ಅನ್ನದಾತನ ಸುತ್ತ ತಡೆಗೋಡೆ – ತಡೆಗೋಡೆಗೆ ಹೆದರದ ಅನ್ನದಾತ

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಮೇಲೆ ಸರಕಾರದ ಆಕ್ರಮಣ, ಪ್ರತಿಭಟನೆ ಜಾಗದ ಸುತ್ತಲೂ ಕಾಂಕ್ರೀಟ್ ಗೋಡೆ ನಿರ್ಮಿಸಿದ ಪೊಲೀಸರು, ಅನ್ನದಾತನ ಸುತ್ತ ತಂತಿಬೇಲಿ, ಸರಕಾರ ಮತ್ತು ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೇಂದ್ರದ ಕೃಷಿಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 70 ನೇ ದಿನಕ್ಕೆ ಕಾಲಿಟ್ಟಿದೆ. ಈಗಲೂ ಪ್ರತಿಭಟನೆಗೆ ರೈತರು ಸಾಗರದಂತೆ ಹರಿದು ಬರುತ್ತಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿರುವುದನ್ನು ಸಹಿಸದ ಕೇಂದ್ರ ಸರಕಾರ ಪ್ರತಿಭಟನೆಯ ಸುತ್ತ ಪೊಲೀಸ್ ಭದ್ರಕೋಟೆಯನ್ನು ನಿರ್ಮಿಸಿತ್ತು. ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರೋದಕ್ಕೆ ಆರಂಭ ಮಾಡ್ತಾ ಇದ್ದಂತೆ,  ರೈತರ ತಡೆಯೋದಕ್ಕಾಗಿ, ರೈತರು ಒಳ ಪ್ರವೇಶಿಸಿದಂತೆ ರಸ್ತೆಗಳಿಗೆ  ಎತ್ತರದ ಕಾಂಕ್ರೇಟ್ ಗೋಡೆಗಳನ್ನು, ತಂತಿ ಬೇಲಿಗಳನ್ನು ನಿರ್ಮಾಣ ಮಾಡಿದ್ದಾರೆ.

 

 

 

ರಸ್ತೆಗಳಲ್ಲಿ ಸುಮಾರು ಕಿ.ಮಿ ವರೆಗೂ ಮೊಳೆಗಳನ್ನು ಹಾಕಿದ್ದಾರೆ. ರೈತರ ಹೋರಾಟ ಬೆಂಬಲಿಸಿ ವಾಹನಗಳು ಬರುವುದನ್ನು ತಡೆಯುವುದಕ್ಕೆ, ಹಲವು ಕಡೆ ಕಂದಕಗಳನ್ನು ತೋಡಲಾಗಿದೆ, ಇದರ ಹೊರಗಡೆ ದೊಡ್ಡದಾದ ಟ್ರಕ್, ಟಿಪ್ಪರಗಳನ್ನು ನಿಲ್ಲಿಸಲಾಗಿದೆ. ಪ್ರತಿಭಟನೆ ಜಾಗದಲ್ಲಿ ಇಂಟರ್ನೆಟ್, ಸೇವೆಯನ್ನು ಸ್ಥಗಿತಗೊಳಿಸಲಾಗಿದೆ, ವಿದ್ಯುತ್, ನೀರು ಪೊರೈಕೆಯನ್ನು ಸ್ತಗಿತ ಮಾಡಲಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಸರಕಾರ ಮತ್ತು ಪೊಲೀಸರ ಈ ರೀತಿಯ ಕ್ರಮವನ್ನು ಅನುಸರಿಸುತ್ತಿದ್ದಾರೆ. ಸರಕಾರ ಎಷ್ಟೆ ಒತ್ತಡ ಹೇರಿದರೂ, ಅಡೆ ತಡೆ ಒಟ್ಟಿದರೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

 

 

 

