ಸುಪ್ರಿಂ ಕೋರ್ಟ್ ಮೂರು ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯಗಳನ್ನು ಕೇಳಿಕೊಂಡು ಈ ಕುರಿತು ಶಿಫಾರಸು ಮಾಡಲೆಂದು ನೇಮಿಸಿದ ಪರಿಣಿತರ ಸಮಿತಿಯ ಸದಸ್ಯರ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ದೇಶದ ಮುಖ್ಯ ನ್ಯಾಯಾಧೀಶರು ಹೇಳಿರುವುದಾಗಿ ವರದಿಯಾಗಿದೆ. ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸದಸ್ಯರೆಲ್ಲರೂ ಈ ಕೃಷಿ ಕಾಯ್ದೆಗಳ ಪರವಾದ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದವರಾಗಿರುವುದು ಕೇವಲ ಕಾಕತಾಳೀಯವಲ್ಲ ಎಂಬ ಟೀಕೆ ವ್ಯಾಪಕವಾಗಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವರೆಂದು ಹೇಳಲಾಗುತ್ತಿದೆ.
ಅಭಿಪ್ರಾಯಗಳು ಮತ್ತು ಗುರುತು
ವ್ಯಕ್ತಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳ ಆಧಾರದಲ್ಲಿ
ಅವರಿಗೆ ಹಣಪಟ್ಟಿ ಹಚ್ಚಬೇಡಿ ಎಂದು ಹೇಳುತ್ತಾರೆ.
ಜನಗಳನ್ನು ಅವರ ಅಭಿಪ್ರಾಯದಿಂದ ಅಲ್ಲವಾದರೆ
ಬೇರೆ ಯಾವ ರೀತಿಯಲ್ಲಿ ಗುರುತಿಸುವುದು?
(ವ್ಯಂಗ್ಯಚಿತ್ರ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
***
ಕಾಯ್ದೆಗಳ ಅಮಾನತು ಅಂದರೇನು?
ಈ ಕಾಯ್ದೆಗಳು ಚೆನ್ನಾಗಿವೆ, ಸಂದೇಹವಿದ್ದರೆ ಒಂದೆರಡು ವರ್ಷ ಪ್ರಯೋಗ ನಡೆಸೋಣ, ಸರಿ ಕಾಣದಿದ್ದರೆ ಬದಲಿಸೋಣ ಎಂದು ರಕ್ಷಣಾ ಮಂತ್ರಿಗಳು ರೈತರಿಗೆ ಒಬ್ಬ ಹಿತೈಷಿಯಾಗಿ ಸಲಹೆ ನೀಡಿದ್ದರು. ಇದು ರೈತರಿಗೆ ಉರುಳು, ಅದಕ್ಕೆ ಕುತ್ತಿಗೆ ಕೊಡುವುದು ಎಂತ ಪ್ರಯೋಗ ಎಂದು ರೈತರು ಅದನ್ನು ತಿರಸ್ಕರಿಸಿದ್ದರು.
ಮೊದಲು ಬಳಸಿ, ಆಮೇಲೆ ವಿಶ್ವಾಸವಿಡಿ!
ಒಂಭತ್ತು ಸುತ್ತಿನ ಮಾತುಕತೆಗಳ ನಂತರ ಸರಕಾರ ಅಧಿಕೃತವಾಗಿ ಈ ಕಾಯ್ದೆಗಳ ಜಾರಿಯನ್ನು ಒಂದಿಂದ ಒಂದೂವರೆ ವರ್ಷದ ವರೆಗೆ ಅಮಾನತಿನಲ್ಲಿಡುತ್ತೇವೆ ಎಂಬ ರಾಜಿಸೂತ್ರವನ್ನು ಮುಂದಿಟ್ಟಿತು. ಏನಿದರ ಅರ್ಥ?
ಒಂದೂವರೆ ವರ್ಷದ ವರೆಗೆ ಬಾಟಲಿಯೊಳಗೆ ಬಾರಪ್ಪಾ !
ಬಡಿಯುವ ಕೆಲಸ ಆಮೇಲೆ ಮಾಡಿದರಾಯಿತು ಎಂದರ್ಥವಿರಬಹುದೇ?
(ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್)
ಕಾರ್ಪೊರೇಟ್‍ಗಳು ಇದಕ್ಕೆ ಏನನ್ನಬಹುದು ಎಂದು ಸರಕಾರ ಸಮಾಲೋಚಿಸಿರಬಹುದೇ?
ರೈತರಿಗಾದರೆ ಇದು 2-3 ಬೆಳೆಗಳ ಪ್ರಶ್ನೆ. ಆದರೆ ನಮಗೆ 4-6 ತ್ರೈಮಾಸಿಕಗಳ ಪ್ರಶ್ನೆ!
