ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಶ್ ಖಂಚಂದಾನಿಯನ್ನು ಇಂದು ಮುಂಜಾನೆ ಮುಂಬೈ ಅಪರಾಧ ಶಾಖೆ ಪೊಲೀಸರು ಬಂದಿಸಿದ್ದಾರೆ.
ಖಂಚಂದಾನಿ ನಕಲಿ ಟಿಆರ್ಪಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ 13 ನೇ ಆರೋಪಿಯಾಗಿದ್ದಾರೆ. ವೀಕ್ಷಕರ ಅಂಕಿ ಅಂಶಗಳನ್ನು ಹೆಚ್ಚಿಸಲು ರಿಪಬ್ಲಲಿಕ್ ಟಿವಿ ಅನ್ಯಮಾರ್ಗಗಳನ್ನು ಹುಡುಕಿಕೊಂಡಿತ್ತು ಎಂಬುದು ತನಿಖೆಯ ವೇಳೆ ಒಂದೊಂದೆ ಅಂಶಗಳು ಹೊರಬರುತ್ತಿವೆ. ಕೆಲ ಕುಟುಂಬಗಳಿಗೆ ಮಾಸಿಕವಾಗಿ 15 ಲಕ್ಷಕ್ಕೂ ಹೆಚ್ಚಿನ ಹಣ ಪಾವತಿಸಿ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದರು ಎಂದು ಕೇಬಲ್ ವಿತರಕ ಸಂಸ್ಥೆಯಾದ ಕ್ರಿಸ್ಟೆಲ್ ಬ್ರಾಡ್ ಕ್ಯಾಸ್ಟ್ ಮಾಲಿಕರು ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.