ಸಂವಿಧಾನ ರಕ್ಷಣಾ ದಿನ ಆಚರಣೆ

ಬೆಂಗಳೂರು; ಜ.26 : ಜನವರಿ 26ರಂದು ರೈತ ಪರ್ಯಾಯ ಪರೇಡ್, ಮೆರವಣಿಗೆ ಗಳಲ್ಲದೆ ‘ಸಂವಿಧಾನ ಸಂರಕ್ಷಣಾ ದಿನ’ವಾಗಿ ಸಭೆ ನಡೆಸುವ ಮೂಲಕವೂ ಆಚರಿಸಲಾಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಅಂದು ಬೆಳಿಗ್ಗೆ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಸಂಘಟಿಸಿದ ಮುಖ್ಯ ಸಭೆಯನ್ನುಖ್ಯಾತ ಚಿಂತಕ ಪ್ರೊ. ರಾಜೇಂದ್ರಚೆನ್ನಿ ಉದ್ಘಾಟಿಸಿದರು. ಕಾ.ಮೀನಾಕ್ಷಿ ಸುಂದರಂ ‘ಕಾರ್ಮಿಕ ಸಂಹಿತೆಗಳು ಮತ್ತುಕಾರ್ಮಿಕ ಚಳುವಳಿ”, ಕಾ.ಯು.ಬಸವರಾಜ್ “ಕೃಷಿ ಕಾಯಿದೆಗಳು ಮತ್ತು ರೈತ ಹೋರಾಟ”, ಕಾ. ಕೆ.ಎಸ್.ವಿಮಲ “ಲಾಕ್‌ಡೌನ್ ಮತ್ತು ಮಹಿಳೆಯರು”,  ಕಾ. ವಾಸುದೇವರೆಡ್ಡಿ “ನೂತನ ಶಿಕ್ಷಣ ನೀತಿಯ ಅಪಾಯಗಳು” ಹಾಗೂ ಕಾ. ಗೋಪಾಲಕೃಷ್ಣ ಅರಳಹಳ್ಳಿ “ದಲಿತ ಹಕ್ಕುಗಳು ಮತ್ತು ಪ್ರಸಕ್ತ ಪರಿಸ್ಥಿತಿ”ಕುರಿತು ಮಾತನಾಡಿದರು.

ಎಲ್ಲ ಮಾತನಾಡಿದವರು ಪ್ರಸ್ತುತ ಸರಕಾರ ಹೇಗೆ ಸಂವಿಧಾನದ ಆಶಯಗಳಿಗೆ ಮತ್ತುಆಯಾ ಜನವಿಭಾಗಗಳಿಗೆ ವಿರುದ್ಧವಾದ ನೀತಿಗಳನ್ನು ಹರಿಯಬಿಡುತ್ತಾ ಸಂವಿಧಾನವನ್ನು ಒಳಗಿನಿಂದಲೇ ಕೊರೆಯುತ್ತಾಅರ್ಥಹೀನ ಮತ್ತು ದುರ್ಬಲಗೊಳಿಸುತ್ತಿದೆ ಎಂದು ವಿವರಿಸಿದರು. ಕಾ.ಕೆ.ಎನ್. ಉಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾ.ಎಚ್.ಎನ್.ಗೋಪಾಲಗೌಡಧ್ವಜಾರೋಹಣ ಮಾಡಿದರು. ಕಾ,ಕೆ.ಪ್ರಕಾಶ್‌ಅಧ್ಯಕ್ಷತೆ ವಹಿಸಿದ್ದರು. ರಾಜ್ಯದಇತರೆಡೆಇಂತಹ ಹಲವು ಸಭೆಗಳನ್ನು ನಡೆಸಲಾಯಿತುಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *