ಮುಂಬೈ, ಬೆಂಗಳೂರು, ಕೋಲ್ಕತ್ತಾ, ನವದೆಹಲಿ ಯಲ್ಲಿ ಲೀಟರ್ ಗೆ 25 ಪೈಸೆ ಹೆಚ್ಚಳ
ನವದೆಹಲಿ ಜನವರಿ 22 : ಪೆಟ್ರೋಲ್- ಡೀಸೆಲ್ ದರ ಹೊಸ ಸರ್ವಕಾಲಿಕ ಎತ್ತರಕ್ಕೆ ಏರಿದೆ. ಪೆಟ್ರೋಲ್ ದರ ಲೀಟರ್ ಗೆ 25 ಪೈಸೆ ಏರಿಕೆ ಆಗಿ, ಬೆಂಗಳೂರಿನಲ್ಲಿ ರು. 88.33, ನವದೆಹಲಿಯಲ್ಲಿ ರು. 85.45, ಕೋಲ್ಕತ್ತಾದಲ್ಲಿ ರು. 86.87, ಮುಂಬೈನಲ್ಲಿ ರು. 92.04, ಚೆನ್ನೈನಲ್ಲಿ ರು. 88.07 ಇದೆ.
ಇನ್ನು ಡೀಸೆಲ್ ದರ ಕೂಡ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ರು. 80.20, ನವದೆಹಲಿಯಲ್ಲಿ ರು. 75.63, ಕೋಲ್ಕತ್ತಾದಲ್ಲಿ ರು. 79.23, ಮುಂಬೈನಲ್ಲಿ ರು. 82.40, ಚೆನ್ನೈನಲ್ಲಿ ರು. 80.90 ಇದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ದರ, ವಿದೇಶಿ ವಿನಿಮಯ ದರ, ಕೇಂದ್ರ ಸರ್ಕಾರದ ಸುಂಕ ಮತ್ತು ಸ್ಥಳೀಯ ತೆರಿಗೆಗಳು ಅಥವಾ ವ್ಯಾಟ್ ಆಧಾರದ ಮೇಲೆ ಭಾರತದಲ್ಲಿ ನಿತ್ಯವೂ ತೈಲ ದರದ ಪರಿಷ್ಕರಣೆ ಆಗುತ್ತದೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಪೆಟ್ರೋಲ್, ಡಿಸೈಲ್, ಅಡಿಗೆ ಅನಿಲದರ ಹೆಚ್ಚಳವಾಗುತ್ತಿದೆ.
ಇದನ್ನೂ ಓದಿ : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ
ಗುರುವಾರದಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಕಂಡಿತ್ತು. ಜಾಗತಿಕ ಬೆಂಚ್ ಮಾರ್ಕ್, ಬ್ರೆಂಟ್ ಕಚ್ಚಾ ಫ್ಯೂಚರ್ಸ್ 3 ಪರ್ಸೆಂಟ್ ಇಳಿಕೆ ಕಂಡು, ಬ್ಯಾರೆಲ್ ಗೆ $ 56.05 ಇತ್ತು. ಆದರೆ ಭಾರತದಲ್ಲಿ ಪೆಟ್ರೋಲ್ -ಡೀಸೆಲ್ ದರ ನಿಗದಿ ಮಾಡಿವಾಗ ಅಂತರರಾಷ್ಟ್ರೀಯ ಮಟ್ಟದ ಬೆಲೆಯ ಹದಿನೈದು ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಯು.ಎಸ್. ಹೊಸ ಅಧ್ಯಕ್ಷ ಜೋ ಬೈಡನ್ ಕೊರೊನಾ ಉತ್ತೇಜನ ಪ್ಯಾಕೇಜ್ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಕಳೆದ ಎರಡು ದಿನಗಳು ಬೆಂಚ್ ಮಾರ್ಕ್ ಮೇಲೇರಿತ್ತು. ಒಪೆಕ್ ಮತ್ತು ಸಹವರ್ತಿಗಳಿಂದ ಉತ್ಪಾದನೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿರುವುದು ಸಹ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ ಗುಡ್ ರಿಟರ್ಸ್ ತನ್ನ ವೆಬ್ಸೈಟ್ ನಲ್ಲಿ ಬರೆದುಕೊಂಡಿದೆ.
ಬೆಂಗಳೂರಿನಲ್ಲೂ ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಳವಾಗಿತ್ತಿದ್ದು, ಪೆಟ್ರೋಲ್ ಗೆ ಹಣ ಭರಿಸಲು ಕಷ್ಟವಾಗುತ್ತಿದೆ ಹಾಗಾಗಿ ದಿನಂಪ್ರತಿ ಬಿಎಂಟಿಸಿ ಬಸ್ ಮೂಲಕ ಕಚೇರಿಗೆ ಬರುತ್ತಿದ್ದೇನೆ ಎಂದು ಖಾಸಗಿ ಉದ್ಯೋಗಿ ಗಗನ್ ಮಂಡ್ಯ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡಿಸೈಲ್ ದರವೂ ಹೆಚ್ಚಳವಾಗುತ್ತಿದ್ದು ಕಾರು ಬಳಸುತ್ತಿದ್ದವರು ಪರದಾಡುವಂತಾಗಿದೆ. ಕಾರನ್ನು ಬಳಸಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹುಬ್ಬಳಿಯ ಕೃಷ್ಣಮೂರ್ತಿ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೆಳಗಿನ ವಿಡೀಯೊ ನೋಡಿ : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ವ್ಯಾಪಕ ವಿರೋಧ