ಬೆಂಗಳೂರು; ಜ,11: ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಇಂದು 48 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರಾದ ಮತ್ತು ಮಾಜಿ ನಾಯಕರಾದ ದ್ರಾವಿಡ್ ಮದ್ಯಪ್ರದೇಶ ಮೂಲದವರು. ಅಪ್ಪಟ್ಟ ಕನ್ನಡಿಗಾರಾದ ಇವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10,000ಕ್ಕೂ ಅಧಿಕ ರನ್ನುಗಳನ್ನು ಗಳಿ ವಿಶ್ವದಲ್ಲಿ 6ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಅಕ್ಟೋಬರ್ 2005ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ದಿ ವಾಲ್ ಹುಟ್ಟು ಹಬ್ಬಕ್ಕೆ ದ್ರಾವಿಡ್ ಗೆಳೆಯ ವಿವಿಎಸ್ ಲಕ್ಷ್ಮಣ, ದ್ರಾವಿಡ್ ಜೊತೆಯಾಟದ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಭಾರತ ಎ ತಂಡದ ಕೋಚ್ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿರುವ ದ್ರಾವಿಡ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಸ್ಥಾನದಲ್ಲಿದ್ದಾರೆ. 164 ಪಂದ್ಯಗಳ 286 ಇನ್ನಿಂಗ್ಸ್ಗಳಿಂದ 13,288 ರನ್ ಗಳಿಸಿದ್ದಾರೆ. ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವ, ಅರ್ಜುನ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ, ‘ವಿಸ್ಡನ್ ವರ್ಷದ ಕ್ರಿಕೆಟಿಗ’ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ‘ಸರ್ ಗಾರ್ಫೀಲ್ಡ್ ಸೋಬರ್ಸ್’ ಪ್ರಶಸ್ತಿ. ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಲ್ಲಿವೆ.
ಇವರ ಈ ಜನ್ಮದಿನದ ವಿಶೇಷ ದಿನಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಹರಿಸಿದ್ದಾರೆ . ಕೆಲವರು ದ್ರಾವಿಟ್ ಅವರಿಗೆ ಹೃದಯ ಬೆಚ್ಚಗಾಗುವ ಶುಭಾಶಯಗಳ ಜೊತೆಗೆ ಅವರ ಅದ್ಭುತ ಆಟದ ವೃತ್ತಿ ಜೀವನದ ಕೆಲ ವಿಶೇಷ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಟೆಸ್ಟ್ ಸ್ಪೆಷಲಿಸ್ಟ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ದ್ರಾವಿಡ್ ಏಕದಿನ ಮತ್ತು ಟೆಸ್ಟ್ ಎರಡರಲ್ಲೂ ಅದ್ಭುತ ವೃತ್ತಿಜೀವನವನ್ನು ಹೊಂದಿದ್ದರು, ಏಕೆಂದರೆ ಅವರು ಎರಡೂ ಸ್ವರೂಪಗಳಲ್ಲಿ 10 ಸಾವಿರ ರನ್ ಪೂರೈಸಿದ ಖ್ಯಾತಿ ರಾಹುಲ್ಗೆ ಇದೆ.
ದ್ರಾವಿಡ್ ಅವರೊಂದಿಗೆ ಕೆಲವು ಸ್ಮರಣೀಯ ಸಹಭಾಗಿತ್ವವನ್ನು ಹಂಚಿಕೊಂಡ ಭಾರತದ ಮಾಜಿ ಬ್ಯಾಟ್ಸ್ಮನ್ ವಿ.ವಿ.ಎಸ್. ಲಕ್ಷ್ಮಣ್ ಅವರು ತಮ್ಮ ವಿಶೇಷ ಸ್ನೇಹಿತನಿಗೆ ಆತ್ಮೀಯ ಶುಭಾಶಯಗಳನ್ನು ಎಂದು ಟ್ವಿಟರ್ನಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ನಾನು ಸಾಕಷ್ಟು ಅದ್ಭುತ ನೆನಪುಗಳನ್ನು ಹಂಚಿಕೊಂಡ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು, ನಮಗೆ ನೀವು ಸದಾ ಸ್ಫೂರ್ತಿ ತುಂಬುತ್ತಲೇ ಇರುತ್ತೀರಿ ಎಂದು ಲಕ್ಷ್ಮಣ್ ರಾಹುಲ್ಗೆ ವಿಷ್ ಮಾಡಿದ್ದಾರೆ.
Warm birthday wishes to a special friend with whom I shared a lot of wonderful memories and who continues to inspire us. Wishing you a very special birthday and a wonderful year ahead Rahul. pic.twitter.com/S3hWufvD9r
— VVS Laxman (@VVSLaxman281) January 11, 2021
ಭಾರತದ ಪ್ರಮುಖ ಆಟಗಾರರಾಗಿದ್ದ ಕನ್ನಡಿಗ ದೊಡ್ಡ ಗಣೇಶ್, ಹರ್ಷಾ ಭೋಗ್ಲೆ ಸೇರಿದಂತೆ ಸಾಕಷ್ಟು ಮಂದಿ ವಿಷ್ ಮಾಡಿದ್ದಾರೆ. ನಾಗರಿಕ ಗೌರವ ಪದ್ಮಶ್ರೀ ಮತ್ತು ಪದ್ಮಭೂಷಣ್ ಪಡೆದರು. ಅವರು 2004 ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು.