ಇರಾನ್‌ನ ಪರಮಾಣು ವಿಜ್ಞಾನಿಯ ಕೊಲೆ

ಟೆಹ್ರಾನ್‌: ಇರಾನ್‌ನ ಉನ್ನತ ಮಟ್ಟದ ಪರಮಾಣು ವಿಜ್ಞಾನಿ ಮೊಹ್ಸಿನ್ ಫಖ್ರಿಜಾದ್‌ ಯನ್ನು ಉತ್ತರ ಇರಾನ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ.

2000ರ ದಶಕದ ಆರಂಭದಲ್ಲಿ ಏಕಾಏಕಿ ನಿಲ್ಲಿಸಲಾದ ಇರಾನ್‌ನ ಮೊದಲ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪ್ರೇರಕ ಶಕ್ತಿ ವಿಜ್ಞಾನಿ ಮೊಹ್ಸಿನ್ ಫಖ್ರಿಜಾದ್‌ ಆಗಿದ್ದರು ಎಂದು ಅಮೆರಿಕದ ಗುಪ್ತಚರ ಇಲಾಖೆ ಅಭಿಪ್ರಾಯಪಟ್ಟಿತ್ತು.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಜ್ಞಾನಿ ಮೊಹ್ಸಿನ್‌ ಫಖ್ರಿಜಾದ್‌ ಅವರ ಜೀವ ಉಳಿಸಲು ವೈದ್ಯರು ಪ್ರಯತ್ನಿಸಿದರಾದರೂ, ಅವರು ಬದುಕುಳಿಯಲಿಲ್ಲ ಎಂದು ಇರಾನ್‌ನ ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ

Donate Janashakthi Media

Leave a Reply

Your email address will not be published. Required fields are marked *