಿಯಿಂದ ರೂ.1,48,301 ಗೆ ಇಳಿಸಿದರೂ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಧಿಕ ಕರ ಹಾಕಿ ಕೃಷಿ ಮೂಲರಚನೆಗಳಿಗೆ ಸಂಪನ್ಮೂಲ ಸಂಗ್ರಹಿಸಲಾಗುವುದು!
“ಹೌದು, ಕಬ್ಬಿಣದ ಮತ್ತು ಕಾಂಕ್ರೀಟಿನ
ತಡೆಗೋಡೆಗಳು, ಜಲಫಿರಂಗಿಗಳು
ಮುಂತಾದವುಗಳಿಗೆ ನಮಗೆ ಹಣಬೇಕು ತಾನೇ….”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಮಕ್ಕಳು ಮತ್ತು ತಾಯಂದಿರ ಕಲ್ಯಾಣದ ಸ್ಕೀಮುಗಳಿಗೆ ಹಣ ಹಂಚಿಕೆ ರೂ. 2,728 ಕೋಟಿಯಿಂದ ರೂ.2,522 ಕೋಟಿಗೆ ಕಡಿತಗೊಂಡಿದೆಯಂತೆ.
“ನಮಗೆ ನಾವೇ”- “ ಆತ್ಮನಿರ್ಭರ ಭಾರತ್ ಮಾತಾಕೀ ಜೈ” !
(ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
***
ಶಿಕ್ಷಣಕ್ಕೂ ಬಜೆಟ್ ಹಂಚಿಕೆ ರೂ.99,312 ಕೋಟಿಯಿಂದ ರೂ. 93,224 ಕೋಟಿಗೆ ಕಡಿತವಾಗಿದೆಯಂತೆ.
ಬಹಳ ಹೆಚ್ಚು ಶಿಕ್ಷಣದಿಂದಾಗಿ
ಬಹಳ ಹೆಚ್ಚು ಪ್ರಜಾಪ್ರಭುತ್ವದ ಡಿಯಲ್ಲಿ
ನರಳುತ್ತಿರುವ ಅರ್ಥವ್ಯವಸ್ಥೆಗೆ ಮುಲಾಮು!
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)