(ವ್ಯಂಗ್ಯಚಿತ್ರ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
***
ಸಾಗದ ಆಟ?
ಸುಪ್ರಿಂ ಕೋರ್ಟ್ ಸಮಿತಿಯನ್ನೇನೋ ನೇಮಿಸಿತು, ಬಹುಶಃ ಸರಕಾರಕ್ಕೆ ಆಕ್ಷೇಪವಿಲ್ಲದವರನ್ನೇ ನೇಮಿಸಿತು. ಆದರೆ ರೈತರು ಅದನ್ನು ಮಾನ್ಯ ಮಾಡಿಲ್ಲ. ಜನವರಿ 26ರಂದು ಕಿಸಾನ್ ಗಣತಂತ್ರ ಪರೇಡ್ ನಡೆಸುತ್ತೇವೆ ಎಂದರು.
ಇದು ದೇಶಕ್ಕೆ ಅವಮಾನಕಾರಿ ಮತ್ತು ಅಪಾಯಕಾರಿ ಎನ್ನುತ್ತಿದ್ದ ಸರಕಾರ ದಿಲ್ಲಿ ಪೋಲಿಸ್ ಮೂಲಕ ಇದನ್ನು ಮಾಡದಂತೆ ರೈತರನ್ನು ತಡೆಯಬೇಕು ಎಂದು ಅರ್ಜಿ ಹಾಕಿತು, ಆದರೆ ಇದು ಕಾನೂನು-ಸುವ್ಯವಸ್ಥೆಯ ಪ್ರಶ್ನೆ, ಇದನ್ನು ನಿರ್ಧರಿಸುವ ಅಧಿಕಾರ ನಿಮಗಿದೆ, ನೀವೇ ನಿರ್ಧರಿಸಿ ಎಂದು ಸುಪ್ರಿಂ ಕೋರ್ಟ್ ಹೇಳಿತು!
(ವ್ಯಂಗ್ಯಚಿತ್ರ: ಸಾತ್ವಿಕ್ ಗಡೆ, ದಿ ಹಿಂದು)
***
ಪಾಪ! ದಿಲ್ಲಿ ಪೋಲೀಸ್ ಕಾನ್ಸ್ ಟೇಬಲ್‍ಗಳಿಗೆ ದಿಲ್ಲಿಯ ಗಡಿ ಕಾಯುವ ಕರ್ತವ್ಯ!
ಗಣತಂತ್ರ ಶಾಂತಿಯಿಂದ ತನ್ನ ಶಕ್ತಿಯ ಪರೇಡ್ ನಡೆಸುವಾಗ ನಮ್ಮ ಗಡಿಗಳನ್ನು ಕಾಯುವ ವೀರ ದಿಲ್ಲಿ ಪೋಲಿಸ್ ಕಾನ್ಸ್ ಟೇಬಲ್ ಗಳಿಗೆ ನಮನ!
(ವ್ಯಂಗ್ಯಚಿತ್ರ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
***
ಟ್ರಂಪ್ ಕಾರ್ಡ್‍ಗಳ ಆಟ ಇನ್ನು ಸಾಗದು, ಸರ್.
ಬಹುಶಃ ಆಟವಾಡದಿದ್ದಾಗಲೇ ನೀವು ಗೆಲ್ಲುವುದು.
(ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)
***
ಮುಂದೇನು?
ಅಕ್ಟೋಬರ್: ರೆಪ್ಪೆಯನ್ನೂ ಅಲುಗಾಡಿಸೆವು!
ಡಿಸೆಂಬರ್: ಸರಿಯಪ್ಪಾ…..ಆದರೆ ಬಾಗುವುದಿಲ್ಲ!
ಜನವರಿ:ಸರಿಯಪ್ಪಾ….ಆದರೆ ನಾವು ಹಿಂತೆಗೆದುಕೊಳ್ಳುವದಿಲ್ಲ!
ಮುಂದೆ?- ಈ ಖಾಲಿ ಜಾಗ ನೋಡುತ್ತಿರಿ!
(ವ್ಯಂಗ್ಯಚಿತ್ರ: ಆಲೋಕ್ ನಿರಂತರ್/ಫೇಸ್ ಬುಕ್)
***
ಭಾರೀ ಗೆಲುವು! ಅಭಿನಂದನೆ! ಯಾರಿಗೆ?
ಹೊಳೆ-ಹೊಳೆಯುವ ಆಶಯ! ಅಸಾಧಾರಣ ಕೆಚ್ಚು!
ಮಹಾವಿಜಯ, ಟೀಮ್ ಇಂಡಿಯ!
ನಾವು ಗೆಲ್ಲುತ್ತೇವೆ!
(ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ)