ಬೆಂಗಳೂರು :ಗ್ರಾಮ ಪಂಚಾಯಿತಿ ಚುಣಾವಣೆಗೆ ಸ್ಪರ್ದಿಸಿದ್ದ ದಲಿತ ಅಭ್ಯರ್ಥಿಗಳ ನಾಮಪತ್ರ ಗ್ರಾಮಪಂಚಾಯಿತಿ ಅಧಿಕಾರಿಗಳ ಎಡವಟ್ಟಿನಿಂದಾಗಿ ತಿರಸ್ಕೃತಗೊಂಡಿದೆ.
ಮಹದೇವಪುರ ವಿಧಾನಸಭಾ ವ್ಯಾಪ್ತಿಯ ದೊಡ್ಡಬನಹಳ್ಳಿ ಗ್ರಾಮಪಂಚಾಯಿತಿಯ ಚಿಕ್ಕಬನಹಳ್ಳಿ ಕಾಲೋನಿಯ ವಸಂತಾ. ಪೆರುಮಾಳಪ್ಪ, ಮುನಿರಾಜು, ಹಾಗೂ ಸಜೀಲಾ ನಾಮಪತ್ರ ಸಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದಪಡಿಸಿದ್ದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದ ಕ್ರಮಸಂಖ್ಯೆಯನ್ನು ತಮ್ಮ ನಾಂಪತ್ರ ಸಲ್ಲಿಕೆ ವೇಳೆ ನಮೂದಿದ್ದರು. ಆದರೆ ಅಧಿಕಾರಿಗಳು ಹೊಸ ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ನಾಮಪತ್ರ ಪರಿಶೀಲಿಸಿದ್ದಾರೆ. ಇದರಿಂದ ಅಭ್ಯಾರ್ಥಿಗಳು ನಮೂದಿಸಿದ್ದ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯಲ್ಲಿ ವ್ಯಾತ್ಯಾಸವಾಗಿದೆ. ಇದರಿಂದಾಗಿ ಅಭ್ಯಾರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ತಿಳಿದುಬಂದಿದೆ.
ನಾವು ತಪ್ಪು ಮಾಹಿತಿ ನೀಡಿದ್ದೇವೆ ಎಂದು ಉದ್ದೇಶಪೂರ್ವಕವಾಗಿ ಅಧಿಕಾರಿಗಳು ನಮ್ಮ ನಾಮಪತ್ರ ಸಲ್ಲಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಅಭ್ಯಾರ್ಥಿಗಳು ಅಧಿಕಾಯ ವಿರುದ್ಧ ದೂರಿದ್ದಾರೆ. ಅಲ್ಲದೇ ತಾಲ್ಲೂಕು ಕಛೇರಿಗೆ ಮುತ್ತಿಗೆಹಾಕುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೇ ನಮ್ಮ ಗ್ರಾಮದಿಂದ ಯಾರೋಬ್ಬರು ಮತಹಾಕಲು ಬರುವುದಿಲ್ಲ ಎಂದು ತಿಳಿಸಿದ್ದಾರೆ