ರೈತರ ಹೋರಾಟಕ್ಕೆ ಖ್ಯಾತ ಪಾಪ್ ಗಾಯಕಿ ಹಾಗೂ ಹಾಲಿವುಡ್ ನಟಿ ರಿಹಾನಾ ಅವರು ಬೆಂಬಲ ಸೂಚಿಸಿದ್ದಾರೆ.  ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು? ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. ನೋಡನೋಡುತ್ತಿದ್ದಂತೆ ಅದು ಲಕ್ಷಾಂತರ ರೀಟ್ವೀಟ್ ಗಳಾದವು. #Rihanna ಮತ್ತು #FarmersProtest ಹ್ಯಾಶ್ ಟ್ಯಾಗ್ ಗಳು ಜಾಗತಿಕ ಟ್ರೆಂಡ್ ಆಗಿದ್ದವು, ಇದರ ಬೆನ್ನಲ್ಲೆ ಅನೇಕ ಹಾಲಿವುಡ್ ನಟರೂ ರೈತರ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿ ಅನೇಕ ರೈತರು ದೆಹಲಿಯತ್ತ ಹರಿದು ಬರುತ್ತಿದ್ದಾರೆಂದು ದೆಹಲಿ ರೈತರ ಹೋರಾಟದಲ್ಲಿ ಭಾಗವಹಿಸಿರುವ ಕರ್ನಾಟಕದ ವಕೀಲರಾದ ಕೆ.ಎನ್. ಜಗದಿಶ್ ದೆಹಲಿ ಸ್ಥಿತಿ ಕುರಿತು ವ್ಯಕ್ತಪಡಿಸಿದ್ದಾರೆ.

ಇನ್ನೂ ರಾಜ್ಯಸಭೆಯಲ್ಲಿ ರೈತರ ಪ್ರತಿಭಟನೆಯ ಕುರಿತು ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು, ಸಭಾಪತಿ ಕೊನೆಗೂ ವಿಪಕ್ಷಗಳ ಮನವಿಗೆ ಸ್ಪಂದಿಸಿದ್ದು 15 ಗಂಟೆಗಳ ಕಾಲ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮದ್ಯೆ ರೈತರ ಹೋರಾಟಕ್ಕೆ  ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಂಡಿಹೌಸ್ ಬಳಿ ಗುರುವಾರದಂದು ವಿದ್ಯಾರ್ಥಿ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲವನ್ನು ಘೊಷಿಸಿದರು.

 

ಪೊಲೀಸರ ಅಡೆ, ತಡೆ ನಡುವೆಯೂ ಘಾಜಿಪುರದ ರೈತ ಪ್ರತಿಭಟನೆಗೆ ಹರಿಯಾಣ, ಪಂಜಾಬ್, ರಾಜಸ್ಥಾನ ಸೇರಿ ಇನ್ನಿತರ ರಾಜ್ಯಗಳ ಹಳ್ಳಿ, ಹಳ್ಳಿಗಳಿಂದ ಭಾರೀ  ಪ್ರಮಾಣದ ಅನ್ನದಾತರ ದಂಡು ಗಡಿ ಪ್ರದೇಶಗಳಿಗೆ ಹರಿದುಬರುತ್ತಿದ್ದಾರೆ.

ಇದನ್ನು ಓದಿ :ರೈತ ಪ್ರತಿಭಟನೆಗಳ ಮೇಲೆ ದಿಲ್ಲಿ ಪೋಲೀಸ್ ರ ಅಮಾನವೀಯ ಮುತ್ತಿಗೆ

ಕೃಷಿ ಕಾಯ್ದೆ ರದ್ದತಿಗಾಗಿ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹಾಲಿವುಡ್ ನಟರು, ಚಿಂತಕರು ಬೆಂಬಲವನ್ನು ನೀಡುತ್ತಿದ್ದರು. ದೇಶದಲ್ಲೂ ಅನೇಕ ಪತ್ರಕರ್ತರೂ, ಸಂಪಾದಕರು ರೈತರ ಹೋರಾಟದ ಪರವಾಗಿ ಸುದ್ದಿ ಮಾಡಿ, ಕಾಯ್ದೆ ರದ್ದು ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ, ಆದರೆ ಸರಕಾರ ಇವುಗಳಿಂದ ಎಚ್ಚೆತ್ತುಕೊಳ್ಳುವ ಬದಲು ಮಾತನಾಡಿದವರನ್ನು, ಬರೆದವರನ್ನು ಬಂಧಿಸುವ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲಾದರೂ ಮೋದಿ ಸರಕಾರ ಕೃಷಿಕಾಯ್ದೆ ರದ್ದು ಮಾಡಲು ಮುಂದಾಗಬೇಕಿದೆ.

ಅನ್ನದಾತನ ಸುತ್ತ ತಡೆಗೋಡೆ – ತಡೆಗೋಡೆಗೆ ಹೆದರದ ಅನ್ನದಾತ

 

 

 

 

 

 

Donate Janashakthi Media

Leave a Reply

Your email address will not be published. Required fields are marked *