ಬೆಂಗಳೂರು : ಡಿಸೆಂಬರ್ 27; ರಾಜ್ಯದಲ್ಲಿ ಕೋರೋನಾ ಸೋಂಕಿನ ಭೀತಿಯ ನಡುವೆಯೂ ಮೊದಲ ಹಂತದ ಗ್ರಾಮ ಪಂಚಾಯಿತಿಯ ಮತದಾನ ನಡೆದಿದ್ದು, ಎರಡನೇ ಹಂತದ ಸಾರ್ವತ್ರಿಕ ಗ್ರಾಮ ಪಂಚಾಯತ್ ಚುನಾವಣೆಯು ನಾಳೆ ಅಂದರೇ ಇದೇ ಭಾನುವಾರ ಮತದಾನ ನಡೆಯಲಿದೆ.
ಇಂದು ಮನೆ ಮನೆ ಬಿರುಸಿನ ಪ್ರಚಾರದ ಕಾವು ತೀವ್ರಗೊಂಡಿದ್ದು, ಹಣ, ಸಾರಾಯಿ, ಅಕ್ಕಿ, ಸೀರೆ ಮುಂತಾದ ಆಮಿಷೆಗಳನ್ನು ನೀಡಿ ಮತದಾರರನ್ನು ಸೆಳೆಯಲು ಅಭ್ಯಾರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುವ ಸಾಧ್ಯತೆಗಳಿವೆ.
27ರ ಭಾನುವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ರಾಜ್ಯದ 109 ತಾಲ್ಲೂಕುಗಳ 2709 ಗ್ರಾಮಪಂಚಾಯತ್ ಗಳಿಗೆ ಮತದಾನ ನಡೆಯಲಿದೆ. ಒಟ್ಟು 43,291 ಸ್ಥಾನಗಳ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 1,05,431 ಅಭ್ಯರ್ಥಿಗಳಿದ್ದಾರೆ. ಇನ್ನು 3697 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.