ಬೆಂಗಳೂರು; ಜ, 26 : ಕೃಷಿ ಮಸೂದೆಗಳ ರದ್ದತ್ತಿಗಾಗಿ ಒತ್ತಾಯಿದಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪರೇಡ್ ನ ಬೆಂಬಲಿಸಿ ಬೆಂಗಳೂರಿನಲ್ಲಿ ಇಂದು ರೈತರು ಪರೇಡ್ ನಡೆಸಿದರು. ರಾಜ್ಯದ ಮೂಲೆ ಮೂಲೆಗಳಿಂದ ರೈತರು ರಾಜ್ಯದ ರಾಜಧಾನಿಗೆ ನಿನ್ನೆ ರಾತ್ರಿಯಿಂದಲೆ ಲಗ್ಗೆ ಇಟ್ಟಿದ್ದಾರೆ. ಕ್ರಾಂತಿ ಗೀತಿಗಳನ್ನು ಹಾಡುತ್ತಾ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ರೈತ ವಿರೋಧಿ ಕೃಷಿ ಮಸೊದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನ ರೈಲೈ ನಿಲ್ದಾಣ, ನೈಸ್ ರೋಡ್, ಹೂಸಕೋಟೆ ಟೋಲ್, ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಿಂದ ರೈತರು ಪ್ರೀಡಂ ಪಾರ್ಕ್ ನತ್ತ ತಮ್ಮ ಟ್ರ್ಯಾಕ್ಟರ್ ಮೂಲಕ ಬಂದಿಳಿದಿದ್ದಾರೆ.
ಐತಿಹಾಸಿಕ ರೈತ ಚಳುವಳಿಯಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿ, ದಲಿತ, ಯುವಜನರು ಇಂದು ನಡೆದ ಪರೇಡ್ನಲ್ಲಿ ಭಾಗವಹಿಸಿ ಬೆಂಬಲಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೆಂಗಳೂರಿನ ಐದು ಪ್ರಮುಖ ಭಾಗಗಳಿಂದ ರೈತರು ಫ್ರೀಂಡಂ ಪಾರ್ಕ್ ನತ್ತ ಪಥ ಸಂಚಲನ ಆರಂಭವಾಗಿದೆ.. ಈಗಾಗಲೇ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ರೈತರು ಜಮಾವಣೆಗೊಂಡ ರೈತರ ಟ್ರ್ಯಾಕ್ಟರ್ ಗಳನ್ನು ಒಳಬಿಡದಂತೆ ಪೋಲಿಸ್ ರು ತಡೆಯೊಡ್ಡುತ್ತಿದ್ದಾರೆ. ಇದು ರೈತ ವಿರೋಧಿ ಕೆಲಸ. ಅನ್ನದಾತರ ಹೋರಾಟಕ್ಕೆ ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ರೈತರು ವಿರೋಧಿಸಿದ್ದಾರೆ.
ಇನ್ನು ನೈಸ್ ರೋಡ್ ನಲ್ಲಿ ನಡೆಯುತ್ತಿರುವ ಪರೇಡ್ನಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡರು ರೈತರು ಉಳಿದರೆ ಮಾತ್ರ ದೇಶ ಉಳಿಯೋದು. ದೇಶ ಉಳಿದರೇ ನಾವೆಲ್ಲರೂ ಉಳಿಯೋದು. ಈ ದೇಶಕ್ಕೆ ಅನ್ನದಾತ ನಮ್ಮ ರೈತ. ಅಂತಹ ಮಣ್ಣಿನ ಮಕ್ಕಳು ನಾವು ನಮ್ಮ ಹಕ್ಕುಗಳನ್ನು ಗಣತಂತ್ರದ ದಿನದಂದು ಕೃಷಿ ಮಸೊದೆ ವಾಪಾಸಾತ್ತಿಗಾಗಿ ಕೇಳುತ್ತಿದ್ದೇವೆ. ಆಳುವ ಸರ್ಕಾರ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದರು
ಈ ಕಾಯ್ದೆಗಳ ರದ್ದತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಟ್ರ್ಯಾಕರ್ ರ್ಯಾಲಿಯನ್ನು ಬಲವಂತವಾಗಿ ತಡೆದಿದ್ದಾರೆ. ಕೇಸುಗಳನ್ನು ಹಾಕುತ್ತೇವೆ ಎನ್ನುವ ಬೆದರಿಕೆ ಹಾಕಿ ಟ್ರ್ಯಾಕ್ಟರ್ ರ್ಯಲಿಯನ್ನು ತಡೆಯುತ್ತಿದ್ದಾರೆ ಇದನ್ನು ನಾವು ವಿರೋಧಿಸಿಸುತ್ತೇವೆ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಹೂಸಕೋಟೆ ಟೋಲ್ನಿಂದ ಆರಂಭವಾದ ಪರೇಡ್ ನಲ್ಲಿ ರೈತರು,ರೈತ ಮಕ್ಕಳು, ವಿದ್ಯಾರ್ಥಿಗಳು, ಯುವಜನ ಭಾಗವಹಿಸಿದ್ದಾರೆ.