ರಂಗಸ್ಥಳದಲ್ಲಿಯೇ ಸಾವನ್ನಪಿದ ಯಕ್ಷಗಾನ ಕಲಾವಿದ ಸಾಧು ಕೊಠಾರಿ

 ಉಡುಪಿ, ಜ.5  ರಂಗ ಸ್ಥಳದಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ ಸ್ಥಳದಲ್ಲೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳದಿದ್ದಾರೆ.

ಯಕ್ಷಗಾನ ಕಲಾವಿದ ಸಾಧು ಕೊಠಾರಿ ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೊಠಾರಿ ಅವರು ಇಂದು ಬೆಳಗಿನ ಜಾವ 3 ಗಂಟೆ ಸಮಯಕ್ಕೆ  ಪ್ರದರ್ಶನ ನೀಡುತ್ತಿದ್ದ ವೇಳೆ ರಂಗಸ್ಥಳದಲ್ಲೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸಾಧು ಕೊಠಾರಿ ರಂಗದಲ್ಲಿ ಮಹಾಕಲಿ ಮಗದೇಂದ್ರ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದರು. ಪ್ರದರ್ಶನದಲ್ಲಿ ಕುಣಿಯುತ್ತಿದ್ದ ವೇಳೆ ಹೃದಾಯಾಘತ ಸಂಭವಿಸಿದೆ ಎಂದು ವೈಧ್ಯರು ಖಚಿತ ಪಡಿಸಿದ್ದಾರೆ.

ಕೊಠಾರಿ ಕುಟುಂಬದೊಂದಿಗೆ ಬಾರ್ಕೂರ್ನಲ್ಲಿ ನೆಲೆಸಿದ್ದರು, ಬಟಗು ತಿಟ್ಟುಯಕ್ಷಗಾನ ಕಲೆಯ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿ ಕೊಠಾರಿಯವರನ್ನು ಹೆಸರಿಸಲಾಗುತ್ತದೆ. ಕಳೆದ ನಾಲ್ಕು ದಶಕಗಳಿಂದ ಅವರು ಕಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದ್ದರು. ಇವರ ನಿಧನಕ್ಕೆ ಅನೇಕ ಕಲಾವಿದರು, ಶಿಷ್ಯವರ್ಗ ಕಂಬನಿ ಮಿಡಿದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *