ಮಂಗಳೂರಿನಲ್ಲಿ ಲಷ್ಕರ ಪರ ಗೋಡೆ ಬರಹ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಮಂಗಳೂರು : ಮಂಗಳೂರು ನಗರದ ಹೃದಯ ಭಾಗದ ಕದ್ರಿ ಪೊಲೀಸ್ ಠಾಣೆಯ ಸಮೀಪ ಗೋಡೆಯೊಂದರಲ್ಲಿ ಲಷ್ಕರ್, ತಾಲಿಬಾನ್ ಪರ ಘೋಷಣೆ ಕಂಡು ಬಂದಿದೆ.  ಉಗ್ರ ಸಂಘಟನೆಯ ವಿವಾದಾತ್ಮಕ ಗೊಡೆ ಬರಹ  ಅನೇಕ ಚರ್ಚೆಗಳನ್ನು ಹುಟ್ಟಿ ಹಾಕಿದೆ.  ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿದ್ದಾರೆ.

ಗೋಡೆ ಬರಹದಲ್ಲಿ ಏನಿದೆ? Do Not Force To More  Lashkor -Toiba And Taliban To Deal With  Sanghis  And  Manuvedis   ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ.  ನವೆಂಬರ್ 26 ರ ತಡರಾತ್ರಿ ಇದನ್ನು ಬರೆಯಲಾಗಿದೆ ಎಂದು ಶಂಕಿಸಲಾಗಿದೆ.  2008 ರಲ್ಲಿ ನವೆಂಬರ್ 26 ರಂದು ಲಷ್ಕರ್ ತೊಯಬ್ ಸಂಘಟನೆ ಮುಂಬೈ ಮೇಲೆ ದಾಳಿಯನ್ನು ನಡೆಸಿದ್ದನ್ನು ನಾವಿಲ್ಲ ಗಮಿಸಬಹುದಾಗಿದೆ.  ಮತ್ತೇ ಈಗ ಇಂತಹ ಗೋಡೆ ಬರಹ ಕಂಡಿದ್ದು ಜನರಲ್ಲಿ ಭಯ  ಹುಟ್ಟಿಸಿದೆ.
ಮುನೀರ್ ಕಾಟಿಪಳ್ಳ , ಡಿವೈಎಫ್ಐ ರಾಜ್ಯಾಧ್ಯಕ್ಷ
ಜನತೆ ಬದುಕಿನ ಸಂಕಟಗಳಿಂದ ಹೈರಾಣಾಗಿ ಸರಕಾರದ ನೀತಿಗಳ ವಿರುದ್ದ ತಿರುಗಿ ಬೀಳುತ್ತಿರುವಾಗ ಏಕಾ ಏಕಿ ಇಂತಹ ಬರಹಗಳು, ಓವೈಸಿಯಂತವರು ಪ್ರಧಾನ ವೇದಿಕೆಗೆ ಎಂಟ್ರಿಕೊಡುತ್ತಿರುವುದರ ಹಿಂದೆ ಏನೋ ಒಂದು ಸಮಾನ ಅಂಶ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯುವ, ಭಾವನಾತ್ಮಕವಾಗಿ ಕಟ್ಟಿ ಹಾಕುವ ಯೋಜನೆ ಇದರ ಹಿಂದಿರಬಹುದು‌  ಎಂದು ಡಿವೈಎಫ್ಐ ಶಂಕೆಯನ್ನು ವ್ಯಕ್ತಪಡಿಸಿದೆ.
ಈ ಸಮಾಜದ್ರೋಹಿ ಗೋಡೆ ಬರಹ ಬರೆದವರನ್ನು ಪೊಲೀಸ್ ಇಲಾಖೆ ಇಪ್ಪತ್ತನಾಲ್ಕು ಘಂಟೆಗಳ ಒಳಗಡೆ ಬಂಧಿಸಬೇಕು. ಇದು ಬಿಜೆಪಿಯ ಆಡಳಿತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುಸಿದಿರುವುದರ ಒಂದು ನಿದರ್ಶನ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ  ಆರೋಪಿಸಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *