ಪಾವಗಡ ತಾಲೂಕು  ಪಂಚಾಯಿತಿ ಇಓ ಹಾಗೂ ಪಿಡಿಓ ಮೇಲೆ ಲೋಕಾಯುಕ್ತದಲ್ಲಿ ದೂರು

ತುಮಕೂರು : ಗ್ರಾಮ ಪಂಚಾಯಿತಿ ಪಿಡಿಓ, ಗ್ರೇಡ್ 1 ಕಾರ್ಯದರ್ಶಿ, ಗ್ರೇಡ್ 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನ್ನು ನಿಯಮಬಾಹಿರವಾಗಿ ನಿಯೋಜನೆ ಮಾಡಿರುವ ಬಗ್ಗೆ  ಹಾಗೂ ವೈ ಎನ್ ಹೊಸಕೋಟೆ ಗ್ರಾಮಪಂಚಾಯಿತಿಯಲ್ಲಿ ನಡೆದಿರುವ 8 ಲಕ್ಷ ಭ್ರಷ್ಟಚಾರದ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಹನುಮಂತನಹಳ್ಳಿ ರಮೇಶ್  ಲೋಕಾಯುಕ್ತದಲ್ಲಿ ದೂರು ದಾಖಲಿಸಲಿಸಿದ್ದಾರೆ.

ಪಾವಗಡ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಆರ್ ಡಿ ಪಿ ಆರ್ ನಿಯಮಗಳನ್ನು ಉಲ್ಲಂಘಿಸಿ ಗ್ರಾಮ ಪಂಚಾಯ್ತಿಗಳ ಪಿಡಿಓ, ಗ್ರೇಡ್1 ಕಾರ್ಯದರ್ಶಿ , ಗ್ರೇಡ್ 2 ಕಾರ್ಯದರ್ಶಿ  ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ನಿಯೋಜನೆ ಮತ್ತು ವರ್ಗಾವಣೆಗಳನ್ನು ಮಾಡಲಾಗಿತ್ತು .ಇದನ್ನು ಪ್ರಶ್ನಿಸಿ ಹಲವಾರು ಬಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವರದಿ ನೀಡುವಂತೆ ಸೂಚಿಸಿದರು ರಾಜಕಾರಣಿಗಳ ಒತ್ತಡಕ್ಕೆ ಮಣಿದು  ಜಿಲ್ಲಾ ಪಂಚಾಯತ್  ಸಿ ಇಓ ಗೆ ಸುಳ್ಳು ವರದಿಗಳನ್ನು ತಾಪಂ ಇಓ ನೀಡಿದರು .

ಅಲ್ಲದೆ ವೈ ಎನ್ ಹೊಸಕೋಟೆ ಪಿಡಿಓ ಪಂಚಾಯಿತಿಯಲ್ಲಿ 8 ಲಕ್ಷ  ಭ್ರಷ್ಟಾಚಾರ ನಡೆಸಿದರು ಕ್ರಮ ಜರುಗಿಸಿದೆ ತಾ ಪಂ ಇಓ ನಿರ್ಲಕ್ಷ್ಯವಹಿಸಿದರು . ಕರ್ನಾಟಕ ಪಾರದರ್ಶಕ ಅಧಿನಿಯಮ ದಂತೆ ಪೇಪರ್ ನೋಟಿಫಿಕೇಶನ್ ಹಾಗೂ ಟೆಂಡರ್ ಕರೆಯದೆ ವೈಎನ್ ಹೊಸಕೋಟೆ ಪಿಡಿಓ ತಮ್ಮ ಸ್ನೇಹಿತರಾದ ಭಾನುಪ್ರಕಾಶ್ ಎಂಟರ್ಪ್ರೈಸಸ್ ರವರ ಖಾತೆಗೆ ಹಣ  ಆರ್ಟಿಜಿಎಸ್ ಮಾಡಿ ಭ್ರಷ್ಟಾಚಾರ ಎಸಗಿದರು ಇದಕ್ಕೆ ಸಂಬಂಧಿಸಿದಂತೆ ತಾ ಪಂ ಇಓ ನರಸಿಂಹಮೂರ್ತಿ ಹಾಗೂ ಪಿಡಿಓ ಪಿ ರಾಘವೇಂದ್ರ ರವರ ಮೇಲೆ  ಹನುಮಂತನಹಳ್ಳಿ ರಮೇಶ್ ಲೋಕಾಯುಕ್ತದಲ್ಲಿ  ದೂರುದಾಖಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *