ಬೆಂಗಳೂರು : ಕೋರೊನಾ ಸಾಂಕ್ರಾಮಿಕ ರೋಗದಿಂದ ಶಾಲೆಗಳು ಆರಂಭ ವಿಳಂಭವಾಗುತ್ತಿವೆ. ಇದರಿಂದ ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಯಿಂದ ದೂರವಿರಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ದೂರದರ್ಶನ ಚಂದನವಾಹಿನಿಯಲ್ಲಿ 5,6,7 ನೇ ತರಗತಿಗಳಿಗೆ ಸಂವೇದಾ ಪಾಠ ಪ್ರಾರಂಭವಾಗಲಿವೆ.
ವಿದ್ಯಾರ್ಥಿಗಳ ಕಲಿಕಾ ನಿರಂತರತೆಗಾಗಿ ನಂ 23 ರಿಂದ 5,6,7 ನೇ ತರಗತಿಗಳಿಗೆ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮವನ್ನು ವಿಸ್ತರಿಸಲಾಗಿದ್ದುಈ ಕಾರ್ಯಕ್ರಮಗಳು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ತರಗತಿಗಳ ವಿಷಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ, ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಮತ್ತು ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನುಒಳಗೊಂಡಿದ್ದು, ಸೋಮುವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 8 ರಿಂದ 9.30 ಮತ್ತು ಸಂಜೆ 5.30 ರಿಂದ 6 ಗಂಟೆ ವರೆಗೆ ತರಗತಿಗಳು ಪ್ರಸಾರವಾಗಲಿವೆ. ಪ್ರತಿದಿನ 4 ಪಾಠಗಳು ನಡೆಯಲಿದ್ದು ಪ್ರತಿ ಪಾಠವು 30 ನಿಮಿಷ ಅವಧಿಯಂತೆ 2 ಗಂಟೆಗಳ ಕಾಲ ನಡೆಸಲಾಗುತ್ತದೆ ಎಂದು ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.